ಕ್ರೈಂ

ಕಲ್ಲುಗುಂಡಿ: ಕತ್ತಲಲ್ಲೂ ಹಾರಾಡಿದ ರಾಷ್ಟ್ರಧ್ವಜ, ಫೋಟೋ ವೈರಲ್

707

ಕಲ್ಲುಗುಂಡಿ: ದೇಶದಲ್ಲಿ ಬುಧವಾರ 73 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ ಕಲ್ಲುಗುಂಡಿಯ ಮುಖ್ಯಪೇಟೆಯಲ್ಲಿ ಸಂಘಟನೆಯೊಂದು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿರುವ ಘಟನೆ ನಡೆದಿದೆ. ಇದಕ್ಕೆ ಸಾಕ್ಷಿಯೆಂಬಂತೆ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇಶದ ರಾಷ್ಟ್ರಧ್ವಜವನ್ನು ಸೂರ್ಯಾಸ್ತಮಾನದ ನಂತರ ಹಾರಾಡಿಸುವಂತಿಲ್ಲ. ಕಾನೂನು ಪ್ರಕಾರ ಇದು ಅಪರಾಧ. ಆದರೆ ಕಲ್ಲುಗುಂಡಿಯಲ್ಲಿ ಸಂಘಟನೆಯೊಂದು ಬೇಜಾವ್ದಾರಿ ಪ್ರದರ್ಶಿಸಿದೆ. ಯಾರೂ ಇಂತಹ ಕೆಲಸ ಮಾಡಿದ್ದಾರೋ ಅಂತಹವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿ ಬಂದಿದೆ.

See also  ರಿಕ್ಷಾದಲ್ಲಿ ತೆರಳುತ್ತಿದ್ದ ಮಹಿಳೆಗೆ ಕಿರುಕುಳ: ಓರ್ವನ ಬಂಧನ
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget