ಉಪ್ಪಿನಂಗಡಿ: ಇಲ್ಲಿನ ಲಾಡ್ಜ್ ವೊಂದರ ಕೊಠಡಿಯೊಂದರಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ವಿಟ್ಲದ ಮಾಡ್ನೂರು ನಿವಾಸಿ ಮಹಮ್ಮದ್ ಶರೀಫ್ (37 ) ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗ್ಗೆ ಬಂದು ಕೊಠಡಿಯನ್ನು ಬಾಡಿಗೆ ಪಡೆದಿದ್ದರು. ಇಂದು ಮಧ್ಯಾಹ್ನವಾದರೂ ಕೊಠಡಿ ಖಾಲಿ ಮಾಡದಿರುವುದರಿಂದ ಅನುಮಾನಗೊಂಡು ಸಿಬ್ಬಂದಿ ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.