ದೇಶ-ಪ್ರಪಂಚ

ಆನ್‌ಲೈನ್‌ನಲ್ಲಿ ಎಮ್ಮೆ ಆರ್ಡರ್‌ ಮಾಡಿದ ರೈತ..! ಅಯ್ಯೋ ಭಗವಂತ..!ಇದೊಂದು ಬಾಕಿ ಇತ್ತು,ಕೊನೆಗೇನಾಯ್ತು ಓದಿ..

ನ್ಯೂಸ್‌ ನಾಟೌಟ್‌ : ಇದೀಗ ಇಂಟರ್‌ ನೆಟ್‌ ಕಾಲ.ಕುಳಿತಲ್ಲಿಗೆ ಎಲ್ಲವೂ ಬರುತ್ತೆ.ಏನಾದ್ರೂ ತಿನ್ನಬೇಕೆನಿದರೂ, ಕುಡಿಬೇಕು ಅನಿಸಿದರೂ ಆನ್‌ ಲೈನ್‌ ನಲ್ಲಿ ಆರ್ಡರ್ ಮಾಡಿದ್ರೆ ತಕ್ಷಣ ಬಂದು ಬಿಡುತ್ತೆ.ಹೀಗೆ ಏನು ಕಾಲ ಬಂತೋ ಏನೋ.. ಇದೀಗ ಆನ್‌ ಲೈನ್‌ ಮೂಲಕ ಎಮ್ಮೆಗಳನ್ನೂ ಆರ್ಡರ್‌ ಮಾಡುವಷ್ಟರ ಮಟ್ಟಿಗೆ ಪರಿಸ್ಥಿತಿ ಬಂದು ತಲುಪಿದೆ ಅಂದ್ರೆ ನಿಮ್ಗೆ ಅಚ್ಚರಿಯಾಗದಿರದು..!

ಹೌದು,ಇಂತಹ ಘಟನೆಯೊಂದು ಉತ್ತರ ಪ್ರದೇಶದಿಂದ ವರದಿಯಾಗಿದೆ. ಉತ್ತರ ಪ್ರದೇಶದ ರಾಯ್‌ ಬರೇಲಿಯ ಯುವಕ ಸುನಿಲ್ ಕುಮಾರ್ ಎಂಬಾತ ವೃತ್ತಿಯಲ್ಲಿ ಹೈನುಗಾರನಾಗಿ ಕೆಲಸ ನಿರ್ವಹಿಸುತ್ತಿದ್ದ.ಅವರವ ಫೀಲ್ಡ್‌ ಅಂದ್ರೆ ಅದರ ಬಗ್ಗೆ ಕಲಿಯೋದು ಸಾಕಷ್ಟಿರುತ್ತೆ. ಜತೆಗೆ ಬೇರೆ ಬೇರೆ ಕನಸುಗಳನ್ನು ಕಾನೋದು ಕೂಡ ಸಹಜವೇ.ಹೈನುಗಾರಿಕೆ ಅಂದ ಮೇಲೆ ಸುಂದರವಾದ ಎತ್ತು , ಕೋಣ, ಎಮ್ಮೆ. ಆಡು ಬೇಕು ಅನಿಸೋದು ಸಹಜ.ಹೀಗೆ ಹಾಲು ಮಾರಾಟ ಉದ್ಯಮ ನಡೆಸುತ್ತಿದ್ದ ಈತ ಸಾಕಷ್ಟು ಎಮ್ಮೆಗಳನ್ನು ಸಾಕಿದ ಅನುಭವ ಇವನಿದೆ.ಇನ್ನಷ್ಟು ಎಮ್ಮೆಗಳು ಬೇಕು ಅಂತ ಈತನಿಗೆ ಅನಿಸೋದಕ್ಕೆ ಶುರುವಾಯಿತು. ಬಳಿಕ ಖರೀದಿಗೆ ಮುಂದಾಗಿದ್ದ. ಈ ವೇಳೆ ಯೂಟ್ಯೂಬ್‌ನಲ್ಲಿ ವಿಡಿಯೋ ನೋಡುವಾಗ ಒಂದು ಜಾಹಿರಾತು ಈತನ ಕಣ್ಣಿಗೆ ಬಿದ್ದಿತ್ತು. ಅತಿ ಹೆಚ್ಚು ಹಾಲು ಕೊಡುವ ಎಮ್ಮೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರೋದಾಗಿ ಜಾಹಿರಾತಿನಲ್ಲಿ ವಿವರಿಸಲಾಗಿತ್ತು.

ಜಾಹೀರಾತಿನಲ್ಲಿ ನೀಡಲಾಗಿದ್ದ ಮೊಬೈಲ್ ನಂಬರ್‌ಗೆ ಸುನಿಲ್ ಕುಮಾರ್ ಕರೆ ಮಾಡ್ತಾನೆ. ಸುನಿಲ್ ಕರೆಯನ್ನು ಸ್ವೀಕರಿಸಿದ ವ್ಯಕ್ತಿ ತನ್ನನ್ನು ತಾನು ಕಿಸನ್ ಬಯ್ಯಾ ಡೈರಿ ಫಾರ್ಮ್‌ನ ಮಾಲೀಕ ಎಂದು ಪರಿಚಯಿಸಿಕೊಂಡ. ತನ್ನ ಹೆಸರನ್ನು ಶುಭಂ ಎಂದು ಹೇಳಿದ. ತಾನು ರಾಜಸ್ಥಾನ ರಾಜ್ಯದ ಜೈಪುರ ನಗರದ ಉದ್ಯಮಿ ಎಂದು ಹೇಳಿಕೊಂಡ. ಅಷ್ಟೇ ಅಲ್ಲ, ಪ್ರತಿ ದಿನ ಬರೋಬ್ಬರಿ 18 ಲೀಟರ್ ಹಾಲು ಕೊಡುವ ಎಮ್ಮೆಗಳನ್ನು ಮಾರಾಟ ಮಾಡೋದಾಗಿ ಭರವಸೆಯನ್ನೂ ನೀಡಿದ.

ದೂರವಾಣಿ ಮಾತುಕತೆ ಬಳಿಕ ಸುನಿಲ್ ಕುಮಾರ್‌ಗೆ ವಿಡಿಯೋ ಒಂದನ್ನು ಕಳಿಸಿದ ಶುಭಂ, ತನ್ನ ಬಳಿ ಇರುವ ಎಮ್ಮೆಗಳ ವಿಶೇಷತೆ ಬಗ್ಗೆ ಅದರಲ್ಲಿ ವಿವರಿಸಿದ್ದ. ಎಮ್ಮೆಯ ಬೆಲೆ 55 ಸಾವಿರ ರೂ. ಆಗಿದ್ದು, ಮೊದಲಿಗೆ 10 ಸಾವಿರ ರೂ. ಅಡ್ವಾನ್ಸ್‌ ಹಣ ಕಳಿಸುವಂತೆ ಸೂಚಿಸಿದ. ಎಮ್ಮೆಗಳನ್ನು ಖರೀದಿಸಲು ಆಸಕ್ತನಾಗಿದ್ದ ಸುನಿಲ್, ಶುಭಂಗೆ 10 ಸಾವಿರ ರೂ. ಅಡ್ವಾನ್ಸ್ ಹಣವನ್ನು ರವಾನಿಸಿದ.ಇದಾದ ಕೆಲವು ದಿನಗಳು ಕಳೆದರೂ ಸುನಿಲ್ ಕುಮಾರ್‌ಗೆ ಎಮ್ಮೆಗಳನ್ನು ಡೆಲಿವರಿ ಮಾಡಲಿಲ್ಲ. ಹೀಗಾಗಿ, ಮತ್ತೆ ಶುಭಂಗೆ ಕರೆ ಮಾಡಿದ ಸುನಿಲ್ ಕುಮಾರ್, ಎಮ್ಮೆಗಳು ಇನ್ನೂ ಬಂದಿಲ್ಲ ಎಂದು ಹೇಳಿದ. ಆಗ ಶುಭಂ ಮತ್ತೆ 25 ಸಾವಿರ ರೂ. ಹಣ ರವಾನಿಸು, ಕಳಿಸುವೆ ಎಂದು ಹೇಳಿದ.

ಈ ವೇಳೆ ಸಂಶಯಗೊಂಡ ಸುನಿಲ್ ಕುಮಾರ್, ಈ ವ್ಯವಹಾರ ತನಗೆ ಬೇಡ ಎಂದು ಹೇಳಿದ. ಮೊದಲು ಕಳಿಸಿದ್ದ 10 ಸಾವಿರ ರೂ. ಹಣವನ್ನು ವಾಪಸ್ ಕಳಿಸು ಎಂದು ಪಟ್ಟು ಹಿಡಿದ. ಸುನಿಲ್ ಕುಮಾರ್‌ಗೆ ಅನುಮಾನ ಬಂದಿದೆ ಅನ್ನೋದು ದೃಢವಾದ ಕೂಡಲೇ ಶುಭಂನ ಮೊಬೈಲ್ ಸ್ವಿಚ್ ಆಫ್ ಆಯ್ತು. ಶುಭಂಗೆ ಪದೇ ಪದೇ ಕರೆ ಮಾಡಿದರೂ ಕೂಡಾ ಆತನ ಮೊಬೈಲ್ ಸ್ವಿಚ್ ಆಫ್ ಎಂದೇ ಬರುತ್ತಿತ್ತು. ಹೀಗಾಗಿ, ಇದು ಸೈಬರ್ ಕ್ರೈಂ ಇರಬಹುದು ಎಂದು ಭಾವಿಸಿದ ಸುನಿಲ್ ಕುಮಾರ್, ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಈಗಲೂ ಕೂಡಾ ವಂಚಕ ಶುಭಂನ ಮೊಬೈಲ್ ಸ್ವಿಚ್ ಆಫ್ ಎಂದೇ ಬರುತ್ತಿದೆ.

ಜಗತ್ತಿನಲ್ಲಿ ಹಣ ಮಾಡಬೇಕು ಎನ್ನುವವರು ಹೇಗೆ ಬೇಕಾದರೂ ಹಣ ಮಾಡ್ತಾರೆ ಅನ್ನೋದಕ್ಕೆ ಇದು ಬೆಸ್ಟ್‌ ಎಕ್ಸಾಂಪಲ್.. ಮೋಸ ಹೋಗುವವರಿದ್ದರೆ ಮೋಸ ಮಾಡುವವರು ಇದ್ದೇ ಇರುತ್ತಾರೆ ಅನ್ನೋದಕ್ಕೆ ಬೇರೆ ಉದಾಹರಣೆಗಳು ಬೇಕೇ?ಅತಿಯಾದ ಆಸೆಗೆ ಒಳಗಾದ್ರೆ ಕೊನೆಗೆ ನಿರಾಸೆಯೇ ಗತಿ..ಯಾವುದೇ ಕೆಲಸ ಮಡುವಾಗ ನೂರು ಬಾರಿ ಯೋಚಿಸಿ,ಇತರರ ಜತೆ ಚರ್ಚಿಸಿ ನಿರ್ಧಾರಕ್ಕೆ ಬರೋದು ಒಳಿತು..ಇಲ್ಲಾಂದ್ರೆ ಜೊತೆಯಲ್ಲೇ ‘ಅವಕಾಶವಾದಿ’ಗಳು ಹುಟ್ಟಿಕೊಳ್ಳುತ್ತಲೇ ಇರುತ್ತಾರೆ. ಒಂದು ಕ್ಷಣ ಯಾಮಾರಿದ್ರೂ ಸಾಕು ನಿಮ್ಮ ಹಣ ಗುಳುಂ ಮಾಡುವವರು ಕಾಯುತ್ತಾ ಕೂತಿರ್ತಾರೆ.

Related posts

6 ಜನರನ್ನು ಮದುವೆಯಾಗಿ ಹಣ, ಚಿನ್ನ ಕದ್ದಿದ್ದ ಆಕೆ 7ನೇ ಮದುವೆಗೆ ತಯಾರಿಯಲ್ಲಿದ್ದಾಗ ಬಂಧನ..! ಪೋಷಕರಂತೆ ನಟಿಸಿದಾಕೆಯೂ ಅರೆಸ್ಟ್..!

ವಿಜಯ್ ಮಲ್ಯ ವಿರುದ್ಧ ಮತ್ತೊಂದು ಜಾಮೀನು ರಹಿತ ವಾರಂಟ್..! ಇಂಡಿಯನ್ ಓವರ್​ಸೀಸ್ ಬ್ಯಾಂಕ್ ​ನಿಂದ 180 ಕೋಟಿ ರೂ. ವಂಚನೆ..!

ಎಟಿಎಂ ದರೋಡೆ ಮಾಡಲು 15 ನಿಮಿಷದಲ್ಲಿ ಕಳ್ಳತನ ತರಬೇತಿ! ಆತನ ಖತರ್ನಾಕ್ ಪ್ಲಾನ್ ಗೆ ಪೊಲೀಸರೆ ಸುಸ್ತು!