ದೇಶ-ವಿದೇಶರಾಜಕೀಯ

ಚುನಾವಣಾ ಕುಸ್ತಿಯಲ್ಲಿ ಗೆದ್ದ ಕುಸ್ತಿ ಪಟು, ವಿನೇಶ್‌ ಫೋಗಟ್‌ ಗೆ 5 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ

ನ್ಯೂಸ್ ನಾಟೌಟ್: ಹರಿಯಾಣ ಚುನಾವಣೆಯಲ್ಲಿ ಜೂಲಾನಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಕುಸ್ತಿ ಪಟು ವಿನೇಶ್‌ ಫೋಗಟ್‌ 5 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಯೋಗೇಶ್‌ ಕುಮಾರ್‌ ಮತ್ತು ವಿನೇಶ್‌ ಫೋಗಟ್‌ ಮಧ್ಯೆ ಪೈಪೋಟಿ ಇತ್ತು. ಆರಂಭದ ಮತ ಎಣಿಕೆಯಲ್ಲಿ ವಿನೇಶ್‌ ಫೋಗಟ್‌ ಅವರಿಗೆ ಮುನ್ನಡೆ ಸಿಕ್ಕಿದರೆ ನಂತರ ಯೋಗೇಶ್‌ ಕುಮಾರ್‌ ಅವರಿಗೆ ಮುನ್ನಡೆ ಸಿಕ್ಕಿತ್ತು. ಅಂತಿಮ ಸುತ್ತುಗಳ ಮತ ಎಣಿಕೆಯಲ್ಲಿ ಕಾಂಗ್ರೆಸ್‌ ಹೆಚ್ಚು ಮತಗಳು ಬಿದ್ದ ಪರಿಣಾಮ ವಿನೇಶ್‌ ಫೋಗಟ್‌ ಮೊದಲ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ.

ಹರಿಯಾಣ ಚುನಾವಣೆಯಲ್ಲಿ ಕಿಸಾನ್‌, ಜವಾನ್‌, ಪೈಲ್ವಾನ್‌ ಘೋಷ ವಾಕ್ಯವನ್ನು ಇಟ್ಟುಕೊಂಡು ಕಾಂಗ್ರೆಸ್‌ ಚುನಾವಣೆ ಎದುರಿಸಿತ್ತು.

Related posts

ಬಿ.ಎಸ್ ಯಡಿಯೂರಪ್ಪ ಸಂಬಂಧಿ ಕಾಂಗ್ರೆಸ್​ಗೆ ಸೇರಿದ್ರಾ..? ಬಿಜೆಪಿಗೆ ಬಿಸಿ ತುಪ್ಪವಾದ್ರಾ ಜಗದೀಶ್ ಶೆಟ್ಟರ್? ಏನಿದು ಆಪರೇನ್ ಹಸ್ತ ಹೊಸ ಬೆಳವಣಿಗೆ?

ಮಂಗಳೂರು: ಬ್ಯಾಂಕ್ ದರೋಡೆಯಲ್ಲಿ ಸಹಕಾರ ನೀಡಿದ್ದ ಸ್ಥಳೀಯರಿಗೆ ರಾಜಕೀಯ ಬೆಂಬಲ..? ಶಾಸಕ ಭರತ್ ಶೆಟ್ಟಿ ಗಂಭೀರ ಆರೋಪ..!

ಸ್ವಪಕ್ಷೀಯರ ವಿರುದ್ಧವೇ ದೂರಲು ದೆಹಲಿಗೆ ಹೋಗ್ತಾರಾ ಬಸನಗೌಡ ಪಾಟೀಲ್..! ಯತ್ನಾಳ್ ಜೊತೆ ಇನ್ನೂ ಎಷ್ಟು ಶಾಸಕರಿದ್ದಾರೆ ಗೊತ್ತಾ..?