ಕರಾವಳಿಕ್ರೈಂ

ಉಳ್ಳಾಲ : ಶ್ವಾನಗಳಿಗೆ ಇಟ್ಟ ವಿಷಕ್ಕೆ ಹಸು ಬಲಿ..! ಖಾದರ್ ಮಾಡಿದ ಪೈಶಾಚಿಕ ಕೃತ್ಯಕ್ಕೆ 25 ಕ್ಕೂ ಹೆಚ್ಚು ಶ್ವಾನಗಳ ದುರಂತ ಅಂತ್ಯ..! ಬಜರಂಗದಳ ಆಕ್ರೋಶ

ನ್ಯೂಸ್ ನಾಟೌಟ್: ಆಹಾರದಲ್ಲಿ ವಿಷ ಬೆರೆಸಿ ಸುಮಾರು 25 ನಾಯಿಗಳ ಮಾರಣ ಹೋಮ ನಡೆಸಿದ್ದಾನೆ. ಇನ್ನು, ಅದೇ ವಿಷಾಹಾರವನ್ನು ತಿಂದ ಹಸು ಕೂಡಾ ಸಾವನ್ನಪ್ಪಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ, ಕೃತ್ಯ ಎಸಗಿರುವಾತನನ್ನು ಬಂಧಿಸುವಂತೆ ಬಜರಂಗದಳ ಆಗ್ರಹಿಸಿದೆ.

ತಲಪಾಡಿಯ ಅಲಂಕಾರಗುಡ್ಡೆ, ಭಂಡಾರಮನೆ ಬಳಿ ನಿವಾಸಿ ಅಮಿತ್ ಎಂಬುವರ ಹಸು ಸಾವನ್ನಪ್ಪಿದೆ. ಸ್ಥಳೀಯ ನಿವಾಸಿ ಖಾದರ್ ಎಂಬಾತ ಕೃತ್ಯ ನಡೆಸಿದ್ದಾನೆಂದು ಅಮಿತ್ ಆರೋಪಿಸಿದ್ದಾರೆ. ಖಾದರ್ ಮೇಕೆಗಳನ್ನ ಸಾಕುತ್ತಿದ್ದು ಇತ್ತೀಚಿಗೆ ಆತನ ಮೇಕೆ ಮೇಲೆ ನಾಯಿಗಳು ದಾಳಿ ನಡೆಸಿ ಕೊಂದಿದ್ದವು. ಇದರಿಂದ ರೊಚ್ಚಿಗೆದ್ದ ಖಾದರ್ ಸುತ್ತಮುತ್ತಲ ಬೀದಿ ಮತ್ತು ಸಾಕು ನಾಯಿಗಳಿಗೆ ವಿಷಾಹಾರ ಉನಿಸಿ ಸುಮಾರು 25 ರಷ್ಟು ನಾಯಿಗಳ ಕೊಂದಿದ್ದಾನೆ ಎನ್ನಲಾಗಿದೆ.

ಅಲ್ಲದೇ, ನಾಯಿಗಳಿಗೆ ವಿಷಪ್ರಾಷಣ ಮಾಡಿದ ಬಗ್ಗೆ ಖಾದರ್ ಬಹಿರಂಗವಾಗಿ ಜನರಲ್ಲಿ ಹೇಳಿದ್ದಾಗಿ ಅಮಿತ್ ಆರೋಪಿಸಿದ್ದಾರೆ. ಅಮಿತ್ ಅವರ ಹಸು ಹುಲ್ಲು ಮೇಯಲು ಮನೆ ಪಕ್ಕದ ದೇವಸ್ಥಾನದ ಬಳಿ ತೆರಳಿದ್ದ ವೇಳೆ ಅಕಾಲಿಕವಾಗಿ ಸಾವನ್ನಪ್ಪಿದೆ. ಪರಿಶೀಲನೆ ನಡೆಸಿದ ಪಶು ವೈದ್ಯರು ಹಸು ವಿಷಾಹಾರ ಸೇವಿಸಿ ಸತ್ತಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಬಜರಂಗದಳ ಉಳ್ಳಾಲ ನಗರ ಪ್ರಖಂಡ ಸಂಯೋಜಕ ಅರ್ಜುನ್ ಮಾಡೂರು ಭೇಟಿ ನೀಡಿದ್ದು, ಮೃತಪಟ್ಟ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿ ಕೃತ್ಯ ಎಸಗಿದ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ತಲಪಾಡಿ ಗ್ರಾ.ಪಂ ಪಿಡಿಒ ಮತ್ತು ಉಳ್ಳಾಲ ಪೊಲೀಸ್ ಠಾಣೆಯ ಠಾಣಾಧಿಕಾರಿಯಲ್ಲಿ ಆಗ್ರಹಿಸಿದ್ದಾರೆ ಎಂದು ವರದಿ ತಿಳಿಸಿದೆ.

Related posts

ನೈಲದಲ್ಲಿ ಕಾಡಾನೆ ಕಾರ್ಯಾಚರಣೆ ವೇಳೆ ಬಂಧಿಸಿಲ್ಪಟ್ಟ 7 ಮಂದಿಗೆ ಜಾಮೀನು

ನಟ ರಿಷಬ್ ಶೆಟ್ಟಿ ಕಾರು ತಪಾಸಣೆ ನಡೆಸಿದ್ದೇಕೆ ಪೊಲೀಸರು? ಗೋವಾದಿಂದ ಬರುತ್ತಿದ್ದ ಕಾಂತರದ ಶಿವನಿಗೆ ಶಾಕ್ ಕೊಟ್ರಾ ಪೊಲೀಸರು?

ಮಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ: ಸಮುದ್ರ ಮಾರ್ಗವಾಗಿ ಶಂಕಿತರು ಪರಾರಿಯಾಗುವ ಸಾಧ್ಯತೆ?