ಕರಾವಳಿರಾಜಕೀಯ

ಮರಣೋತ್ತರ ಶೌರ್ಯ ಪ್ರಶಸ್ತಿ ಘೋಷಣೆಗೆ ಯು.ಟಿ.ಖಾದರ್ ಒತ್ತಾಯ ! ಕಡಬ ಆನೆ ದಾಳಿ ಪ್ರಕರಣ

ನ್ಯೂಸ್ ನಾಟೌಟ್: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಸಮೀಪ ಸೋಮವಾರ ಬೆಳಗ್ಗೆ ಆನೆ ದಾಳಿಯಿಂದ ಇಬ್ಬರು ಮೃತಪಟ್ಟ ಬಳಿಕ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಸಾರ್ವಜನಿಕರ ತೀವ್ರ ಆಕ್ರೋಶದ ಬಳಿಕ ಮೃತರ ಕುಟುಂಬಕ್ಕೆ ತಲಾ 15 ಲಕ್ಷ ರೂ. ಪರಿಹಾರವನ್ನು ಸರ್ಕಾರ ಘೋಷಿಸಿದೆ.
ಇತ್ತೀಚೆಗೆ ತುಳು ಭಾಷೆಯನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸುವ ಪರವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದ ಉಳ್ಳಾಲದ ಶಾಸಕ ಯು.ಟಿ ಖಾದರ್ ಇಂದು ಮತ್ತೆ ಆನೆ ದಾಳಿಯ ಸಂತ್ರಸ್ತರ ಕುರಿತು ಮಾತನಾಡಿದ್ದಾರೆ. ಆನೆ ದಾಳಿಯ ವೇಳೆ ರಕ್ಷಣೆಗೆ ದಾವಿಸಿ ಪ್ರಾಣ ಕಳೆದುಕೊಂಡವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡುವಂತೆ ಸದನದಲ್ಲಿ ಒತ್ತಾಯಿಸಿದ್ದಾರೆ. ಎಲ್ಲರ ಜೀವಕ್ಕೆ ಬೆಲೆ ಇದೆ ಮಾನವೀಯ ದೃಷ್ಠಿಯಿಂದ ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಬೇಕೆಂದು ಹೇಳುವ ಮೂಲಕ ಸದನದಲ್ಲಿ ಕರಾವಳಿಯ ಜನರ ಸಮಸ್ಯೆಯ ಕುರಿತು ಎಲ್ಲರ ಗಮನ ಸೆಳೆದರು.

ಯುವತಿಯ ರಕ್ಷಣೆಗೆ ಮುಂದಾದ ರಮೇಶ್ ರೈ ಎಂಬವರು ಜೀವ ಕಳೆದುಕೊಂಡಿದ್ದಾರೆ. ಅವರಿಗೆ ಪರಿಹಾರದ ಜತೆಗೆ ಶೌರ್ಯ ಪ್ರಶಸ್ತಿ ಘೋಷಣೆ ಮಾಡಬೇಕು. ಇದು ಬೇರೆಯವರಿಗೆ ಪ್ರೇರಣೆಯಾಗಲಿದೆ ಎಂದು ಖಾದರ್ ವಿಧಾನಸಭೆ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು.

Related posts

ಮರ್ಧಾಳ ಜಂಕ್ಷನ್ ನಲ್ಲಿ ಅಮಾಯಕನಿಗೆ ಗುದ್ದಿದ ಗೋ ಕಳ್ಳರ ಕಾರು..! ರಸ್ತೆಯಲ್ಲೇ ವಿಲವಿಲ ಒದ್ದಾಡಿದ ಮೃತಪಟ್ಟ ವ್ಯಕ್ತಿ..! ತಡರಾತ್ರಿ ಎರಡು ತಾಲೂಕಿನ ಶಾಸಕರು ಓಡೋಡಿ ಬಂದ್ರು..! ಏನಿದು ಘಟನೆ..? ಕಂಪ್ಲೀಟ್ ಡಿಟೀಲ್ಸ್ ಇಲ್ಲಿದೆ ಓದಿ

ಮಡಿಕೇರಿ: ಕುಸಿಯುವ ಭೀತಿಯಲ್ಲಿ ಗ್ಲಾಸ್ ಬ್ರಿಡ್ಜ್ ..!, ವಿರೋಧಿಗಳ ಕುತಂತ್ರವೇ..? ಹೊಸ ಗ್ಲಾಸ್ ಬ್ರಿಡ್ಜ್ ಗೆ ಏನಿದು ಕಂಟಕ..? ಇಲ್ಲಿದೆ ಡಿಟೇಲ್ಸ್

ರಾಜಕೀಯ ಜೀವನಕ್ಕೆ ಪ್ರವೇಶಿಸಲು ಸಿದ್ಧವಾಗಿದ್ದಾರೆ ಈ ಖ್ಯಾತ ಕ್ರಿಕೆಟಿಗ..? ಶೀಘ್ರವೇ ಮತ್ತೊಂದು ಇನಿಂಗ್ಸ್‌ ಆರಂಭ