ಕರಾವಳಿರಾಜಕೀಯ

ಕರುನಾಡ ಮೊದಲ ಮುಸ್ಲಿಂ ಸ್ಪೀಕರ್ ಯು.ಟಿ.ಖಾದರ್ ಗೆ ಕರಾವಳಿ ಕಾಂಗ್ರೆಸ್ ಮುಖಂಡರ ಅಭಿನಂದನೆ!

ನ್ಯೂಸ್ ನಾಟೌಟ್ :  ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮುಸ್ಲಿಂ ಸಮುದಾಯದಿಂದ ವಿಧಾನಸಭೆ ಸ್ಪೀಕರ್‌ ಆಗಿ ಯುಟಿ ಖಾದರ್‌ ಅಧಿಕಾರ ಸ್ವೀಕರಿಸಿದ್ದಾರೆ. ಹಿಂದೆ ಖಾದರ್‌ ಅವರು ಕ್ಯಾಬಿನೆಟ್‌ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.

BA.LLB ವ್ಯಾಸಂಗ ಮಾಡಿರುವ ಯು.ಟಿ. ಅಬ್ದುಲ್ ಖಾದರ್ ಫರೀದ್ ಕರುನಾಡ ಮೊದಲ ಮುಸ್ಲಿಂ ಸ್ಪೀಕರ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ವಿಧಾನ ಸಭೆಯ ನೂತನ ಸ್ಪೀಕರ್ ಯು.ಟಿ.ಖಾದರ್ ರವರನ್ನು ಕರಾವಳಿ ಕಾಂಗ್ರೇಸ್ ಮುಖಂಡರು ಅಭಿನಂದಿಸಿದ್ದಾರೆ.

ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ ಪಿ ವಗ್ರಿಸ್ .ಜಿಲ್ಲಾ ಯುವ ಕಾಂಗ್ರೇಸ್ ಮುಖಂಡ ಕಿರಣ್ ಬುಡ್ಲೆಗುತ್ತು,ರಾಜ್ಯ ಯುವ ಕಾಂಗ್ರೇಸ್ ಕಾರ್ಯದರ್ಶಿ ನಾಸಿರ್ ಸಾಮನಿಗೆ ಉಪಸ್ಥಿತರಿದ್ದರು.

Related posts

ಸ್ಥಿರ ಮಾನಸಿಕ ಅಭಿವ್ಯಕ್ತಿಗೆ ಯೋಗವೇ ಪ್ರಧಾನ: ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ

ಕಚೇರಿಯಲ್ಲಿ ಕೆಲಸ ಮಾಡುತ್ತಲೇ ಪ್ರಾಣ ಬಿಟ್ಟ ಗ್ರಾಮ ಸಹಾಯಕ..!

ಮಂಗಳೂರಿನ ಈರುಳ್ಳಿ ವ್ಯಾಪಾರಿಗೆ ಬರೋಬ್ಬರಿ 75 ಲಕ್ಷ ರೂ.ವಂಚಿಸಿದ ಸೋಲಾಪುರದ ವ್ಯಕ್ತಿ,ಅಷ್ಟಕ್ಕೂ ವಂಚನೆ ಮಾಡಿದ ವ್ಯಕ್ತಿ ಯಾರು?