ವಿಡಿಯೋವೈರಲ್ ನ್ಯೂಸ್

ಡ್ರೈವರ್ ಸೀಟ್ನಲ್ಲಿ ಕುಳಿತ ಮಹಿಳೆ! ಬೇರೆ ಸೀಟ್ ನಲ್ಲಿ ಕುಳಿತು ಬಸ್ಸ್ ಓಡಿಸುವಂತೆ ಡ್ರೈವರ್ ಜೊತೆ ವಾದ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಈ ಘಟನೆ ತಮಾಷೆಯಂತೆ ಕಾಣಬಹುದು ಆದರೆ ಹಳ್ಳಿಯ ಮುಗ್ಧ ಜನರ ಬಗ್ಗೆ ಅನುಕಂಪ ಮೂಡುವುದಂತೂ ನಿಜ. ಹೌದು ಇಲ್ಲೊಬ್ಬ ಮಹಿಳೆ ಡ್ರೈವರ್ ಸೀಟ್ ನಲ್ಲಿ ಕುಳಿದು ಚಾಲಕನಿಗೆ ಬೇರೆ ಸೀಟಿನಲ್ಲಿ ಕುಳಿತುಕೊಂಡು ಬಸ್​ ಓಡಿಸುವಂತೆ ಎಚ್ಚರಿಕೆ ನೀಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಹಿಳೆಯ ವಾದವನ್ನು ಕೇಳಿದ ನೆಟ್ಟಿಗರು ನಕ್ಕು ನಕ್ಕು ತಮಾಷೆ ಮಾಡಿದ್ದಾರೆ.

ಆಸನದ ವಿಚಾರವಾಗಿ ಮಹಿಳೆ ಮತ್ತು ಬಸ್​ ಚಾಲಕನ ಮಧ್ಯೆ ವಾಗ್ವಾದ ಉಂಟಾಗಿದೆ. ಈ ವೇಳೆ ಅಲ್ಲೇ ಇದ್ದ ಇತರೆ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಶಿರೀಶ್ ಥೋರತ್ ಎನ್ನುವವರು ಅಪ್ಲೋಡ್ ಮಾಡಿದ್ದಾರೆ.

ವಿಡಿಯೋದಲ್ಲಿ ಬಸ್ಸಿನ ಚಾಲಕ ಸೀಟಿನಲ್ಲಿ ಮಹಿಳೆ ಕುಳಿತುಕೊಂಡಿರುವುದನ್ನು ನಾವು ನೋಡಬಹುದು. ಬಸ್​ನ್ನು ಟರ್ಮಿನಲ್​ ಬಳಿ ಚಾಲಕ ನಿಲ್ಲಿಸಿ ಹೋಗಿದ್ದಾನೆ. ಚಾಲಕ ಹಿಂತಿರುಗಿ ಬರುವುದರೊಳಗೆ ಮಹಿಳೆ ತನ್ನ ಸೀಟಿನಲ್ಲಿ ಕುಳಿತಿರುವುದನ್ನು ನೋಡಿ ಸೀಟ್​​ ಬಿಡುವಂತೆ ಚಾಲಕ ಕೇಳಿದ್ದಾನೆ. ಇದಕ್ಕೆ ಒಪ್ಪದ ಮಹಿಳೆ ಚಾಲಕನೊಂದಿಗೆ ವಾದಿಸಲು ಆರಂಭಿಸುತ್ತಾಳೆ. ಬಸ್ಸ್ ನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಅತ್ತೆ ಕೂಡ ವಾಗ್ವಾದಕ್ಕೆ ಇಳಿದಿದ್ದು, ಎರಡನೇ ಸೀಟಿನಲ್ಲಿ ಕುಳಿತಿರುವ ಅತ್ತೆ ಮತ್ತೊಂದು ಸೀಟಿನಿಂದ ಕುಳಿತು ಬಸ್ ಓಡಿಸುವಂತೆ ಚಾಲಕನಿಗೆ ಹೇಳುವುದನ್ನು ಕೇಳಬಹುದಾಗಿದೆ.

Related posts

ಮಡಿಕೇರಿ: ಅರಣ್ಯ ಸಿಬ್ಬಂದಿಯನ್ನು ಕೊಂದ ಕಾಡಾನೆ ಸೆರೆ, ಕಾಫಿ ತೋಟದೊಳಗಿದ್ದ ಪುಂಡಾನೆ ಸೆರೆ ಸಿಕ್ಕಿದ್ದು ಹೇಗೆ..? ವಿಡಿಯೋ ಇಲ್ಲಿದೆ ವೀಕ್ಷಿಸಿ

ಸರ್ಕಾರಿ ಶಾಲೆಯ ತರಗತಿಯಲ್ಲೇ ಬಿಯರ್ ಕುಡಿದು ಪಾರ್ಟಿ ಮಾಡಿದ ವಿದ್ಯಾರ್ಥಿನಿಯರು..! ತನಿಖೆಗೆ ಆದೇಶಿಸಿದ ಶಿಕ್ಷಣ ಇಲಾಖೆ

ದೇಶಕ್ಕೆ ಮಹಿಳಾ ಪ್ರಧಾನಿ..! ಲೋಕಸಭೆ ಚುನಾವಣೆಯಲ್ಲಿ ಮೋದಿ ಗೆಲ್ಲೋದಿಲ್ವಾ..? ನೊಣವಿನಕೆರೆ ಗುರೂಜಿ ಹೇಳಿದ ಭವಿಷ್ಯ ನಿಜವಾಗುತ್ತಾ..?