ಕರಾವಳಿ

ಉಪ್ಪಿನಂಗಡಿ:ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ,ಪೋಕ್ಸೋ ಕಾಯ್ದೆಯಡಿ ಆರೋಪಿ ಬಂಧನ

ನ್ಯೂಸ್ ನಾಟೌಟ್ : ತಂದೆಯೇ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಿ ಗರ್ಭಿಣಿಯನ್ನಾಗಿಸಿದ ಘಟನೆ ಉಪ್ಪಿನಂಗಡಿ ಸಮೀಪದ ಗೋಳಿತ್ತೊಟ್ಟು ಎಂಬಲ್ಲಿಂದ ವರದಿಯಾಗಿದೆ.ಆರೋಪಿ ತಂದೆ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಗೋಳಿತೊಟ್ಟು ಗ್ರಾ.ಪಂ. ವ್ಯಾಪ್ತಿಯ ನಿವಾಸಿ ತನ್ನ ಮಗಳ ಮೇಲೆಯೇ ಕೆಲವು ತಿಂಗಳುಗಳ ಹಿಂದೆ ಅತ್ಯಾಚಾರ ವೆಸಗಿದ್ದಾನೆ ಎನ್ನಲಾಗಿದೆ.ಇತ್ತೀಚೆಗೆ ಮಗಳ ಆರೋಗ್ಯದಲ್ಲಿ ವ್ಯತ್ಯಾಸಗಳು ಕಂಡುಬಂದಿತ್ತು.ಹೀಗಾಗಿ ತಾಯಿ ಮಗಳನ್ನು ಆ. 16ರಂದು ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ. ಈ ವೇಳೆ ಪರೀಕ್ಷಿದಾಗ ಆಕೆ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.

ಸಂತ್ರಸ್ತೆ ಈ ಕುರಿತು ಪೊಲೀಸ್ ದೂರು ನೀಡಿದ್ದು,ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Related posts

ವಿಶ್ವ ಹಿಂದೂ ಪರಿಷದ್ ಅಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ,ಪ್ರಾಣಾಪಾಯದಿಂದ ಪಾರು ,ಮುಂದುವರಿದ ತನಿಖೆ

ಸುಳ್ಯ: ಹಿಂದೂ ಯುವತಿ ಜೊತೆ ಕಾರಿನಲ್ಲಿ ಬಂದ ಅನ್ಯಕೋಮಿನ ಯುವಕನ ತಡೆದ ಪ್ರಕರಣ, ಕ್ಲೈ ಮ್ಯಾಕ್ಸ್ ನಲ್ಲಿ ನಡೆದಿದ್ದೇನು..? ಇಲ್ಲಿದೆ ಡಿಟೇಲ್ಸ್

ವಿಪಕ್ಷ ನಾಯಕ ಆರ್.ಅಶೋಕ್ ಗೆ ಶುಭ ಕೋರಲ್ಲ ಎಂದದ್ದೇಕೆ ಯತ್ನಾಳ್‌..? ರಾಜ್ಯಾಧ್ಯಕ್ಷ ಸ್ಥಾನ ಬದಲಾಯಿಸುವವರೆಗೂ ಶಾಸಕಾಂಗ ಸಭೆಗೆ ಹೋಗಲ್ಲ ಎಂದ ಹಿಂದೂ ಫೈರ್ ಬ್ರ್ಯಾಂಡ್?