ಕರಾವಳಿ

ಕರಾವಳಿಯ ಕಲಾವಿದನ ಕೈಚಳಕಕ್ಕೆ ಮನಸೋತ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ನ್ಯೂಸ್ ನಾಟೌಟ್: ಕರಾವಳಿಯ ಕಲಾವಿದನ ಕೈಚಳಕಕ್ಕೆ ಕೇಂದ್ರ ಸಚಿವೆಯೂ ಮನಸೋತಿದ್ದಾರೆ. ಕರಾವಳಿ ಯಕ್ಷಗಾನ ಕಲೆಯ ಒಲವುಳ್ಳ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಯಕ್ಷ ಮುಖವಾಡದಿಂದ ಪ್ರಭಾವಿತರಾಗಿ 100 ಮುಖವಾಡ ಕಳುಹಿಸಲು ಸೂಚಿಸಿದ್ದರು.

ವಾಲಗ ನಾದಕ್ಕೆ ಕುಣಿವ ಡಿಜಿಟಲ್‌ ಕೋಲೆ ಬಸವ ಸುಂದರ ಕಲಾಕೃತಿಯನ್ನು ಬೆಂಗಳೂರಿನಲ್ಲಿ ನಡೆದ ಜಿ20 ರಾಷ್ಟ್ರಗಳ ವಿತ್ತ ಸಚಿವರ ಶೃಂಗದಲ್ಲಿ ಪ್ರದರ್ಶನಕ್ಕಿಡಲಾಯಿತು. ಈ ಕಲಾ ಕೌಶಲಕ್ಕೆ ಮೆಚ್ಚುಗೆ ಜತೆಗೆ ವಿವಿಧೆಡೆಗಳಿಂದ ಅಪಾರ ಬೇಡಿಕೆಯೂ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಉಪ್ಪೂರು ಕೊಳಲಗಿರಿಯ ಗಣೇಶ್‌ ಪೂಜಾರಿ ಹಾವಂಜೆ. ಇವರಿಗೆ ಬಾಲ್ಯದಲ್ಲಿ ಕಲಾಸಕ್ತಿಯಿದ್ದರೂ ಕಲಾ ಶಾಲೆಗೆ ತೆರಳುವ ಅನುಕೂಲ ಇರಲಿಲ್ಲ.ಬಡತನದ ಹಿನ್ನೆಲೆಯಲ್ಲಿ 10ನೇ ತರಗತಿ ಬಳಿಕ ಮುಂಬಯಿ ಸೇರಿ ಕ್ಯಾಂಟೀನ್‌ನಲ್ಲಿ ಕೆಲಸ, ರಾತ್ರಿ ಶಾಲೆಗೆ ತೆರಳಿ ಪಿಯುಸಿ ಓದಿದರು. ಕಲಾವಿದನಾಗಿ ಸಾಧನೆ ಮಾಡುವ ತುಡಿತಕ್ಕೆ ಮುಂಬಯಿ ಮಾಯಾ ಜಗತ್ತು ಪ್ರೇರಣೆ ನೀಡಿತು. ಮಣಿಪಾಲದಲ್ಲಿ ಕಲ್ಚರ್ ಫ್ಯೂಚರ್ ಕ್ರಾಫ್ಟ್ ಸಂಸ್ಥೆ ಆರಂಭಿಸಿ ಕಲ್ಲು, ಗೆರಟೆ, ಬಟ್ಟೆ ಸಹಿತ ಪ್ರಾಕೃತಿಕ ವಸ್ತು ಕೈಗೆ ಸಿಕ್ಕಿದರೆ ಅದಕ್ಕೆ ಸುಂದರ ಕಲಾರೂಪ ನೀಡುವ ಕೌಶಲ ಇವರದ್ದು.

ಇವರು ರೂಪಿಸಿದ ಕಲಾಕೃತಿಗಳು ವಿವಿಧ ರಾಷ್ಟ್ರ ಗಳಲ್ಲಿ ಭಾರತೀಯ ಕಲಾ ಶ್ರೀಮಂತಿಕೆಯ ಸೊಬಗು ಬಿಂಬಿಸುತ್ತಿವೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಡಿಜಿಟಲ್‌ ಇಂಡಿಯಾ ಪ್ರಗತಿಯ ಕಿಮ್ಮತ್ತು, ಹಳ್ಳಿಗಳಲ್ಲಿಯೂ ನಡೆಯುವ ವ್ಯವಹಾರದ ಬಗ್ಗೆ ಪ್ರಸ್ತಾವಿಸಿದ್ದರು. ಕರ್ನಾಟಕ, ತಮಿಳುನಾಡುವಿನಲ್ಲಿ ಸಂಕ್ರಾಂತಿ ಹಬ್ಬದ ವೇಳೆ ಬರುವ ಕೋಲೆ ಬಸವನಿಗೆ ಕೊಡುವ ಬಟ್ಟೆ, ಧಾನ್ಯ ಜೋಳಿಗೆಗೆ ಹಾಕಿದರೂ ನಗದು ಕೊಡಲಾಗದವರು ಬಸವನ ಹಣೆ ಮೇಲಿರುವ ಕ್ಯೂಆರ್ ಕೋಡ್‌ ಸ್ಕ್ಯಾನ್‌ ಮಾಡಿ ದುಡ್ಡು ನೀಡುವಷ್ಟು ಡಿಜಿಟಲ್‌ ಇಂಡಿಯಾ ಯೋಜನೆ ಪ್ರಗತಿ ಸಾಧಿಸಿದ್ದನ್ನು ಶ್ಲಾಘಿಸಿದ್ದರು.

Related posts

ಮಂಗಳೂರು: ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ ಮಹಿಳೆಯ ಭೀಕರ ಕೊಲೆ ಪ್ರಕರಣ, ಮೂವರನ್ನು ದೋಷಿಗಳೆಂದು ಘೋಷಿಸಿದ ನ್ಯಾಯಾಲಯ, ತುಂಡು..ತುಂಡಾಗಿ ಕತ್ತರಿಸಿ ನಗರದಾದ್ಯಂತ ಬಿಸಾಕಿದ್ದ ಪಾಪಿಗಳು

ಸುಳ್ಯದಲ್ಲಿ ಮಿತಿ ಮೀರಿದ ಕಳ್ಳರ ಹಾವಳಿ..! ಪೊಲೀಸರು ನೀಡಿರುವ ಎಚ್ಚರಿಕೆ ಸಂದೇಶದಲ್ಲೇನಿದೆ..?

ಅಪ್ರಾಪ್ತ ಸೊಸೆಯನ್ನು ಗರ್ಭಿಣಿಯನ್ನಾಗಿಸಿದ ಪೋಲಿ ಮಾವ..!