Uncategorized

ಗ್ರಾಮಕ್ಕೆ ಬಂದ ಕಾಡನೆಗೆ ಬೆಂಕಿ ಹಚ್ಚಿದ ಜನ..! ಇಲ್ಲಿದೆ ಮನಕಲಕುವ ವಿಡಿಯೋ

ನ್ಯೂಸ್ ನಾಟೌಟ್ : ಪಶ್ಚಿಮ ಬಂಗಾಳದ ಝಾರ್ಗ್ರಾಮ್‌ನಲ್ಲಿ ಗ್ರಾಮಸ್ಥರು ಹೆಣ್ಣಾನೆಯೊಂದಕ್ಕೆ ಬೆಂಕಿ ಹಚ್ಚಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಆನೆಯು ಗರ್ಭ ಧರಿಸಿದೆ ಎಂಬ ಮಾಹಿತಿಯೂ ಹರಿದಾಡುತ್ತದೆ. ಬೆಂಕಿ ಜ್ವಾಲೆಯ ಸಮೀಪದ ಮನೆಯಿಂದ ಅದರ ಮೇಲೆ ಎಸೆಯುತ್ತಿದ್ದು, ಗಾಯಗೊಂಡ ಹೆಣ್ಣಾನೆ ನೋವಿನಿಂದ ಒದ್ದಾಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ತೀವ್ರ ಸುಟ್ಟ ಗಾಯಗಳಿಂದ ನರಳಿದೆ.

‘ಘಟನೆ ಕುರಿತಂತೆ ನಮಗೆ ಮಾಹಿತಿ ಸಿಕ್ಕಿದೆ. ವಿಡಿಯೊ ನೋಡಿದ್ದೇವೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಹಿರಿಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.
ನಟಿ ಶ್ರೀಲೇಖಾ ಮಿತ್ರಾ ಸಹ ಈ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ನಾವು ವಿನಾಶದತ್ತ ಹೋಗುತ್ತಿದ್ದೇವೆಯೇ? ಪ್ರಾಣಿಗಳ ಮೇಲಿನ ಇಂತಹ ಹಿಂಸಾಚಾರ ಮತ್ತು ಆಕ್ರಮಣವನ್ನು ನಾನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಮೈಸೂರಿನ ಈ ರಸ್ತೆಯಲ್ಲಿ ಆ್ಯಪಲ್ ಫೋನಿಗೆ ಕೇವಲ 700ರೂ..! ಕೈಗೆಟುವ ದರದಲ್ಲಿ ಸಿಗೋ ಐಫೋನಿಗಾಗಿ ಮುಗಿಬಿದ್ದ ಗ್ರಾಹಕರು..!;ಐಫೋನಿನ ಬೆಲೆ 60 ಸಾವಿರದಿಂದ 1.50 ಲಕ್ಷದವರೆಗಿದ್ದರೂ ಇಷ್ಟು ಕಡಿಮೆಗೆ ಸೇಲ್ ಆಗ್ತಿರೋದ್ಯಾಕೆ ಗೊತ್ತಾ?

ಅಂಗನವಾಡಿ ಕಾರ್ಯಕರ್ತೆಗೆ ಶಿಕ್ಷಕಿ ಸ್ಥಾನ, ಪ್ರಸ್ತಾವನೆ ಸಲ್ಲಿಕೆ

ಮುಖ ಮುಚ್ಚಿಕೊಂಡು ನ್ಯೂಸ್ ಓದಿ: ಉಗ್ರರ ಆದೇಶ