ದೇಶ-ಪ್ರಪಂಚ

ಕಚೇರಿಯಲ್ಲಿ ಉಗ್ರ ಲಾಡೆನ್‌ ಫೋಟೋ ಹಾಕಿದ ಅಧಿಕಾರಿ ಸೇವೆಯಿಂದ ವಜಾ

ನ್ಯೂಸ್‌ ನಾಟೌಟ್‌: ಕಚೇರಿಯಲ್ಲಿ ಉಗ್ರ ಒಸಾಮಾ ಬಿನ್ ಲಾಡೆನ್‌ನ ಫೋಟೋ ಹಾಕಿದ್ದ ಉತ್ತರ ಪ್ರದೇಶ ವಿದ್ಯುತ್ ನಿಗಮ ನಿಯಮಿತದ (ಯುಪಿಸಿಎಲ್) ಉಪವಿಭಾಗಾಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಯುಪಿಸಿಎಲ್ ಅಧ್ಯಕ್ಷ ಎಂ. ದೇವರಾಜ್ ಮಂಗಳವಾರ ತಿಳಿಸಿದ್ದಾರೆ.

ಸೇವೆಯಿಂದ ಅಮಾನತುಗೊಂಡ ಅಧಿಕಾರಿ ರವೀಂದ್ರ ಪ್ರಕಾಶ್ ಗೌತಮ್ ಎಂದು ತಿಳಿದು ಬಂದಿದೆ. ಈತ ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಲಾಡೆನ್‌ನ ಫೋಟೋ ಮತ್ತು ಪ್ರತಿಮೆಯನ್ನು ಕಚೇರಿಯಲ್ಲಿ ಹಾಕಿದ್ದಲ್ಲದೆ, ಲಾಡೆನ್‌ ತನ್ನ ಗುರು ಎಂದು ಇತರ ಸಿಬ್ಬಂದಿಗಳಲ್ಲಿ ಹೇಳಿಕೊಂಡಿದ್ದ ಎಂದು ತನಿಖೆ ವೇಳೆಯಲ್ಲಿ ಕಂಡುಬಂದಿದೆ ಎಂದು ದಕ್ಷಿಣಾಂಚಲ್ ವಿದ್ಯುತ್ ವಿತರಣಾ ನಿಗಮದ ಎಂಡಿ ಅಮಿತ್ ಕಿಶೋರ್ ಪಿಟಿಐಗೆ ತಿಳಿಸಿದ್ದಾರೆ. ಸೋಮವಾರ ಎಸ್‌ಡಿಒ ಗೌತಮ್‌ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಜೂನ್ 2022ರಲ್ಲಿ ಫಾರೂಕಾಬಾದ್ ಜಿಲ್ಲೆಯ ಕಾಯಮ್‌ಗಂಜ್ ಉಪವಿಭಾಗ-II ರಲ್ಲಿ ಗೌತಮ್‌ನನ್ನು ಸೇವೆಗೆ ನಿಯೋಜಿಸಲಾಗಿತ್ತು. ಈ ವೇಳೆ ಗೌತಮ್‌ ಲಾಡೆನ್‌ನ ಫೋಟೋವನ್ನು ಕೊಠಡಿಯಲ್ಲಿ ಹಾಕಿದ್ದು, ಕೊಠಡಿಯ ವಿಡಿಯೋ ವೈರಲ್ ಆದ ನಂತರ ಪ್ರಾಥಮಿಕ ತನಿಖೆ ನಡೆಸಿ ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Related posts

ಊರಿಡಿ ಹಬ್ಬಿದ ಮದುವೆ ಮನೆ ಅಡುಗೆ ಸುವಾಸನೆ,ಮದುವೆ ಮನೆಯಲ್ಲಿದ್ದ ವಧು-ವರ,ಜನರೂ ಓಡಿದ್ರು ಯಾಕೆ ಗೊತ್ತಾ?ಏನಿದು ‘ಘಂ’ ಎನಿಸುವ ಅಡುಗೆ ರಹಸ್ಯ??

ಏ.27ರಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಂಗಳೂರು ಭೇಟಿ

ಕಾಂಗ್ರೆಸ್ ಸಚಿವನ ಕನಸಲ್ಲಿ ಬಂದಿದ್ದನಂತೆ ಶ್ರೀರಾಮ..! ರಾಮ ಮಂದಿರ ಉದ್ಘಾಟನೆ ವಿರೋಧಿಸಿದ ಸ್ವಾಮೀಜಿ ಯಾರು?