ನ್ಯೂಸ್ ನಾಟೌಟ್: ಕೆನರಾ ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ನುಗ್ಗಿದ ಮುಸುಕುಧಾರಿ ಕಳ್ಳರು ಕಳವಿಗೆ ಯತ್ನಿಸಿರುವ ಘಟನೆ ಇಂದು(ಫೆ.12) ಬೆಳಗಿನ ಜಾವ ಉಡುಪಿಯ ಉದ್ಯಾವರದಲ್ಲಿ ನಡೆದಿದೆ.
ಮೂರು ಮಂದಿ ಮುಸುಕುಧಾರಿ ಕಳ್ಳರು, ಕೆನರಾ ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ನುಗ್ಗಿ ಎಟಿಎಂ ಬಾಕ್ಸ್ ಒಡೆಯಲು ಯತ್ನಿಸಿದ್ದಾರೆ. ಈ ವೇಳೆ ಎಟಿಎಂ ನಿಂದ ಸೈರನ್ ಮೊಳಗಿದ್ದು, ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click
ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ನಿಧನ..! ಮೆದುಳಿನಲ್ಲಿ ರಕ್ತಸ್ರಾವ..!
ಮಹಿಳಾ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ನಿಯಮ ಜಾರಿಗೆ ತರಲು ಮುಂದಾದ ಸರ್ಕಾರ..! ಇಲ್ಲಿದೆ ಸಂಪೂರ್ಣ ಮಾಹಿತಿ