ಕರಾವಳಿಸುಳ್ಯ

ನಾಳೆ ಮುಂಬೈನಲ್ಲಿ ‘ಮಕ್ಕರ್ ತಂಡ’ದಿಂದ ಕಾಮಿಡಿ ಶೋ,ಅಮರ ತರಂಗ ತಂಡದ ಇಬ್ಬರು ಸದಸ್ಯರು ಭಾಗಿ

ನ್ಯೂಸ್ ನಾಟೌಟ್ :ನಮ್ಮ ಟಿವಿ ಬಲೆ ತೆಲಿಪಾಲೆ ಕಾಮಿಡಿ ಶೋ ಖ್ಯಾತಿಯ ಪುತ್ತೂರಿನ ಹೆಸರಾಂತ ‘ಮಕ್ಕರ್ ತಂಡ’ದಿಂದ ಕಾಮಿಡಿ ಶೋ ನಡೆಯಲಿದೆ.ನಾಳೆ ವೆಸ್ಟ್ ಮುಂಬೈನ ವಸಾಯಿಯಲ್ಲಿರುವ ಕರ್ನಾಟಕ ಸಂಘ (ರಿ)ಇದರ 36ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ತಂಡ ಪಾಲ್ಗೊಳ್ಳಲಿದೆ.

ಮಕ್ಕರ್ ತಂಡದ ಸಮಗ್ರ ನಿರ್ವಾಹಕ ,ಅಮರ ತರಂಗ ಸುಳ್ಯ ತಂಡದ ನಿರ್ದೇಶಕ ಅಮರಸಮರವೀರ ಕೆದಂಬಾಡಿ ರಾಮಯ್ಯ ಗೌಡ ನಾಟಕದ ಪೆರುವಾಜೆ ಊಕ್ಕಣ್ಣ ಬಂಟ ಮತ್ತು ಕಾವಲುಗಾರ ಪಾತ್ರದಾರಿ ರಂಜಿತ್ ರೈ ಸುಳ್ಯ, ಮಕ್ಕರ್ ತಂಡದ ಸದಸ್ಯ, ಅಮರತರಂಗ ತಂಡದ ಉಪಾಧ್ಯಕ್ಷ , ಅಮರಸಮರವೀರ ಕೆದಂಬಾಡಿ ರಾಮಯ್ಯ ಗೌಡ ನಾಟಕದ ರಾಮಯ್ಯಗೌಡರ ಪಾತ್ರದಾರಿ ಪ್ರಸಾದ್ ಕಾಟೂರು ಸಹಿತವಾಗಿ ಮಕ್ಕರ್ ತಂಡದ 10 ಕಲಾವಿದರ ತಂಡ ಕಾರ್ಯಕ್ರಮ ನೀಡಲು ಮುಂಬೈಗೆ ತೆರಳಿದೆ.ಇದು ಈ ತಂಡದ 2ನೇ ಮುಂಬೈ ಪ್ರದರ್ಶನ ಅನ್ನೋದು ಹೆಮ್ಮೆಯ ವಿಷಯ.

Related posts

ಕಲ್ಲುಗುಂಡಿ: ಬೆಲೆಬಾಳುವ ಮಣ್ಣಿನ ಮಡಿಕೆಗಳನ್ನು ಹೊತ್ತೊಯ್ದ ಕಳ್ಳರು..! ತಡರಾತ್ರಿ ಕಿಡಿಗೇಡಿಗಳಿಂದ ಕೃತ್ಯ..!

ಎಚ್ಚರಿಕೆ ನಡುವೆಯೂ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣರ ಮತ್ತೊಂದು ಡೀಪ್​ ಫೇಕ್​ ವಿಡಿಯೋ ​..!,ವೈರಲ್ ವಿಡಿಯೋ ವೀಕ್ಷಿಸಿ..

30 ಅಡಿ ಆಳದ ಬಾವಿಗೆ ಬಿದ್ದ 1 ವರ್ಷದ ಕರುವನ್ನು ರಕ್ಷಿಸಿದ ಬಜರಂಗದಳದ ಕಾರ್ಯಕರ್ತರು