ದೇಶ-ಪ್ರಪಂಚವೈರಲ್ ನ್ಯೂಸ್

ಅಪ್ಪನ ಮೇಲೆ ಸಿಟ್ಟಾಗಿ ಹೈಟೆನ್ಷನ್‌ ವಿದ್ಯುತ್‌ ಕಂಬವೇರಿದ ಮಗ..! ಇಲ್ಲಿದೆ ಕುಡುಕ ಮಗನ ಫಜೀತಿ!

ನ್ಯೂಸ್‌ ನಾಟೌಟ್‌:  ಉತ್ತರ ಪ್ರದೇಶದಲ್ಲಿ ಸೋಮವಾರ ಇಲ್ಲೊಬ್ಬ ಮಗ ಅಪ್ಪ ಹಣ ನೀಡಿಲ್ಲ ಎಂದು ಸಿಟ್ಟಿನಲ್ಲಿ ಹೈಟೆನ್ಷನ್‌ ವೈಯರ್‌ ಗಳಿರುವ ವಿದ್ಯುತ್‌ ಕಂಬಕ್ಕೇರಿದ್ದಾನೆ.!

ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಕತಿ ಖೇಡಾ ಗ್ರಾಮದಲ್ಲಿ ಮಗನೊಬ್ಬ ತನಗೆ ಮದ್ಯ ಕುಡಿಯಲು ಹಣಬೇಕೆಂದು ತನ್ನ ತಂದೆಯ ಬಳಿ ಕೇಳಿದ್ದಾನೆ. 1500 ರೂ. ನೀಡಿಯೆಂದು ಮಗ ತಂದೆಯ ಬಳಿ ಕೇಳಿದ್ದಕ್ಕೆ,, ತಂದೆ ಯಾವುದೇ ಕಾರಣಕ್ಕೂ ಹಣ ನೀಡಲ್ಲ ಎಂದಿದ್ದಾರೆ.

ಸಿಟ್ಟಾದ ಮಗ ಮನೆಯ ಪಕ್ಕದಲ್ಲಿರುವ  ಹೈಟೆನ್ಷನ್‌ ವಿದ್ಯುತ್‌ ಕಂಬಕ್ಕೇರಿ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆಯನ್ನು ಹಾಕಿದ್ದಾನೆ. ಈತನ ಈ ವರ್ತನೆ ಕುರಿತು ಗ್ರಾಮಸ್ಥರೆಲ್ಲ ಭೀತಿಗೆ ಒಳಗಾಗಿದ್ದಾರೆ ಎಂದು ವರದಿ ತಿಳಿಸಿದೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ತಲುಪಿ ಯುವಕನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಿನ ಅಪಾಯ ಸಂಭವಿಸದಿರಲು ವಿದ್ಯುತ್‌ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

Related posts

ಫಸ್ಟ್​​ ನೈಟ್​​​ನಲ್ಲೂ ಕಂಪ್ಯೂಟರ್​​ ಮುಂದೆ ಕುಳಿತದ್ದೇಕೆ ಮದುಮಗ? ಏನಿದು ವೈರಲ್ ಪೋಸ್ಟ್? ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆ ವಿವಾದವಾಗುತ್ತಿರುವುದೇಕೆ?

2 ಮಕ್ಕಳ ತಾಯಿಯೊಂದಿಗೆ ಪ್ರೀತಿ, ಪ್ರಿಯಕರ ಆತ್ಮಹತ್ಯೆ..! ಆತನ ಶವ ನೋಡಿ ಬಂದ ಆಕೆಯೂ ನೇಣಿಗೆ ಶರಣು..!

ಹಕ್ಕಿಜ್ವರದ ಆತಂಕ, ಭಾರತದಲ್ಲಿ ಮನುಷ್ಯರಿಗೂ ಹರಡುವ ಭೀತಿ, ಏನಂದ್ರು ಆರೋಗ್ಯ ತಜ್ಞರು?