ಕರಾವಳಿ

ಉಪ್ಪಿನಂಗಡಿ: ನೀರಿಗೆ ಮುಳುಗಿ ಯುವಕ ಮೃತ್ಯು

ನ್ಯೂಸ್ ನಾಟೌಟ್: ಉಪ್ಪಿನಂಗಡಿಯ ಪೆರ್ನೆ ಎಂಬಲ್ಲಿ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸಂಭವಿಸಿದೆ.

ಮೃತಪಟ್ಟ ಬಾಲಕನನ್ನು ಮಾಣಿ ನಿವಾಸಿ ತಾಹೀರ್ ಎಂಬವರ ಸುಪುತ್ರ ಸಲ್ಮಾನ್‌ ಎಂದು ಗುರುತಿಸಲಾಗಿದೆ.ಮೂಲತಃ ಬಂಟ್ವಾಳ ತಾಲೂಕಿನ ಮಾಣಿ ನಿವಾಸಿ ಮಾಣಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದ.
ಈತ ತನ್ನ ಸೋದರ ಸಂಬಂಧಿ ಬಾಲಕ ಮಹಮ್ಮದ್‌ ಇರ್ಫಾರ್‌ ಜತೆಗೂಡಿ ಪೆರ್ನೆಯಲ್ಲಿನ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದು, ನದಿಯಲ್ಲಿ ಸ್ನಾನ ಮಾಡುವ ಬಯಕೆಯಿಂದ ಬಿಳಿಯೂರಿನ ಅಣೆಕಟ್ಟಿನ ಬಳಿ ನದಿಗಿಳಿದಾತ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾನೆ.ಈತನ ಜತೆಗಿದ್ದ ಮಹಮ್ಮದ್‌ ಇರ್ಫಾರ್‌ ರಕ್ಷಿಸಲ್ಪಟ್ಟಿದ್ದಾನೆ.ಆದರೆ ಆತ ಬದುಕುಳಿದಿಲ್ಲ.

ಮೃತ ಮಹಮ್ಮದ್‌ ಸಲ್ಮಾನ್‌ನದ್ದು ಬಡಕುಟುಂಬವಾಗಿದ್ದು, ಆತನ ತಂದೆ ವರ್ಷದ ಹಿಂದೆ ಸಾವನ್ನಪ್ಪಿದ್ದರು. ತಾಯಿ ಅನಾರೋಗ್ಯಪೀಡಿತರಾಗಿದ್ದು, ತನ್ನ ಕಿರಿಯ ಸಹೋದರನೊಂದಿಗೆ ಬಂಧುಗಳ ಸಹಕಾರದೊಂದಿಗೆ ಜೀವನ ನಡೆಸುತ್ತಿದ್ದಾರೆ. ಪ್ರಸಕ್ತ ಮಾಣಿ ಪ್ರೌಢಶಾಲೆಯಲ್ಲಿ ಎಸ್‌.ಎಸ್‌.ಎಲ್.ಸಿ ಓದುತ್ತಿದ್ದ ಈತ ಮುಂಬರುವ ಪಬ್ಲಿಕ್‌ ಪರೀಕ್ಷೆಗೆ ಸಿದ್ಧತೆಯನ್ನು ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.

Related posts

ಸುಳ್ಯ: ಬಾಳಿ ಬದುಕಬೇಕಾಗಿದ್ದ ಯುವಕನ ಬಾಳಲ್ಲಿ ವಿಧಿಯಾಟ..!ಜಾಂಡೀಸ್‌ಗೆ ಕೊನೆಯುಸಿರೆಳೆದ ಪ್ರಶಾಂತ್

ಅಬ್ಬಬ್ಬಾ..! ಕಡಿಮೆ ಅಂಕ ನೀಡಿದರೆಂದು ಶಿಕ್ಷಕಿಗೆ ಈ ರೀತಿ ಮಾಡೋದಾ? ಅವಧಿ ಮೀರಿದ ಟ್ಲ್ಯಾಬ್ಲೆಟ್‌ಗಳನ್ನು ನೀರಿನ ಬಾಟಲಿಗೆ ಹಾಕಿದ 6ನೇ ಕ್ಲಾಸ್ ವಿದ್ಯಾರ್ಥಿನಿಯರು..!ದೃಶ್ಯ ಸಿಸಿಟಿವಿಯಲ್ಲಿ ಸೆರೆ,ಬಾಟಲಿ ನೀರು ಕುಡಿದ ಶಿಕ್ಷಕಿಯರಿಗೇನಾಯ್ತು?

ಮಂಗಳೂರಿನಲ್ಲಿ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್..! ಅನ್ಯಕೋಮಿನ ಯುವಕನಿಂದ ಡ್ರಗ್ಸ್ ನಂಟು..?