ಮಹಿಳೆ-ಆರೋಗ್ಯ

ಮನೆಯಲ್ಲೇ ಸಿಗುವ ಅರಿಶಿನದಿಂದಾಗುವ ಲಾಭಗಳೇನು…?

ನ್ಯೂಸ್ ನಾಟೌಟ್ : ಮನೆಯಲ್ಲೇ ಸಿಗುವ ಅರಿಶಿನದಿಂದ ಆರೋಗ್ಯಕ್ಕೆ ಸಂಬಂಧಿಸಿದ ಅದೆಷ್ಟೋ ಔಷಧಿ ಗುಣಗಳು ಸಿಗುತ್ತದೆ. ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಸುಲಭ ರೀತಿಯಲ್ಲಿ ಔಷಧಿಗಳನ್ನು ತಯಾರಿಸಬಹುದು. ಅರಿಶಿನ ಅಂತೂ ಕೆಲವರ ಮನೆಯಲ್ಲಿ ಇದ್ದೇ ಇರುತ್ತದೆ. ಆದರೆ ಅದರಿಂದ ಎಷ್ಟೆಲ್ಲಾ ಪ್ರಯೋಜನವಾಗುತ್ತದೇ ಎಂದು ತಿಳಿದಿರುವುದಿಲ್ಲ. ಬೇವು ಮತ್ತು ಅರಿಶಿನವನ್ನು ಬೆಚ್ಚಗಿನ ನೀರಿನೊಂದಿಗೆ, ಸ್ವಲ್ಪ ಜೇನು ತುಪ್ಪ ಬೆರೆಸಿ ಸೇವಿಸುವುದರಿಂದ ಜೀವಕೋಶಗಳನ್ನು ಹಿಗ್ಗಿಸಿ ಶಕ್ತಿಯನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಅರಿಶಿನದಿಂದಾಗುವ ಕೆಲವೊಂದು ಪ್ರಯೋಜನಗಳು ಕೆಳಗಿದೆ.

ಅರಿಶಿನವು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಚೈತನ್ಯ ಶಕ್ತಿಗಳಿಗೆ ಶುಭ್ರತೆಯನ್ನು ತರುತ್ತದೆ. ಅರಿಶಿನವು ದೇಹಕ್ಕೆ ಲಾಭದಾಯಕವಷ್ಟೇ ಅಲ್ಲದೇ ನಿಮ್ಮ ಪ್ರಾಣಮಯ ಕೋಶದ ಮೇಲೂ ದೊಡ್ಡ ಪರಿಣಾಮವನ್ನು ಹೊಂದಿದೆ. ಅದು ರಕ್ತ, ಶರೀರ ಮತ್ತು ಶಕ್ತಿ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ. ಬಾಹ್ಯ ಶುದ್ಧೀಕರಣಕ್ಕೆ ಸ್ನಾನದ ನೀರಿಗೆ ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ ಸ್ನಾನ ಮಾಡಿದರೆ ಶರೀರ ಚೈತನ್ಯಶೀಲವಾಗಿ ಹೊಳೆಯುತ್ತದೆ.

ಶೀತದಿಂದ ಮೂಗು ಕಟ್ಟಿದ ಸಮಸ್ಯೆ ಇದ್ದವರಿಗೆ ಬೇವು, ಕಾಳು ಮೆಣಸು, ಜೇನು ತುಪ್ಪ ಮತ್ತು ಅರಿಶಿನದ ಬಳಕೆಯಿಂದ ಉತ್ತಮ ಲಾಭವನ್ನು ಪಡೆಯಬಹುದು. 10-12 ಕಾಳು ಮೆಣಸನ್ನು ಕುಟ್ಟಿ ಇಡೀ ರಾತ್ರಿ (8 ರಿಂದ 12 ಗಂಟೆಗಳ ಕಾಲ) ಜೇನು ತುಪ್ಪದಲ್ಲಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಈ ಮಿಶ್ರಣವನ್ನು ಕಾಳು ಮೆಣಸಿನ ಸಮೇತ ಜಗಿದು ತಿನ್ನಬೇಕು. ಜೇನು ತುಪ್ಪದೊಂದಿಗೆ ಸ್ವಲ್ಪ ಅರಿಶಿನವನ್ನು ಬೆರೆಸಿ ಸೇವಿಸಿದರೂ ಲಾಭವಾಗುತ್ತದೆ. ಇದರಿಂದ ಕಫವು ಸಹಜವಾಗಿಯೇ ಕಡಿಮೆಯಾಗುತ್ತದೆ.

ಕ್ಯಾನ್ಸರ್ ಎಂದರೆ ಶರೀರವು ಮಾನವನ ವಿರುದ್ಧವೇ ಕೆಲಸ ಮಾಡುತ್ತಿದೆ ಎಂದರ್ಥವಾಗಿದೆ. ಕೆಲವು ಜೀವಕೋಶಗಳು ವಿರುದ್ಧ ತಿರುಗಿಬಿದ್ದಿವೆ. ಇದನ್ನು ತಡೆಗಟ್ಟಲು ಶರೀರವನ್ನು ನಿಯಮಿತವಾಗಿ ಶುದ್ಧೀಕರಿಸುವುದು ಒಳ್ಳೆಯದು. ಹಾಗಗೀ ಬರೀ ಹೊಟ್ಟೆಗೆ ಅರಿಶಿನವನ್ನು ಸೇವಿಸುವುದು ಒಂದು ಪರಿಣಾಮಕಾರಿ ಶುದ್ಧೀಕರಣದ ವಿಧಾನ. ಕ್ಯಾನ್ಸರ್ ಬಂದ ನಂತರ ಇದು ಅಷ್ಟು ಪರಿಣಾಮಕಾರಿ ಇಲ್ಲದಿರಬಹುದು. ಆದರೆ ಒಂದು ಗೋಲಿ ಗಾತ್ರದ ಅರಿಶಿನದ ಉಂಡೆ ಮತ್ತು ಬೇವಿನ ಪುಡಿಯ ಉಂಡೆಯನ್ನು ಮುಂಜಾನೆ ಬರೀ ಹೊಟ್ಟೆಯಲ್ಲಿ ಸೇವಿಸುವುದರಿಂದ ಶರೀರ ಶುದ್ಧೀಕರಣಗೊಂಡು, ಕ್ಯಾನ್ಸರ್ ಜೀವಕೋಶಗಳನ್ನು ನಾಶ ಮಾಡುತ್ತದೆ.

Related posts

ಮಲೆನಾಡಿನಲ್ಲಿ ಮತ್ತೆ ಕಾಣಿಸಿಕೊಂಡ ಮಂಗನ ಕಾಯಿಲೆ..! ಕಳೆದ ವರ್ಷ 132 ಜನರಿಗೆ ಬಾಧಿಸಿದ್ದ ಖಾಯಿಲೆ 4 ಜನರನ್ನು ಬಲಿ ಪಡೆದಿತ್ತು..!

ಸಂಪಾಜೆ: ಆರೋಗ್ಯ ಇಲಾಖೆ ವತಿಯಿಂದ ಮನೆಮನೆ ಭೇಟಿ, ಅಪಾಯಕಾರಿ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ

H3N2 Virus: ಆತಂಕ ಸೃಷ್ಟಿಸಿರುವ ಹೆಚ್‌3ಎನ್‌2 ಸೋಂಕಿಗೆ ರಾಜ್ಯದಲ್ಲಿ ಮೊದಲ ಬಲಿ !