ದೇಶ-ಪ್ರಪಂಚವೈರಲ್ ನ್ಯೂಸ್

ಶ್ವಾನ ನೋಡಿಕೊಳ್ಳಲು ಜನ ಬೇಕಾಗಿದ್ದಾರೆ!,ಸಂಬಳ ಒಂದು ಕೋಟಿ ರೂಪಾಯಿ!

ನ್ಯೂಸ್ ನಾಟೌಟ್ :ಕೆಲವರಿಗೆ ಶ್ವಾನಗಳೆಂದರೆ ಪ್ರಾಣ.ಹೀಗಾಗಿ ಮನೆಯಲ್ಲಿರುವ ನಾಯಿಗೆ ದುಬಾರಿ ಖರ್ಚು ಮಾಡುವವರು ಇದ್ದಾರೆ.ಆದರೆ ಇಲ್ಲೊಬ್ಬರು ನಾಯಿ ನೋಡಿಕೊಳ್ಳುವುದಕ್ಕೆ ಸಂಬಳ ಫಿಕ್ಸ್ ಮಾಡಿದ್ದಾರೆ.ಅದನ್ನು ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ!.

ಸಾಮಾನ್ಯವಾಗಿ ನಾವು ಡಾಕ್ಟರ್ಸ್,ಇಂಜಿನಿಯರ್ ಹೀಗೆ ಅವರ ಸಂಬಳ ಹೆಚ್ಚು ಇರುತ್ತೆ ಅಂತ ಭಾವಿಸ್ತೀವಿ.ಆದರೆ ಇಲ್ಲಿ ನಾಯಿ ನೋಡಿ ಕೊಳ್ಳುವವರ ಸಂಬಳವೂ ಅವರ ಸಂಬಳಕ್ಕೇನು ಕಡಿಮೆ ಇಲ್ಲ.ನಿಜ,ಈ ಮಾತನ್ನು ನೀವು ನಂಬಲೇಬೇಕು. ಲಂಡನ್‌ನಲ್ಲಿ ಕೋಟ್ಯಧಿಪತಿಗಳೊಬ್ಬರು ತಮ್ಮ ಮನೆಯ ನಾಯಿ ನೋಡಿಕೊಂಡು ಇರುವವರಿಗೆ ವರ್ಷಕ್ಕೆ ಒಂದು ಕೋಟಿ ರೂಪಾಯಿ ಸಂಬಳ ಕೊಡುವುದಾಗಿ (Viral News) ಹೇಳಿದ್ದಾರೆ!.

ಈ ರೀತಿಯ ಜಾಹೀರಾತನ್ನು ಫೈರ್‌ಫಾಕ್ಸ್‌ ಆಂಡ್‌ ಕೆನ್ಸಿಂಗ್ಟನ್‌ ನೇಮಕಾತಿ ಏಜೆನ್ಸಿಯಿಂದ ಕೊಡಲಾಗಿದೆ. ಕೋಟ್ಯಧಿಪತಿಗಳಿಗೆ ತಮ್ಮ ಮನೆಯ ಎರಡು ನಾಯಿಗಳನ್ನು ನೋಡಿಕೊಳ್ಳುವುದಕ್ಕೆ ಅನುಭವವುಳ್ಳ ವ್ಯಕ್ತಿ ಬೇಕಂತೆ!,ಆಯ್ಕೆಯಾಗುವ ವ್ಯಕ್ತಿ ಲಂಡನ್‌ನಲ್ಲಿರುವ ತಮ್ಮ ಮನೆಯಲ್ಲಿ ನಾಯಿಗಳನ್ನು ನೋಡಿಕೊಳ್ಳುವ ಕೆಲಸವಿರುತ್ತೆ.

ಮನೆಯಲ್ಲಿರುವ ಶ್ವಾನಗಳನ್ನು ಬೇರೆ ನಾಯಿಗಳೊಂದಿಗೆ ಆಟವಾಡುವುದಕ್ಕೆ ಯಾವ ಸಮಯದಲ್ಲಿ ಕರೆದುಕೊಂಡು ಹೋಗಬೇಕು ಎನ್ನುವುದನ್ನು ತಿಳಿಸಲಾಗಿದೆ. ಯಾವ ರೀತಿಯ ಆಹಾರ ಕೊಡಬೇಕು ಎನ್ನುವ ಬಗೆಗಿನ ವಿವರವೂ ಅವರಲ್ಲಿರಬೇಕು. ಈ ಬಗೆಗಿನ ಎಲ್ಲ ನಿರ್ಧಾರ ತೆಗೆದುಕೊಳ್ಳುವಂತಿರಬೇಕು.ನಾಯಿಯ ಆರೈಕೆ ಬಗ್ಗೆ ಸದಾ ಗಮನ ವಹಿಸಬೇಕು.ಒಂದು ವೇಳೆ ಮನೆಯವರು ನಾಯಿಯೊಂದಿಗೆ ಪ್ರವಾಸಕ್ಕೆ ಹೊರಟಾಗ ನಾಯಿಯೊಂದಿಗೆ ತಾವೂ ಹೋಗಿ ಅದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವಂತಿರಬೇಕು ಎನ್ನುವ ನಿಯಮಗಳನ್ನು ಹಾಕಲಾಗಿದೆ.

ಈ ರೀತಿಯ ಜಾಹಿರಾತು ನೋಡಿ ೨೦೦ ಅರ್ಜಿಗಳು ಬಂದಿದ್ದವು ಎನ್ನಲಾಗಿದೆ.ಆದರೆ ಮಾಧ್ಯಮದವರು ಈ ವಿಶೇಷ ಜಾಹಿರಾತನ್ನು ನ್ಯೂಸ್ ಮಾಡಲು ಹೊರಟಿದ್ದು,ಬಳಿಕ ೨೦೦೦ ಅರ್ಜಿಗಳು ಬಂದಿದ್ದಾವಂತೆ!ಅಂದ ಹಾಗೆ ಈ ತಿಂಗಳ ಕೊನೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಜಾಹಿರಾತು ನೀಡಿರುವ ನೇಮಕಾತಿ ಸಂಸ್ಥೆ ಹೇಳಿಕೊಂಡಿದೆ. ಆದರೆ ಈ ರೀತಿ ಯಾರು ಜಾಹೀರಾತು ಕೊಟ್ಟಿದ್ದಾರೆ ಎನ್ನುವ ಬಗ್ಗೆ ಸಂಸ್ಥೆ ಮಾಹಿತಿಯನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ.

https://www.youtube.com/watch?v=hnkiiNe0x6M&t=19s

Related posts

ಇಸ್ರೊದಿಂದ ಇಒಎಸ್–04 ಸೇರಿ ಮೂರು ಉಪಗ್ರಹಗಳ ಯಶಸ್ವಿ ಉಡಾವಣೆ

7 ಮಂಗಗಳನ್ನು ಕೊಂದು ಮೂಟೆ ಕಟ್ಟಿ ಎಸೆದದ್ಯಾರು..? ರಸ್ತೆ ಬದಿ ಬಿದ್ದಿದ್ದ ಚೀಲಗಳನ್ನು ನೋಡಿ ಸ್ಥಳೀಯರು ಮಾಡಿದ್ದೇನು? ಮುಂದೇನಾಯ್ತು..?

Meloni-Modi: ಪ್ರಧಾನಿ ಮೋದಿಗೆ ಶುಭ ಹಾರೈಸಿದ ಇಟಲಿ ಪ್ರಧಾನಿ ಮೆಲೋನಿ, ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ ‘ಮೆಲೋಡಿ’