ದೇಶ-ವಿದೇಶರಾಜಕೀಯವೈರಲ್ ನ್ಯೂಸ್

ವಾರಾಣಾಸಿಯಲ್ಲಿ ಪ್ರಧಾನಿ ಮೋದಿಗೆ 3ನೇ ಭಾರಿಯ ಗೆಲುವು, 6,12,970 ಮತ ಪಡೆದ ಮೋದಿ

ನ್ಯೂಸ್ ನಾಟೌಟ್: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ 1,52,513 ಮತಗಳ ಅಂತರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 2014 ಹಾಗೂ 2019ರಲ್ಲಿ ಈ ಕ್ಷೇತ್ರದಲ್ಲಿ ಗೆದ್ದು ಪ್ರಧಾನಿಯಾಗಿದ್ದ ಮೋದಿ ಈ ಬಾರಿ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಮೋದಿಗೆ 6,12,970 ಮತ, ಅಜಯ್ ರೈಗೆ 4,60,457 ಮತಗಳು ಲಭಿಸಿವೆ. ಪ್ರಧಾನಿ ಮೋದಿ 2014ರ ಚುನಾವಣೆಯಲ್ಲಿ ಮೊಟ್ಟಮೊದಲ ಬಾರಿಗೆ ವಾರಾಣಸಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಭಾರಿ ಅಂತರದಿಂದ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದರು. ವಾರಣಾಸಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 5 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಬಿಜೆಪಿ ಮೈತ್ರಿಕೂಟ ಐದೂ ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು.

Click 👇

https://newsnotout.com/2024/06/election-padmaraj-and-brijish-kannada-news
https://newsnotout.com/2024/06/pradeep-eshwar-and-resignation-after-defeated
https://newsnotout.com/2024/06/election-and-tv-court-issued-notice
https://newsnotout.com/2024/06/strong-room-key-kannada-news-vijayapura

Related posts

150 ಅಡಿ ಆಳದ ಕೊಳವೆ ಬಾವಿಯಲ್ಲಿ 57 ಗಂಟೆಗಳ ಕಾಲ ಸಿಲುಕಿದ್ದ ಐದು ವರ್ಷದ ಬಾಲಕ..! ಮಗು ಸಾವನ್ನಪ್ಪಿರುವುದಾಗಿ ಘೋಷಿಸಿದ ವೈದ್ಯರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ವೋಟ್ ಕಮ್ಮಿ ಆಗುವ ಆತಂಕ..!, ಮಂಗಳೂರಿನಲ್ಲಿ ಇಂದು ರಾತ್ರಿ ಬಿ.ಎಲ್. ಸಂತೋಷ್ ಸಭೆ

ಬಿಗ್‌ ಬಾಸ್‌ ಮನೆಯಿಂದ 24 ಗಂಟೆಯೊಳಗೆ ನಟಿ ‘ಎಲಿಮಿನೇಟ್’..!ವಿಜಯ್‌ ಸೇತುಪತಿಯ ʼಮಹಾರಾಜʼ ಸಿನಿಮಾದಲ್ಲಿ ಮಗಳ ಪಾತ್ರದಲ್ಲಿ ನಟಿಸಿದ್ದ ನಟಿ..! ಇಲ್ಲಿದೆ ವಿಡಿಯೋ