ದೇಶ-ಪ್ರಪಂಚ

ಪುಲ್ವಾಮಾ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರ ಹತ್ಯೆ

ನ್ಯೂಸ್‌ನಾಟೌಟ್‌: ಜಮ್ಮು- ಕಾಶ್ಮೀರದ ಪುಲ್ವಾಮಾದ ಆವಂತಿಪೋರಾದಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮಂಗಳವಾರ ಬೆಳಗ್ಗೆ ಓರ್ವ ಉಗ್ರ ಹತನಾಗಿದ್ದಾನೆ.

ಆವಂತಿಪೋರಾದಲ್ಲಿ ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದರು. ಈ ಸಂದರ್ಭ ಅಖೀಬ್‌ ಮುಸ್ತಾಕ್‌ ಎಂಬ ಉಗ್ರ ಅಸುನೀಗಿದ್ದಾನೆ. ಅದೇ ಏರಿಯಾದಲ್ಲಿ ಮತ್ತೊಬ್ಬ ಉಗ್ರನನ್ನೂ ಕೊಲ್ಲಲಾಗಿದೆ. ಆತನ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್‌ ಮಾಡಿದ್ದಾರೆ.

ಕಾಶ್ಮೀರದ ಪುಲ್ವಾಮಾದಲ್ಲಿ ಕಳೆದ ಎರಡು ದಿನಗಳ ಹಿಂದೆ ಕಾಶ್ಮೀರಿ ಪಂಡಿತ್ ಸಂಜಯ್‌ ಶರ್ಮಾ ಎಂಬವರನ್ನು ಉಗ್ರರು ಹತ್ಯೆಗೈದಿದ್ದರು. ಈ ಬಳಿಕ ಭದ್ರತಾ ಪಡೆ ಕಾರ್ಯಾಚರಣೆ ಆರಂಭಿಸಿತ್ತು. ಪದಗಂಪೋರಾದಲ್ಲಿ ಉಗ್ರರು ಅವಿತಿರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಇಂದು ಮುಂಜಾನೆ ಪದಗಂಪೋರಾಗೆ ಆಗಮಿಸಿದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣ ಪ್ರತಿ ದಾಳಿ ನಡೆಸಿ ಯೋಧರ ಗುಂಡಿಗೆ ಇಬ್ಬರು ಉಗ್ರರು ಹತರಾಗಿದ್ದಾರೆ.

Related posts

ಸಂಸತ್‌ ದಾಳಿಯ ಮಾಸ್ಟರ್‌ ಮೈಂಡ್‌ ಇನ್ನೂ ಸಿಕ್ಕಿಲ್ಲವೇಕೆ..? ಸಿಕ್ಕ 4 ಆರೋಪಿಗಳು ಹೇಳುತ್ತಿರುವುದೇನು?

ಕೈದಿಯ ಜೊತೆ ಮಹಾಕಾಳಿಯ ದರ್ಶನಕ್ಕೆ ತೆರಳಿದ ಪೊಲೀಸರು..! ಕೈದಿಯ ಕೈ ಹಿಡಿದ ಕಾಳಿ..! ಜನಜಂಗುಳಿಯಲ್ಲಿ ಕೊಲೆ ಆರೋಪಿ ಪರಾರಿ..!

ಅಯ್ಯೋ.. ಇದೇನಪ್ಪಾ ಹುಳುಗಳ ಮಳೆಯೋ..! ಎಂದು ಛತ್ರಿ ಹಿಡಿದು ಓಡಾಡುವ ಜನರು! ಅಸಲಿ ಕಾರಣವೇನು?