Uncategorized

ವರವ ಕೊಡು ಮಹಾಲಕ್ಷ್ಮೀ..ಎಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ, ಸಡಗರ

ಬೆಂಗಳೂರು: ಉದ್ಯಾನನಗರಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಶುಕ್ರವಾರ ವರ ಮಹಾಲಕ್ಷ್ಮೀ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಶ್ರಾವಣ ಮಾಸ ಶುಕ್ಲ ಪಕ್ಷದಲ್ಲಿ ಮಾಡುವ ವರಮಹಾಲಕ್ಷ್ಮೀ ಪೂಜೆಗೆ ಅದರದ್ದೇ ಆದ ಮಹತ್ವವಿದೆ. ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವ ಸಲುವಾಗಿ ಶುಕ್ರವಾರದಂದು ಕೈಗೊಳ್ಳುವ ವರಮಹಾಲಕ್ಷ್ಮೀ ವ್ರತದಿಂದ ಮನೆಯಲ್ಲಿ ಧನ ಸಮೃದ್ಧಿ ಜೊತೆಗೆ ನೆಮ್ಮದಿ, ಸುಖಶಾಂತಿಯೂ ನೆಲೆಸುತ್ತದೆ ಅನ್ನುವ ನಂಬಿಕೆ ಹಿರಿಯರದ್ದಾಗಿದೆ.

ವರಮಹಾಲಕ್ಷ್ಮೀ ಪೂಜೆ ಫಲಗಳೇನು?

ಶ್ರದ್ಧೆ ಹಾಗೂ ಭಕ್ತಿಯಿಂದ ವರಮಹಾಲಕ್ಷ್ಮೀ ವ್ರತವನ್ನು ಕೈಗೊಂಡರೆ ಆರೋಗ್ಯ, ಸಂಪತ್ತು, ಸಂತೋಷ, ದೀರ್ಘಾಯಸ್ಸು, ಘನತೆ, ಯಶಸ್ಸುಗಳನ್ನು ಗಳಿಸಲು ಸಾಧ್ಯವಾಗುತ್ತದೆ. ವರಮಹಾಲಕ್ಷ್ಮೀ ವ್ರತವನ್ನು ಮಾಡುವುದೆಂದರೆ ಅಷ್ಟ ಲಕ್ಷ್ಮೀಯರ ಆರಾಧನೆ ಮಾಡಿದಂತೆ ಎಂದು ಹೇಳಲಾಗುತ್ತದೆ. ದೇವಿ ವರಲಕ್ಷ್ಮೀಯು ಮಹಾಲಕ್ಷ್ಮೀಯ ಒಂದು ರೂಪವಾಗಿದ್ದು, ಈಕೆ ಕ್ಷೀರಸಾಗರದಿಂದ ಎದ್ದು ಬಂದವಳೂ, ಬಣ್ಣ ಬಣ್ಣದ ವಸ್ತ್ರಗಳಿಂದ ಸುಂದರವಾಗಿ ಅಲಂಕೃತವಾಗಿರುವವಳು ಆಗಿದ್ದಾಳೆ ಅನ್ನುವ ನಂಬಿಕೆ ಭಕ್ತರದ್ದಾಗಿದೆ.

ವರಮಹಾಲಕ್ಷ್ಮೀ ಹಬ್ಬ ಆರಂಭವಾಗಿದ್ದು ಹೇಗೆ?

ಚಾರುಮತಿ ಎಂಬ ಮಹಿಳೆಯೊಬ್ಬರು ಲಕ್ಷ್ಮೀಯ ಭಕ್ತೆಯಾಗಿದ್ದಳು. ಈಕೆ ಪ್ರತಿ ಶುಕ್ರವಾರವೂ ತಪ್ಪದೇ ಲಕ್ಷ್ಮೀ ಪೂಜೆ ಮಾಡುತ್ತಿದ್ದಳು. ಹೀಗೆ ಒಂದು ದಿನ ಲಕ್ಷ್ಮೀದೇವಿಯು ಈಕೆಯ ಕನಸಿನಲ್ಲಿ ಬಂದು ವರಮಹಾಲಕ್ಷ್ಮೀ ವ್ರತದ ಬಗ್ಗೆ ಸವಿಸ್ತಾರವಾಗಿ ಹೇಳಿದಳು. ಅದನ್ನು ಕೇಳಿಸಿಕೊಂಡ ಚಾರುಮತಿ ನಿಯಮಬದ್ಧವಾಗಿ ಮಾಡತೊಡಗಿದ್ದಲ್ಲದೆ, ಗೆಳತಿಯರಿಗೂ ಅದರ ಮಹತ್ವ ಹಾಗೂ ಆಚರಣೆ ಬಗ್ಗೆ ವಿವರಿಸಿದಳು. ವಿಧಿವತ್ತಾಗಿ ಕಳಶದ ಸ್ಥಾಪನೆ ಮಾಡಿ ಪ್ರದಕ್ಷಿಣೆ ಮಾಡಿ ವ್ರತವನ್ನು ಪೂರೈಸುತ್ತಾಳೆ. ಹೀಗೆ ವ್ರತ ಮುಗಿಸಿದ ನಂತರ ಪೂಜೆ ಮಾಡಿದ ಎಲ್ಲರಿಗೂ ಅಂದುಕೊಂಡಿದ್ದು ಸಿದ್ಧಿಸಿದೆ ಎನ್ನುವ ಐತಿಹ್ಯವಿದೆ.

Related posts

ಶಾಲೆ ಬಿಟ್ಟು ಬೀಡಿ ಕಟ್ಟುತ್ತಿದ್ದ ಕೇರಳದ ವ್ಯಕ್ತಿ ಈಗ ಅಮೆರಿಕದಲ್ಲಿ ನ್ಯಾಯಾಧೀಶ

ಅಪಘಾತದಲ್ಲಿ ಗಾಯಗೊಂಡಿದ್ದ ಚಿರತೆಯನ್ನು ಕಚ್ಚಿ ತಿಂದ ಕಾಡು ಹಂದಿಗಳು

ರಾಮಮಂದಿರದ ನಿರ್ಮಾಣಕ್ಕಾಗಿ 16 ಲಕ್ಷಕ್ಕೂ ಅಧಿಕ ಶ್ರೀರಾಮ ನಾಮ ಜಪಗಳನ್ನ ಬರೆದ ಮಹಿಳೆ..!ಆಧುನಿಕ ಶಬರಿಯ 35 ವರ್ಷದ ಸೇವೆ ಬಗೆಗಿನ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ..