ಕರಾವಳಿದೇಶ-ಪ್ರಪಂಚರಾಜಕೀಯ

ಕಾರ್ಕಳಕ್ಕೆ ಯೋಗಿ ಆದಿತ್ಯನಾಥ್ ಆಗಮನಕ್ಕೆ ಕ್ಷಣಗಣನೆ,ಬಿಜೆಪಿ ಅಭ್ಯರ್ಥಿ ಪರ ಬೃಹತ್ ರೋಡ್ ಶೋ

ನ್ಯೂಸ್ ನಾಟೌಟ್ :ಇಂದು ಕಾರ್ಕಳದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಬುಲ್ಡೋಜರ್ ಬಾಬಾ ಎಂದೇ ಖ್ಯಾತಿ ಪಡೆದಂತಹ ಯೋಗಿ ಆದಿತ್ಯನಾಥ್ ಅವರದ್ದೇ ಹವಾ, ನಾಥಪಂಥದ ಕ್ಷಾತ್ರ ತೇಜಸ್ಸಿನ ಯೋಗಿ ಅವರು ಇಂದು ಕಾರ್ಕಳಕ್ಕೆ ಆಗಮಿಸಲಿದ್ದು, ಬಿಜೆಪಿ ಅಭ್ಯರ್ಥಿ ವಿ.ಸುನಿಲ್‌ಕುಮಾರ್‌ ಅವರ ಪರ ರೋಡ್‌ ಶೋ ನಡೆಸಲಿದ್ದಾರೆ.

ಈ ಹಿನ್ನಲೆ ಅನಂತಶಯದಲ್ಲಿ ಬಿಜೆಪಿ ಕಾರ್ಯಕರ್ತರು ಅದ್ದೂರಿ ತಯಾರಿ ನಡೆಸುತ್ತಿದ್ದಾರೆ.ಯೋಗಿ ಆದಿತ್ಯ ನಾಥ್ ಹಾಗೂ ಸುನೀಲ್ ಕುಮಾರ್ ರವರಿಗೆ ಜೈ ಫೋಷಣೆ ಮಾಡುತ್ತಿದ್ದು,ಉರಿಬಿಸಿಲನ್ನು ಲೆಕ್ಕಿಸದೇ ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದಾರೆ.

ಯೋಗಿ ಆದಿತ್ಯನಾಥ್‌ ಆಗಮನ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ಬಿಗು ಭದ್ರತೆ ಕೈಗೊಂಡಿದ್ದಾರೆ. ರೋಡ್‌ ಶೋ ವೇಳೆ ಭದ್ರತೆ ಹಿನ್ನೆಲೆಯಲ್ಲಿ ನಗರದಲ್ಲಿ ಅಂಗಡಿ ಮುಂಗಟ್ಟು ಗಳನ್ನು ಮುಚ್ಚುವಂತೆ ಪೊಲೀಸರು ಈಗಾಗಲೇ ಸೂಚನೆ ನೀಡಿದ್ದು, ರೋಡ್‌ ಶೋ ವೇಳೆ ಪೇಟೆಯೊಳಗೆ ವಾಹನ ಸಂಚಾರಕ್ಕೆ ಅವಕಾಶವಿಲ್ಲ.ವಾಹನ ಸಂಚಾರದ ಮಾರ್ಗಗಳಲ್ಲಿ ಕೂಡ ವ್ಯತ್ಯಯ ಇದೆಯೆಂದು ಹೇಳಲಾಗಿದೆ.

ಯೋಗಿ ಆದಿತ್ಯನಾಥ ಆಗಮನ ಹಿನ್ನಲೆ ಕಾರ್ಕಳದಾದ್ಯಂತ ಕೇಸರಿಮಯವಾಗಿ ಪರಿಣಮಿಸಿದೆ. ಪೊಲೀಸರು, ಯೋಧರು ಹಿಂದಿನ ದಿನವೇ ವಿವಿಧ ಬೆಟಾಲಿಯನ್‌ ನಗರದಲ್ಲಿ ಪೆರೆಡ್‌ ನಡೆಸಿದರು. ಯೋಗಿ ಆದಿತ್ಯನಾಥ್‌ ಆಗಮನ ಹಿನ್ನೆಲೆಯಲ್ಲಿ ಹದ್ದಿನ ಕಣ್ಣಿರಿಸಲಾಗಿದೆ.ನಕ್ಸಲ್‌ ಪೀಡಿತ ಭಾಗಗಳಾದ ಹೆಬ್ರಿ, ಈದು, ಮಾಳ ಸೇರಿದಂತೆ ಪಶ್ಚಿಮ ಘಟ್ಟ ತಪ್ಪಲು ಪ್ರದೇಶ ಹಾಗೂ ತಾಲೂಕಿನಾದ್ಯಂದ ಕಟ್ಟೆಚ್ಚರ ವಹಿಸಲಾಗಿದ್ದು,ಈ ಭಾಗದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

Related posts

ಸುಳ್ಯ:7 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಮತ್ತು ಮಕ್ಕಳು ಪತ್ತೆ ! ಸುಳ್ಯ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ಕಾರ್ಕಳ ಯಕ್ಷ ರಂಗಾಯಣ ನಿರ್ದೇಶಕ ನೇಮಕಾತಿ ರದ್ದುಗೊಳಿಸಿ ಆದೇಶ,ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿರುವ ಜೀವನ್ ರಾಂ ಸುಳ್ಯ

ಡಿವೋರ್ಸ್‌ ವದಂತಿ ಮಧ್ಯೆಯೇ ಪತಿ ಅಭಿಷೇಕ್‌ ಬಚ್ಚನ್ ಅವರಿಗೆ ಪತ್ನಿ ಐಶ್ವರ್ಯಾ ರೈ ವಿಶ್‌..!ಫ್ಯಾಮಿಲಿ ಫೋಟೋ ಜೊತೆ ಅಭಿಷೇಕ್ ಬಚ್ಚನ್ ಬಾಲ್ಯದ ಫೋಟೋ ಹಂಚಿಕೊಂಡ ಚೆಲ್ವೆ..!