ಕ್ರೈಂದೇಶ-ಪ್ರಪಂಚ

ಜೀಪ್‌-ಟ್ರಕ್‌ ಭೀಕರ ಅಪಘಾತ; ಒಂದೇ ಕುಟುಂಬದ ಹತ್ತು ಮಂದಿ ಸಾವು!

ನ್ಯೂಸ್‌ನಾಟೌಟ್‌: ಬೊಲೆರೋ ವಾಹನ – ಟ್ರಕ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 10 ಮಂದಿ ಸ್ಥಳದಲ್ಲೇ ಮೃತಪಟ್ಟ ದುರಂತ ಘಟನೆ ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯಲ್ಲಿ ಜಗತ್ರಾ ಬಳಿಯ ಕಂಕೇರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ತಡರಾತ್ರಿ (ಮೇ 3) ನಡೆದಿದೆ.

ಬೊಲೆರೋ ವಾಹನದಲ್ಲಿ ಕುಟುಂಬ ಸೋರಂನಿಂದ ಮರ್ಕಟೋಲಾಗೆ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೊಲೆರೋ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.

ಘಟನೆಯಲ್ಲಿ ಒಂದು ಮಗು ಗಂಭೀರ ಗಾಯಗೊಂಡಿದೆ. ಉಳಿದ ಗಾಯಾಳುಗಳನ್ನು ರಾಯ್‌ಪುರಕ್ಕೆ ರವಾನಿಸಲಾಗಿದ್ದು, ಟ್ರಕ್ ಚಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

Related posts

ಕೊಡಗು: ರಸ್ತೆಯಲ್ಲಿ ತಡರಾತ್ರಿ ಹುಲಿ ಪ್ರತ್ಯಕ್ಷ..! ಜನರಲ್ಲಿ ಆತಂಕ..!

ಉಗ್ರರ ಒಳನುಸುಳುವಿಕೆಗೆ ಸೇನೆಯಿಂದ ತಕ್ಕ ಉತ್ತರ..! ರಾತ್ರೋರಾತ್ರಿ ಉಗ್ರನ ಶವ ಎಳೆದೊಯ್ದದ್ದೇಗೆ ಸಹಚರರು..?

ಮೊಬೈಲ್ ಬಳಸದಂತೆ ಬೈದ ತಂದೆ, ಮನನೊಂದು 18ರ ಯುವತಿ ನೇಣಿಗೆ ಶರಣು..!