Uncategorized

ತುಳುನಾಡಿನ ಕೊರಗಜ್ಜ ದೈವ ಕನ್ನಡ ಮಾತನಾಡಲು ಹೇಗೆ ಸಾಧ್ಯ ?

ನ್ಯೂಸ್ ನಾಟೌಟ್: ತುಳುನಾಡಿನ ಭಕ್ತರ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ಪವಾಡಗಳು ದಿನದಿಂದ ದಿನಕ್ಕೆ ವಿವಿಧ ಕಡೆ ವ್ಯಾಪಿಸುತ್ತಿದೆ. ಅಜ್ಜನ ಹೆಸರಲ್ಲಿ ಹಣಕ್ಕಾಗಿ ಕೆಲವರು ಘಟ್ಟದ ಮೇಲೆ ಕೊರಗಜ್ಜನ ಗುಡಿ ಕಟ್ಟಿ ಕೋಲ ಕೊಟ್ಟು ಭಾರಿ ಪ್ರಮಾದ ಎಸಗಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಳುನಾಡಿನ ದೈವ ನರ್ತಕರು ಕೂಡ ಇದೀಗ ಮೈಸೂರು, ಬೆಂಗಳೂರಿನಲ್ಲಿ ಕೊರಗಜ್ಜನ ದೈವಸ್ಥಾನಗಳನ್ನು ಮಾಡಿರುವುದಕ್ಕೆ ಸಿಡಿದೆದ್ದಿದ್ದಾರೆ. ಈ ಬಗ್ಗೆ ದೈವ ನರ್ತಕರೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊರಗಜ್ಜ ನಮ್ಮ ತುಳುನಾಡ ದೈವ. ಕೊರಗಜ್ಜನ ಭಾಷೆ ತುಳು. ಅದು ಹೇಗೆ ಕರಾವಳಿಯ ದೈವ ಕನ್ನಡದಲ್ಲಿ ಮಾತನಾಡಲು ಸಾಧ್ಯ ಎಂದು ದೈವನರ್ತಕರು ಪ್ರಶ್ನಿಸಿದ್ದಾರೆ. ಕರಾವಳಿ ಜನರ ನಂಬಿಕೆ ಹಾಗೂ ಕೊರಗಜ್ಜನ ಹೆಸರಿಗೆ ಧಕ್ಕೆ ತರುವಂತದ್ದು ಅಕ್ಷಮ್ಯ. ಈ ಬಗ್ಗೆ ಕೊಡಗಿನ ದೈವಾರಾಧಕರು, ದೈವ ನರ್ತಕರು ಸಭೆ ನಡೆಸಿ ಮುಂದಿನ ಕ್ರಮದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತುಳು ಅಕಾಡೆಮಿಯ ಸದಸ್ಯ ಎಂ.ರವಿ ತಿಳಿಸಿದ್ದಾರೆ.

Related posts

ಸಮಾಜ ಹಾಳು ಮಾಡುತ್ತಿರುವ RSS ಮೇಲೂ ಕ್ರಮ ತೆಗೊಳ್ಳಿ: ಸಿದ್ದರಾಮಯ್ಯ

“ಕಾಂಗ್ರೆಸ್ ನವರು 10 ಕೆ.ಜಿ ಅಕ್ಕಿ ಕೊಡುತ್ತೇವೆಂದು ಮೋಸ ಮಾಡಿದ್ದಾರೆ” ಸಿದ್ದರಾಮಯ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಬೊಮ್ಮಾಯಿ

ಮಡಿಕೇರಿ: ಕೊಡಗಿಗೆ ರೈಲು ನಿಲ್ದಾಣದ ಭಾಗ್ಯವಿಲ್ಲ, ಇರುವ ಏಕೈಕ ಮಕ್ಕಳ ಆಟದ ರೈಲು ಸಂಚಾರವಿಲ್ಲ..! ಜನ ನಾಯಕರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ