ಕರಾವಳಿ

ಕಾರಿಂಜ ದೇವಸ್ಥಾನದ ಬಳಿ ಮುಸ್ಲಿಂ ಯುವಕರ ಜತೆ ಹಿಂದೂ ಯುವತಿಯರು: ಹಿಂ.ಜಾ.ವೇ ಕಾರ್ಯಕರ್ತರಿಂದ ದಾಳಿ

962

ಬಂಟ್ವಾಳ: ಕಾರಿಂಜ ದೇವಸ್ಥಾನದ ಬಳಿ ಮುಸ್ಲಿಂ ಯುವಕರೊಂದಿಗೆ ತಿರುಗಾಡಿದ ಹಿಂದೂ ಯುವತಿಯರನ್ನು ಹಿಡಿದು ಹಿಂದೂ ಜಾಗರಣಾ ವೇದಿಕೆಯವರು ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ನಡೆದಿದೆ. ಯುವತಿಯರ ಜತೆ ಅನ್ಯ ಕೋಮಿನ ಯುವಕರು ಇರುವುದು ತಿಳಿಯುತ್ತಿದ್ದಂತೆ ಕಾರ್ಯ ಪ್ರವೃತ್ತರಾದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿ ಜೋಡಿಗಳನ್ನು ಪೂಂಜಾಲಕಟ್ಟೆ ಪೊಲೀಸರಿಗೆ ಒಪ್ಪಿಸಿದರು. ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆದು ಕೊಂಡು ಹೋಗಿ ತನಿಖೆ ನಡೆಸಿದ್ದಾರೆ. ಲವ್ ಜಿಹಾದಿನ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ. ಈ ವೇಳೆ ಯುವತಿಯರ ಪೋಷಕರನ್ನು ಸ್ಥಳಕ್ಕೆ ಕರೆಯಿಸಬೇಕು. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

See also  ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ -74ನೇ ಗಣರಾಜ್ಯೋತ್ಸವ
  Ad Widget   Ad Widget   Ad Widget   Ad Widget   Ad Widget   Ad Widget   Ad Widget