ದೇಶ-ಪ್ರಪಂಚ

ತರಕಾರಿ ಮಾರಾಟ ಮಾಡುವ ವ್ಯಕ್ತಿ ಖಾತೆಗೆ ಬಂದು ಬಿತ್ತು ಕೋಟಿ ಕೋಟಿ ಹಣ..! ಅಷ್ಟೊಂದು ಹಣ ಬಂದಿದ್ದಾರೂ ಎಲ್ಲಿಂದ? ಮುಂದೇನಾಯ್ತು ಗೊತ್ತಾ?

ನ್ಯೂಸ್ ನಾಟೌಟ್ : ಉತ್ತರ ಪ್ರದೇಶದಲ್ಲಿ (Uttar Pradesh) ವ್ಯಕ್ತಿಯೊಬ್ಬರ ಖಾತೆಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 172 ಕೋಟಿ ರೂಪಾಯಿ (Viral News) ಜಮೆಯಾಗಿದ್ದು ಅಚ್ಚರಿಯನ್ನುಂಟು ಮಾಡಿದೆ. ತರಕಾರಿ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದಾತನಿಗೆ ಅದೃಷ್ಟಲಕ್ಷ್ಮೀ ಒಲಿದಿದ್ದಾಳೆ.

ಉತ್ತರ ಪ್ರದೇಶದ ಘಾಜಿಯಾಬಾದ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವಿನೋದ್‌ ರಸ್ತೋಗಿ ಎಂಬ ವ್ಯಕ್ತಿ ಈ ಅದೃಷ್ಟದ ಬಾಗಿಲನ್ನು ತೆರೆದವರು.ಇವರ ಬ್ಯಾಂಕ್‌ ಖಾತೆಗೆ 172 ಕೋಟಿ, 81 ಲಕ್ಷದ 59 ಸಾವಿರ ರೂ. ಜಮೆಯಾಗಿದೆ. ಇಷ್ಟು ದುಡ್ಡು ಜಮೆಯಾದರೂ ವಿನೋದ್‌ ರಸ್ತೋಗಿ ಅವರಿಗೆ ಗೊತ್ತೇ ಆಗಿಲ್ಲವಂತೆ..! ಈ ಎಲ್ಲಾ ಬೆಳವಣಿಗಳಾಗಿ ಕೆಲ ದಿನಗಳ ನಂತರ ಆದಾಯ ತೆರಿಗೆ ಇಲಾಖೆ (Income Tax Department) ಅಧಿಕಾರಿಗಳು ನೋಟಿಸ್‌ ಹಿಡಿದುಕೊಂಡು ಅವರ ಮನೆಗೆ ಬಂದಾಗಲೇ ಗೊತ್ತಾಗಿರೋದು. ಅವರ ಅಕೌಂಟ್‌ ನಲ್ಲಿ ಅಷ್ಟೊಂದು ಹಣ ಇದೆಯೆಂದು.

ಬ್ಯಾಂಕ್‌ ಖಾತೆಗೆ 172 ಕೋಟಿ ರೂ. ಜಮೆಯಾದ ಕಾರಣ ಸಹಜವಾಗಿಯೇ ವಿನೋದ್‌ ರಸ್ತೋಗಿ ಅವರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಆದರೆ, ತಮಗೆ ಗೊತ್ತೇ ಇಲ್ಲದೆ, ತಾವು ಬ್ಯಾಂಕ್‌ ಖಾತೆ ತೆರೆಯದೆ ಇರುವ ಖಾತೆಗೆ ನೂರಾರು ಕೋಟಿ ರೂ. ಜಮೆಯಾಗಿರುವ ಹಿನ್ನೆಲೆಯಲ್ಲಿ ವಿನೋದ್‌ ರಸ್ತೋಗಿ ಅವರು ಸ್ಥಳೀಯ ಪೊಲೀಸ್‌ ಅಧಿಕಾರಿಗಳ ಸಹಾಯ ಕೋರಿದ್ದಾರೆ. “ಇದು ನನ್ನ ಹಣ ಅಲ್ಲ. ಯಾರೋ ನಕಲಿ ದಾಖಲೆ ಸೃಷ್ಟಿಸಿ, ನನ್ನ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದಿದ್ದಾರೆ” ಎಂದು ಅವರು ಪೊಲೀಸರಿಗೆ ಮನವರಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಹಾಗಾದರೆ ಅಷ್ಟೊಂದು ಹಣ ಬಂದಿದ್ದಾದರೂ ಎಲ್ಲಿಂದ , ಯಾತಕ್ಕಾಗಿ ಬಂತು ? ಎನ್ನುವ ಪ್ರಶ್ನೆಗಳು ಎದ್ದಿದ್ದು, ಸದ್ಯಕ್ಕೆ ಅದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪ್ರಾಥಮಿಕ ತನಿಖೆ ಪ್ರಕಾರ, ಚೆಕ್‌ ಮೂಲಕ ವಿನೋದ್‌ ರಸ್ತೋಗಿ ಅವರ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗಿದೆ ಎಂದು ತಿಳಿದುಬಂದಿದೆ.

ಬ್ಯಾಂಕ್‌ ಖಾತೆಗೆ ಅನಾಮಧೇಯ ವ್ಯಕ್ತಿಗಳಿಂದ ಹಣ ಜಮೆಯಾಗಿರುವ ಕುರಿತು ದೂರು ನೀಡಲು ವಿನೋದ್‌ ರಸ್ತೋಗಿ ಅವರು ಬಂದಿದ್ದರು. ಅವರನ್ನು ಸೈಬರ್‌ ಸೆಲ್‌ಗೆ ಕಳುಹಿಸಲಾಗಿದೆ. ತನಿಖೆಯ ಬಳಿಕ ಬ್ಯಾಂಕ್‌ ಖಾತೆಗೆ ಹಣ ಹೇಗೆ ಬಂತು, ಯಾರಿಂದ ಹಣ ಜಮೆಯಾಯಿತು ಎಂಬುದು ತಿಳಿಯಲಿದೆ ಎಂದು ಕೊತ್ವಾಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಪವನ್‌ ಕುಮಾರ್‌ ಮಾಹಿತಿ ನೀಡಿದರು.

Related posts

ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ! ಆಕೆ ತಪ್ಪಿಸಿಕೊಂಡದ್ದೇ ರೋಚಕ!

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದವನೊಂದಿಗೆ ಆಕೆ ಪರಾರಿ..! ಯುವತಿಯ ಶವ ಲಗೇಜ್​​ ಬ್ಯಾಗ್ ​​ನಲ್ಲಿ ಪತ್ತೆ..!

ರಷ್ಯಾ ಯುದ್ಧ ಭೂಮಿಯಲ್ಲಿ ಕೇರಳದ ವ್ಯಕ್ತಿ ಸಾವು ಪ್ರಕರಣ..! ಯುವಕರನ್ನು ವಂಚಿಸಿ ರಷ್ಯಾಕ್ಕೆ ಕರೆದೊಯ್ಯಲು ಸಹಾಯ ಮಾಡಿದ್ದ ಮೂವರ ಬಂಧನ..!