ಕರಾವಳಿಕೊಡಗು

ವಿಚಾರವಾದಿ ಕೆ.ಎಸ್‌. ಭಗವಾನ್‌ ಅಟ್ಟಿಸಿಕೊಂಡು ಬಂದ ಕಾಡಾನೆ,ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರು

ನ್ಯೂಸ್ ನಾಟೌಟ್ : ಬಿಳಿಗಿರಿ ರಂಗನ ಬೆಟ್ಟದ ಕೆ.ಗುಡಿ ವಲಯದಲ್ಲಿ ವಿಚಾರವಾದಿ ಕೆ.ಎಸ್‌. ಭಗವಾನ್‌ (Rationalist KS Bhagavan) ಸಫಾರಿಯಲ್ಲಿ ತೊಡಗಿದ್ದರು.ಈ ವೇಳೆ ಆನೆಯೊಂದು ಅಟ್ಟಿಸಿಕೊಂಡು ಬಂದಿದ್ದು,ಸ್ವಲ್ಪದರಲ್ಲೇ ಬಚಾವಾದ ರೋಚಕ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಆನೆ ಸಫಾರಿಯಲ್ಲಿ ಕೆ.ಎಸ್‌. ಭಗವಾನ್‌ ಸೇರಿದಂತೆ ಇನ್ನಿತರರು ಜೀಪ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಹಿಂಬದಿ ಸೀಟ್‌ನಲ್ಲಿದ್ದ ಒಬ್ಬರು ವಿಡಿಯೊ ಮಾಡಿಕೊಳ್ಳುತ್ತಿದ್ದರು.ಹೀಗೆ ಮುಂದೆ ಸಾಗುತ್ತಿದ್ದಂತೆ ಅವರಿಗೆ ರಸ್ತೆಯ ಮುಂದೆ ಅನತಿ ದೂರದಲ್ಲಿ ಆನೆಗಳ ಹಿಂಡು ಕಂಡಿದೆ. ಈ ವೇಳೆ ಜೀಪ್‌ ಚಾಲಕ ಸಹ ವೇಗವನ್ನು ನಿಧಾನ ಮಾಡಿದ್ದಾನೆ. ಆನೆಗಳ ಹಿಂಡನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಾ ಇರುವಾಗಲೇ ಆನೆಯೊಂದು ಸಫಾರಿ ವಾಹನದತ್ತ ನುಗ್ಗಿದ ಘಟನೆ ವರದಿಯಾಗಿದೆ.

ಆನೆ ಬರುತ್ತಿದ್ದಂತೆ ಚಾಲಕ ಸಮಯಪ್ರಜ್ಞೆ ಮೆರೆದಿದ್ದಾನೆ.ತಕ್ಷಣವೇ ವಾಹನವನ್ನು ಹಿಮ್ಮುಖವಾಗಿ ಚಲಾಯಿಸಿದ್ದಾರೆ. ಒಂದಷ್ಟು ದೂರ ವಾಹನವನ್ನು ಅಟ್ಟಿಸಿಕೊಂಡು ಬಂದ ಆನೆ ನಂತರ ಮಧ್ಯದಲ್ಲಿ ನಿಂತಿತು.ಆನೆಗಳ ಹಿಂಡು ರಸ್ತೆಯಲ್ಲಿದ್ದಾಗ ಏಕಾಏಕಿ ವಾಹನವನ್ನು ನೋಡಿ ಆನೆಯು ಗಾಬರಿಯಾಗಲು ಕಾರಣವೂ ಇದೆ ಎನ್ನಲಾಗಿದೆ. ಕಾರಣ ಆ ಹಿಂಡಿನಲ್ಲಿ ಮರಿ ಆನೆಗಳೂ ಇದ್ದವು ಎಂದು ತಿಳಿದು ಬಂದಿದೆ. ಅವುಗಳಿಗೆ ಅಪಾಯವಾದರೆ ಎಂಬ ಆತಂಕದಿಂದ ಈ ಆನೆಯು ದಾಳಿ ಮಾಡಿರಬಹುದು ಎಂದು ಊಹಿಸಲಾಗಿದೆ.

Related posts

ಮಂಗಳೂರು: ವಾಟ್ಸ್‌ ಆ್ಯಪ್ ಸಂದೇಶ ನಂಬಿ 1 ಕೋಟಿ ರೂ.ಗೂ ಅಧಿಕ ಹಣ ಹೂಡಿಕೆ ಮಾಡಿದ ವ್ಯಕ್ತಿ..! ಹಣ ಹಿಂಪಡೆಯಲಾಗದೆ ಪೊಲೀಸರಿಗೆ ದೂರು..!

ವರದಿಗೆ ತಕ್ಷಣ ಸ್ಪಂದಿಸಿದ ಸಂಪಾಜೆ ಗ್ರಾಮ ಪಂಚಾಯತ್

ಸುಳ್ಯ ಸೇರಿದಂತೆ ತಾಲೂಕಿನ ಮದ್ಯ ಪ್ರಿಯರ ಜೇಬಿಗೇ ಕತ್ತರಿ..! 1 ಕ್ವಾಟರ್ ಕೊಂಡ್ರೆ 30 ರಿಂದ 40 ರೂ.  ಹೆಚ್ಚುವರಿ ಪೀಕಿಸುವ ವೈನ್ ಶಾಪ್ ಗಳು..!