Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಇರಾನ್‌ ಸರ್ಕಾರಿ ವಾಹಿನಿ ಮೇಲೆ ಬಾಂಬ್‌ ದಾಳಿ..! ಓಡಿ ಹೋದ ಲೈವ್‌ ನಲ್ಲಿದ್ದ ನಿರೂಪಕಿ..!

613

ನ್ಯೂಸ್ ನಾಟೌಟ್: ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿದ್ದಕ್ಕೆ ಸಿಟ್ಟಾಗಿರುವ ಇಸ್ರೇಲ್‌ ಟೆಹ್ರಾನ್‌ ನಲ್ಲಿರುವ ಇರಾನಿನ ಸರ್ಕಾರಿ ಟಿವಿ ವಾಹಿನಿ IRIB(Islamic Republic of Iran Broadcasting) ಕಚೇರಿಯ ಮೇಲೆಯೇ ಬಾಂಬ್‌ ದಾಳಿ ನಡೆಸಿದೆ.

ಐಆರ್‌ ಐಬಿ ನಿರೂಪಕಿಯೊಬ್ಬರು ಇಸ್ರೇಲ್‌ ದಾಳಿ ಕುರಿತಂತೆ ಸುದ್ದಿ ಓದುತ್ತಿರುವಾಗಲೇ ಈ ಘಟನೆ ನಡೆದಿದೆ. ಐಆರ್‌ ಬಿ ಕಟ್ಟಡದ ಮೇಲೆಯೇ ಇಸ್ರೇಲ್‌ ವಾಯುಸೇನೆ ಬಾಂಬ್‌ ದಾಳಿ ನಡೆಸಿದೆ.
ದಾಳಿ ಆಗುತ್ತಿದ್ದಂತೆ ನಿರೂಪಕಿ ಓಡಿ ಹೋಗಿದ್ದಾರೆ. ಗೋಡೆಗಳು ಕುಸಿಯುತ್ತಿರುವ ದೃಶ್ಯ ಸ್ಟುಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪಶ್ಚಿಮ ಏಷ್ಯಾದ ಇಸ್ರೇಲ್-ಇರಾನ್ ದೇಶಗಳ ಮಧ್ಯೆ ಯುದ್ಧೋನ್ಮಾದ ತಾರಕಕ್ಕೇರಿದ್ದು, ಸುಮಾರು 2,000 ಕಿ.ಮೀ. ದೂರ ಇದ್ದರೂ ಎರಡೂ ರಾಷ್ಟ್ರಗಳು ಪರಸ್ಪರ ಖಂಡಾಂತರ ಕ್ಷಿಪಣಿಗಳು, ಡ್ರೋನ್‌ ಗಳ ಮೂಲಕ ಸಂಘರ್ಷ ನಡೆಸುತ್ತಿವೆ. 4 ದಿನಗಳಿಂದ ತೀವ್ರಗೊಂಡ ಈ ಯುದ್ಧದಲ್ಲಿ ಎರಡೂ ಕಡೆ ಈವರೆಗೆ 224 ಮಂದಿ ಸಾವನ್ನಪ್ಪಿದ್ದರೆ, 1,300ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.

ಮತ್ತೊಂದು ಎರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ..! ಸ್ಯಾನ್ ಫ್ರಾನ್ಸಿಸ್ಕೋದಿಂದ ಮುಂಬೈಗೆ ತೆರಳುತ್ತಿದ್ದ ಪ್ರಯಾಣಿಕರನ್ನು ಕೋಲ್ಕತ್ತಾದಲ್ಲಿ ಕೆಳಗಿಳಿಸಿದ ಸಿಬ್ಬಂದಿ..!

See also  ಹಸುಗೂಸು ಸಹಿತ ಇಬ್ಬರು ಮಕ್ಕಳನ್ನು ಬಿಟ್ಟು ನಾಪತ್ತೆಯಾದ ದಂಪತಿ..!
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget