ಕರಾವಳಿ

ನಡುರಸ್ತೆಯಲ್ಲೇ ಚಾಲಕ ಮತ್ತು ಕಂಡಕ್ಟರ್ ನಡುವೆ ಮಾರಾಮಾರಿ, ಡ್ರೈವರ್ ನಿಂದ ಕಂಡಕ್ಟರ್ ಗೆ ಚಪ್ಪಲಿಯೇಟು:ವಿಡಿಯೋ ವೈರಲ್

ನ್ಯೂಸ್ ನಾಟೌಟ್ : ರಸ್ತೆ ಮಧ್ಯೆ ಖಾಸಗಿ ಕಂಡೆಕ್ಟರ್  ಮತ್ತು ಕೆಎಸ್ ಆರ್ ಟಿಸಿ  ಬಸ್ ಚಾಲಕರ ಮಧ್ಯೆ ಹೊಡೆದಾಟ ನಡೆದಿರುವ ಘಟನೆ ಕಾರ್ಕಳ ಬಸ್ ನಿಲ್ದಾಣದಲ್ಲಿ ನಡೆದಿದೆ.ಸೈಡ್ ಕೊಡುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ನಂತರ ಪೆಟ್ಟು ಗಲಾಟೆಯೇ ಆರಂಭಗೊಂಡಿತು ಎಂದು ತಿಳಿದು ಬಂದಿದೆ.

ಕಂಡಕ್ಟರ್ ಗೆ ಚಪ್ಪಲಿಯೇಟು:

ಉಡುಪಿ ಕಾರ್ಕಳ ಸರಕಾರಿ ಬಸ್ ಚಾಲಕ ಮೊಹಮ್ಮದ್ ಸೈಯದ್  ಗೆ ಖಾಸಗಿ ಬಸ್ ಕಂಡಕ್ಟರ್ ನಿಂದಿಸಿದ್ದ, ಇದರಿಂದ ಕೋಪಗೊಂಡ ಕಂಡಕ್ಟರ್ ಮೇಲೆ ಬಸ್ ಚಾಲಕ ಸೈಯದ್ ಚಪ್ಪಲಿಯಲ್ಲಿ ಹೊಡೆದಿದ್ದಾರೆ.ಕೆಎಸ್ಆರ್‌‌ಟಿಸಿ ಚಾಲಕನ ಮೇಲೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸದ್ಯ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

Related posts

ಸುಳ್ಯ: NMCಗೆ ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ಪ್ರಶಸ್ತಿ

ಕುಕ್ಕೇ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ಟ ಕಾಂತಾರ ನಟ ರಿಷಭ್ ಶೆಟ್ಟಿ , ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

ಶಫೀಕ್ ಬೆಳ್ಳಾರೆಗೆ ನ್ಯಾಯಾಂಗ ಬಂಧನ