ಕರಾವಳಿ

ಹತ್ತಾರು ದೊಂದಿಯೊಂದಿಗೆ ಪ್ರತ್ಯಕ್ಷವಾದ ಪಂಜುರ್ಲಿ ದೈವ,ವಿಡಿಯೋ ವೈರಲ್

ನ್ಯೂಸ್ ನಾಟೌಟ್ :ಸದ್ಯ ಕಾರ್ಯಕ್ರಮ ಸೀಸನ್ .ಕರಾವಳಿಯಲ್ಲಿ ಕಾರ್ಯಕ್ರಮಗಳು ನಡಿತಾನೇ ಇದೆ.ಅದ್ರಲ್ಲೂ ಯಕ್ಷಗಾನ ಕರಾವಳಿಗರ ಫೇವರಿಟ್. ಹೀಗೆ ಯಕ್ಷಗಾನ ಮಾಡುತ್ತಿರುವ ವೇಳೆ ವ್ಯಕ್ತಿಯೊಬ್ಬ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದ ವಿಡಿಯೋವೊಂದು ಬಾರಿ ಮೆಚ್ಚುಗೆಗೆ ಪಾತ್ರವಾಗಿದೆ.ಯಕ್ಷಗಾನ ಪಾತ್ರಧಾರಿಗೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.ಅದರಲ್ಲೇನು ವಿಶೇಷ ಅನ್ನೋದಕ್ಕೆ ಇಲ್ಲಿದೆ ಡಿಟೇಲ್ಸ್..

ಉಡುಪಿಯ ಬ್ರಹ್ಮಾವರದ ಇಂದಿರಾನಗರದಲ್ಲಿ ಯಕ್ಷಗಾನ ಮೇಳವನ್ನು ಆಯೋಜನೆ ಮಾಡಲಾಗಿತ್ತು. ಯಕ್ಷಗಾನ ಸೇವೆಯಲ್ಲಿ ಹಟ್ಟಿಯಂಗಡಿ ಮೇಳ ನೀಡಿರುವ ಯಕ್ಷಗಾನ ಪ್ರದರ್ಶನದ ಸಂದರ್ಭ ಪಂಜರ್ಲಿ ದೈವದ ಪ್ರವೇಶದ ವೇಳೆಯಲ್ಲಿ ದೊಂದಿಗಳ ಬಳಕೆ ಮಾಡಿದ್ದು ಅದೀಗ ಬಾರಿ ವೈರಲ್ ಆಗಿದೆ.ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರತಿಕ್ರಿಯೆಯನ್ನೂ ಪಡೆದಿದೆ.

ಕೋಲದ ವೇಷದಲ್ಲಿ ವಿಭಿನ್ನವಾಗಿ ಹತ್ತಾರು ದೊಂದಿಗಳೊಂದಿಗೆ ರಂಗಸ್ಥಳಕ್ಕೆ ಬಂದ ವೇಷಧಾರಿ ಅವುಗಳನ್ನು ಸುಂದರವಾಗಿ ಬ್ಯಾಲೆನ್ಸ್‌ ಮಾಡಿಕೊಂಡು ನರ್ತಿಸಿದ್ದು ವಿಶೇಷವೆಂಬಂತಿದೆ.ಸದ್ಯ ಈ ವಿಡಿಯೋ ಕರಾವಳಿಯಾದ್ಯಂತ ಭಾರಿ ವೈರಲ್ ಆಗಿದೆ.

Related posts

ಕಡಬ: ರೆಂಜಿಲಾಡಿಯಲ್ಲಿ ಇಬ್ಬರ ಸಾವಿಗೆ ಕಾರಣವಾಗಿ ಸೆರೆಸಿಕ್ಕಿದ್ದ ಕಾಡಾನೆ ಹಠಾತ್‌ ಸಾವು..! ಕೊಡಗಿನ ಮತ್ತಿಗೋಡು ಆನೆ ಶಿಬಿರದಲ್ಲಿ ಕೊನೆಯುಸಿರೆಳೆದದ್ದು ಹೇಗೆ..?

ಬಸ್‌ ನಿಲ್ಲಿಸದ್ದಕ್ಕೆ ಬಸ್ ಗಾಜನ್ನೇ ಪುಡಿ ಮಾಡಿದ ಕಿಡಿಗೇಡಿ

ಕಡಿದು ಹಾಕಿದ್ದ ಬಾಳೆ ದಿಂಡಿನಲ್ಲಿ ಬಾಳೆಗೊನೆ, ಪ್ರಕೃತಿ ವಿಸ್ಮಯಕ್ಕೆ ನಿಬ್ಬೆರಗಾದ್ರು ಜನ!