ಉಡುಪಿಕರಾವಳಿಕ್ರೈಂವೈರಲ್ ನ್ಯೂಸ್

ಉಡುಪಿ: ಚಾಕುವಿನಿಂದ ಇರಿದು ಪತ್ನಿಯ ಕೊಲೆ, ಟೆರೇಸ್‌ ನಿಂದ ಬಿದ್ದಳು ಎಂದು ಕಥೆ..? ರೀಲ್ಸ್ ನಲ್ಲಿ ಬ್ಯೂಸಿಯಾಗಿದ್ದ ಪತ್ನಿ ಜೊತೆ ಜಗಳ..!

240

ನ್ಯೂಸ್ ನಾಟೌಟ್ : ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಪತಿಯೇ ಪತ್ನಿಯನ್ನು ಹತ್ಯೆಗೈದು ಬಳಿಕ ಸುಳ್ಳು ಕಥೆ ಕಟ್ಟಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಪೊಲೀಸರ ಮೇಲ್ನೋಟದ ತನಿಖೆಯಲ್ಲಿ ಪತ್ನಿ ಮೊಬೈಲ್‌ನಲ್ಲಿ ಯಾವಾಗಲೂ ಬ್ಯುಸಿಯಾಗಿದ್ದಳು ಎಂಬ ಕಾರಣಕ್ಕೆ ಆಗಾಗ ಜಗಳವಾಗುತ್ತಿತ್ತು. ಇದೇ ಕಾರಣಕ್ಕೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆಗೈಯ್ಯಲಾಗಿದೆ ಎಂಬ ಮಾಹಿತಿ ದೊರಕಿದೆ.

ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಕಾರ್ಕಡ ಹೆದ್ದಾರಿ ಅಂಗನವಾಡಿ ಕೇಂದ್ರದ ಸಮೀಪದಲ್ಲಿ ಕಿರಣ್ ಮತ್ತು ಜಯಶ್ರೀ ದಂಪತಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಬೀದರ್ ಮೂಲದ ಜಯಶ್ರೀ ಜೊತೆ 8 ತಿಂಗ ಹಿಂದೆ ಕಿರಣ್ ಮದುವೆಯಾಗಿತ್ತು. ಮನೆಯ ಟೆರೇಸ್‌ನಿಂದ ಬಿದ್ದು ಗಾಯಗೊಂಡಿರುವುದಾಗಿ ಪತಿ ಕಿರಣ್ ಗಾಯಾಳು ಪತ್ನಿಯನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಆಕೆ ಮೃತರಾಗಿರುವುದು ಬೆಳಕಿಗೆ ಬಂದಿದೆ.ಕಿರಣ್ ಸಾಲಿಗ್ರಾಮದ ಗುರು ನರಸಿಂಹ ದೇವಸ್ಥಾನದಲ್ಲಿ ಎರಡು ವರ್ಷದಿಂದ ಅಡುಗೆ ಕೆಲಸ ಮಾಡುತ್ತಿದ್ದ.

ಜಯಶ್ರೀ ಕುಟುಂಬಸ್ಥರ ಆಗಮನಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ. ಜಯಶ್ರೀ ಸದಾ ಮೊಬೈಲ್‌ನಲ್ಲಿ, ರೀಲ್ಸ್‌ನಲ್ಲಿ ಬ್ಯುಸಿ ಇರುತ್ತಿದ್ದ ಬಗ್ಗೆ ಪತಿ ಕಿರಣ್ ದೂರುತ್ತಿದ್ದ. ಇಂದು ಬೆಳಗ್ಗೆ ಇದೇ ಕಾರಣಕ್ಕೆ ಜಗಳ ನಡೆದು ಪತಿ ಚಾಕುವಿನಿಂದ ಹಲ್ಲೆ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಬೀದರ್ ದೊಣಗಪುರದಿಂದ ಕುಟುಂಬಸ್ಥರು ಉಡುಪಿಗೆ ಬರುತ್ತಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಉಪ್ಪಿನಂಗಡಿಯಿಂದ ನಾಪತ್ತೆಯಾದವನಿಗೆ ಭಯೋತ್ಪಾದನೆಯ ನಂಟು, ಸ್ಫೋಟಕ್ಕೆ ಸಂಚು ರೂಪಿಸಿದ್ದವರಲ್ಲಿ ಈತನೂ ಒಬ್ಬ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget