ಕರಾವಳಿಕೊಡಗುಕ್ರೈಂಪುತ್ತೂರುಸುಳ್ಯ

ಉಪ್ಪಿನಂಗಡಿ:ಟಿಪ್ಪರ್ ಮತ್ತು ಬೈಕ್ ಅಪಘಾತ,ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತ್ಯು

274

ನ್ಯೂಸ್ ನಾಟೌಟ್ : ಕಳೆದ ಒಂದು  ವಾರದ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಅನೀಸ್ (27) ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಉಪ್ಪಿನಂಗಡಿ ಬಳಿಯ ಪಂಜಳ ಎಂಬಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿತ್ತು.

ಬೈಕ್ ನಲ್ಲಿದ್ದ ಅನೀಸ್ ಮತ್ತು ಅವರ ಮಾವ ಹಮೀದ್ ಎಂಬವರು ಗಾಯಗೊಂಡಿದ್ದರು.ಅನೀಸ್ ಗಂಭೀರ ಗಾಯಗೊಂಡು ಕೋಮಾಗೆ ಜಾರಿದ್ದರು.ಈ ವೇಳೆ ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಅನೀಸ್ ನಿಧನರಾದರು.

ಜೂ.2 ರಂದು ಮಹಮ್ಮದ್ ಅನೀಸ್ ಎಂಬವರು ಮೋಟಾರ್ ಸೈಕಲಿನಲ್ಲಿ ಹಮೀದ್ ರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ನೀರಕಟ್ಟೆ ಕಡೆಯಿಂದ ಬಿ ಸಿ ರೋಡ್ ಕಡೆಗೆ ಚಲಾಯಿಸಿಕೊಂಡು ಹೋಗಿದ್ದರು.ಈ ಸಂದರ್ಭ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಪಂಜಳ ಎಂಬಲ್ಲಿ ರಸ್ತೆ ಅಪಘಾತ ಸಂಭವಿಸಿದೆ.ಘಟನೆಯಲ್ಲಿ ಮೋಟಾರ್ ಸೈಕಲ್ ರಸ್ತೆಗೆ ಬಿದ್ದ ಪರಿಣಾಮ ಸವಾರ ಮಹಮ್ಮದ್ ಅನೀಸ್ ರವರಿಗೆ ಮುಖಕ್ಕೆ ಮತ್ತು ಕಾಲಿಗೆ ಗಾಯವಾಗಿತ್ತು.ಸಹಸವಾರ ಹಮೀದ್ ರವರಿಗೆ ಕಾಲಿಗೆ ಗಾಯವಾಗಿತ್ತು.ಮಹಮ್ಮದ್ ಅನೀಸ್ ರನ್ನು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದರು.

See also  ಇರಾನ್‌ ಸರ್ಕಾರಿ ವಾಹಿನಿ ಮೇಲೆ ಬಾಂಬ್‌ ದಾಳಿ..! ಓಡಿ ಹೋದ ಲೈವ್‌ ನಲ್ಲಿದ್ದ ನಿರೂಪಕಿ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget