ಕರಾವಳಿ

ವ್ಯಕ್ತಿ ಮಾಯೆ, ಕಪಟ ನಾಟಕ, 50 ಸಾವಿರ ರೂ. ಕಳೆದುಕೊಂಡ ಅಡಿಕೆ ವರ್ತಕ

ನ್ಯೂಸ್ ನಾಟೌಟ್ :  ಕೆಲವು ದಿನಗಳ ಹಿಂದೆ ಉಪ್ಪಿನಂಗಡಿಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮೂರು ಪವನ್ ಚಿನ್ನದ ಸರವನ್ನು ಮಾಯಾಜಾಲದಿಂದ ಎಗರಿಸಿ ಪರಾರಿಯಾಗಿದ್ದ. ಆತನ ಸುಳಿವು ಇನ್ನೂ ಸಿಕ್ಕಿಲ್ಲ. ಇದೀಗ ಉಪ್ಪಿನಂಗಡಿಯಲ್ಲೇ ಇಂತಹ ಮತ್ತೊಂದು ಮಾಯಾಜಾಲದ ಪ್ರಕರಣ ವರದಿಯಾಗಿದ್ದು ಈ ಸಲ ಅಡಿಕೆ ವರ್ತಕರೊಬ್ಬರು ಬರೋಬ್ಬರಿ  50 ಸಾವಿರ ರೂ. ಕಳೆದುಕೊಂಡಿದ್ದಾರೆ.

ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ ಬದಿಯ ಅಡಿಕೆ ವರ್ತಕರೊಬ್ಬರು ಎಂದಿನಂತೆ ತಮ್ಮ ಶಾಪ್ ನಲ್ಲಿ ವ್ಯಾಪಾರ ನಿರತರಾಗಿದ್ದರು. ಈ ವೇಳೆ ಚಿಲ್ಲರೆ ಪಡೆಯುವ ನೆಪದಲ್ಲಿ ವ್ಯಕ್ತಿಯೊಬ್ಬ ಬಂದಿದ್ದಾನೆ. ಆತನ ಮಾತು ಹಾಗೂ ನಡವಳಿಕೆಗೆ ಮರುಳಾದ ವರ್ತಕರು ಒಂದು ಕ್ಷಣ ಏನು ನಡೆಯುತ್ತಿದೆ ಅನ್ನುವುದೇ ತಿಳಿಯದೆ ಸ್ತಬ್ಧರಾಗುತ್ತಾರೆ. ಎಚ್ಚರ ಆದಾಗ 50 ಸಾವಿರ ರೂ. ಕಳೆದುಕೊಂಡ ಅರಿವಾಗುತ್ತದೆ.  ಬೈಕ್‌ನಲ್ಲಿ ಬಂದ ವ್ಯಕ್ತಿ 500 ರೂಪಾಯಿ ಚಿಲ್ಲರೆ ಪಡೆಯಲು ಬಂದಿದ್ದಾನೆ. ಹೋಗುವಾಗ ವರ್ತಕರ 50 ಸಾವಿರ ರೂಪಾಯಿ ಹಣವನ್ನು ಲೀಲಾಜಾಲವಾಗಿ  ಎಗರಿಸಿಕೊಂಡು ಹೋಗಿದ್ದಾನೆ. ಈ ವಂಚನಾ ಕೃತ್ಯ  ಇದೀಗ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹೆದ್ದಾರಿ ಬದಿಯಲ್ಲಿರುವ ಅಡಿಕೆ ಅಂಗಡಿಗೆ ಬೈಕ್‌ನಲ್ಲಿ ಇಬ್ಬರು ಬರುತ್ತಾರೆ. ಈ ಪೈಕಿ ಓರ್ವ ಬೈಕ್‌ನಿಂದ ಇಳಿದು ಬಂದು 500 ರೂ. ನೀಡಿ ಚಿಲ್ಲರೆ ಕೇಳುತ್ತಾನೆ. ವರ್ತಕ ಚಿಲ್ಲರೆ ಕೊಡುತ್ತಾರೆ. ವ್ಯಕ್ತಿ ತನ್ನ ಬಳಿ ಇದ್ದ 500 ರೂಪಾಯಿಯ ಇನ್ನೊಂದು ನೋಟು ತೋರಿಸಿ ಇದರ ಮಧ್ಯದಲ್ಲಿ ಹಳದಿ ಬಣ್ಣ ಇದೆ ನೋಡಿ, ಇಂತಹ ನೋಟಿಗೆ ಭಾರೀ ಬೇಡಿಕೆ ಇದೆ. ನಿಮ್ಮಲ್ಲಿ ಎಷ್ಟು ಇದ್ದರೂ ನನಗೆ ಬೇಕು ಇದೆಯಾ? ಎನ್ನುತ್ತಾನೆ.  ಆಗ ವರ್ತಕ ತನ್ನ ಡ್ರಾಯರಿನಲ್ಲಿ ಇದ್ದ 50 ಸಾವಿರ ಮೊತ್ತದ 500 ರೂಪಾಯಿಯ ಕಟ್ಟು ತೆಗೆದು ಈತನ ಕೈಗೆ ಕೊಟ್ಟು ಇದರಲ್ಲಿ ನಿನಗೆ ಬೇಕಾದ ನೋಟು ಎಷ್ಟು ಇದೆ ಎಂದು ನೋಡಿ ತೆಗೆದುಕೊ ಎನ್ನುತ್ತಾರೆ ವರ್ತಕ. ಈ ವ್ಯಕ್ತಿ ಎಣಿಸುತ್ತಿದ್ದಂತೆ ಇನ್ನೊರ್ವ ವ್ಯಕ್ತಿ ಬಂದು ಅಡಿಕೆಯ ದರ ಕೇಳುತ್ತಾನೆ, ಆಗ ವರ್ತಕ ಆ ವ್ಯಕ್ತಿಯೊಂದಿಗೆ ಮಾತು ಆರಂಭಿಸುತ್ತಿದ್ದಂತೆ ನೋಟು ಎಣಿಸುತ್ತಿದ್ದ ವ್ಯಕ್ತಿ 50 ಸಾವಿರ ಕಂತೆಯೊಂದಿಗೆ ಬೈಕ್ ಏರಿ ಪರಾರಿಯಾಗುತ್ತಾನೆ.  ವರ್ತಕ ಪೊಲೀಸ್ ಠಾಣೆಯಲ್ಲಿ ಮೌಕಿಕವಾಗಿ ದೂರು ನೀಡಿದ್ದು, ಪೊಲೀಸರು  ವಿವಿಧ ಮಜಲಿನಲ್ಲಿ ತನಿಖೆ ನಡೆಸುತ್ತಿದ್ದಾರೆ.

Related posts

ಉಳ್ಳಾಲ: ಪುಟ್ಟ ಬಾಲಕಿ ಮೇಲೆ 70ರ ಹರೆಯದ ಮುದುಕನಿಂದ ಲೈಂಗಿಕ ಕಿರುಕುಳ..! ಆರೋಪಿಯನ್ನು ಹಿಡಿದು ಜೈಲಿಗಟ್ಟಿದ್ದ ಕೊಣಾಜೆ ಪೊಲೀಸರು

ಸುಳ್ಯ :ನೆಹರೂ ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ: ‘ಕನ್ನಡ ಭಾಷೆ’ ಕೇವಲ ಸಂವಹನ ಸಾಧನವಲ್ಲ,ಸಂಸ್ಕೃತಿಯ ಪ್ರತೀಕ-ಬೇಬಿ ವಿದ್ಯಾ

ಮಂಗಳೂರು:ಸುಳ್ಯದ ಎಂ.ಬಿ.ಫೌಂಡೇಶನ್ ಸ್ಥಾಪಕಾಧ್ಯಕ್ಷ ಎಂ.ಬಿ. ಸದಾಶಿವರಿಗೆ ಸನ್ಮಾನ,ಅಂತರ್ ಜಿಲ್ಲಾ ‘ಟ್ಯಾಲೆಂಟ್ ಹಂಟ್’ ಸಮಾರಂಭದಲ್ಲಿ ಗೌರವ