Uncategorized

ವೈರಲ್ ಪೋಸ್ಟ್: ಕಿರಿಯ ಸಹೋದರ ಜಿಮ್ಮಿ ಅವರೊಂದಿಗಿನ ಹಳೆಯ ಚಿತ್ರ ಹಂಚಿಕೊಂಡ ರತನ್ ಟಾಟಾ

ನ್ಯೂಸ್ ನಾಟೌಟ್ :  ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ತಮ್ಮ ಕಿರಿಯ ಸಹೋದರ ಜಿಮ್ಮಿ ಜೊತೆಗಿನ ಚಿತ್ರವನ್ನು ಇನ್ಟಾಗ್ರಾಮ್ ನಲ್ಲಿ “ಸಂತೋಷದ ಆ ಸುಂದರ ದಿನಗಳು” ಎಂಬ ಸುಂದರವಾದ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ತಮ್ಮ ಬಾಲ್ಯದ ಚಿತ್ರದೊಂದಿದೆ ರತನ್ ಟಾಟಾ ಅವರು ತಮ್ಮ ಸಹೋದರ ಜಿಮ್ಮಿ ಟಾಟಾ ಅವರೊಂದಿಗೆ ತಮ್ಮ ಸಾಕು ನಾಯಿ ಮತ್ತು ಸೈಕಲ್‌ನ ಜೊತೆಗೆ ಕಾಣಿಸಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ ರತನ್ ಟಾಟಾ ಉಲ್ಲೇಖಿಸಿದಂತೆ ಚಿತ್ರವು ಹಳೆಯ ನೆನಪಾಗಿದ್ದು 1945 ರ ಛಾಯಾಚಿತ್ರವಾಗಿದೆ.

https://www.instagram.com/p/CnOT8szsqKX/?utm_source=ig_embed&ig_rid=562f2427-25f1-418c-bb9a-2d5ce5826e02

ರತನ್ ಟಾಟಾ ಅವರು ನೇವಲ್ ಟಾಟಾ ಅವರ ಪುತ್ರರಾಗಿದ್ದರು, ಅವರನ್ನು ಟಾಟಾ ಸಮೂಹದ ಸಂಸ್ಥಾಪಕರಾದ ಜಮ್ಸೆಟ್ಜಿ ಟಾಟಾ (Jamsetji) ಅವರ ಪುತ್ರ ರತನ್ಜಿ ಟಾಟಾ ಅವರು ದತ್ತು ಪಡೆದಿದ್ದರು. ರತನ್ ಟಾಟಾ 1961 ರಲ್ಲಿ ಟಾಟಾ ಗ್ರೂಪ್ ಸೇರಿದ್ದರು ಮತ್ತು ನಂತರ ಟಾಟಾ ಸನ್ಸ್ ನ ಅಧ್ಯಕ್ಷರಾದರು. ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ಜೆಆರ್‌ಡಿ ಟಾಟಾ ನಿವೃತ್ತರಾಗುವವರೆಗೆ, ಅಂದರೆ 2012 ರವರೆಗೂ ಆ ಸ್ಥಾನವನ್ನು ನಿರ್ವಹಿಸಿದ್ದರು.

ಅವರ ಕಾಲದಲ್ಲಿ ಟಾಟಾ ಗ್ರೂಪ್ ನ ಐಷಾರಾಮಿ ಬ್ರಾಂಡ್‌ಗಳಾದ ಜಾಗ್ವಾರ್, ಲ್ಯಾಂಡ್ ರೋವರ್, ಟೆಟ್ಲಿ ಮತ್ತು ಕೋರಸ್ ಅನ್ನು ಸ್ವಾಧೀನಪಡಿಸಿಕೊಂಡು ಟಾಟಾ ಗ್ರೂಪ್ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿತ್ತು. ರತನ್ ಟಾಟಾ ಅವರ ಉದಾರತೆ, ಪರೋಪಕಾರ ಮತ್ತು ನಮ್ರತೆಗೆ ಹೆಸರುವಾಸಿಯಾಗಿದ್ದಾರೆ. ಅವರಿಗೆ 2008 ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣವನ್ನು ನೀಡಲಾಯಿತು.

Related posts

ಅಡುಗೆ ಅನಿಲದಲ್ಲಿ ಭಾರಿ ಏರಿಕೆ, ಪೆಟ್ರೋಲ್ , ಡೀಸೆಲ್ ರೇಟ್‌ ನಲ್ಲೂ ಶಾಕ್

ಹೋಟೆಲ್ ಫುಡ್ ಗಳ ದರ ಗಗನದೆತ್ತರಕ್ಕೆ ಏರಲಿದೆ..!

ವಿದ್ಯುತ್ ಕಂಬಕ್ಕೆ ಗುದ್ದಿದ ಶಾಲಾ ವಾಹನ..! ಬೈಕ್ ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅನಾಹುತ..!