ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ರೈಲುಗಳ ನಡುವೆ ಢಿಕ್ಕಿ: ಅಪಘಾತದ ತೀವ್ರತೆಗೆ ಭೂಕಂಪನದ ಅನುಭವ..!

ನ್ಯೂಸ್ ನಾಟೌಟ್: ಒಟ್ಟು 350 ಮಂದಿ ಪ್ರಯಾಣಿಸುತ್ತಿದ್ದ ರೈಲುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಕನಿಷ್ಠ 26 ಮಂದಿ ಮೃತಪಟ್ಟು,85 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಗ್ರೀಸ್‌ ನಲ್ಲಿ ಮಂಗಳವಾರ ಫೆ.28 ರಂದು ತಡರಾತ್ರಿ ನಡೆದಿರುವುದಾಗಿ ಮೂಲಗಳು ತಿಳಿಸಿವೆ.

ಅಥೆನ್ಸ್‌ನ ಉತ್ತರ ನಗರವಾದ ಥೆಸಲೋನಿಕಿಗೆ ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ರೈಲು ಮಧ್ಯ ಗ್ರೀಸ್‌ನ ಲಾರಿಸ್ಸಾ ನಗರದಿಂದ ಬರುತ್ತಿದ್ದ ಸರಕು ತುಂಬಿದ ಕಾರ್ಗೋ ರೈಲಿಗೆ ಢಿಕ್ಕಿ ಹೊಡೆದ ಪರಿಣಾಮ ಪ್ಯಾಸೆಂಜರ್ ರೈಲಿನ ಮೊದಲ ನಾಲ್ಕು ಬೋಗಿಗಳು ಹಳಿ ತಪ್ಪಿದೆ. ಆ ಬಳಿಕ ಮೊದಲ ಎರಡು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಥೆಸಲಿ ಪ್ರದೇಶದ ಗವರ್ನರ್ ಕಾನ್ಸ್ಟಾಂಟಿನೋಸ್ ಅಗೋರಾಸ್ಟೋಸ್ ಹೇಳಿದ್ದಾರೆ.

350 ಮಂದಿಯಲ್ಲಿ ಸುಮಾರು 250 ಮಂದಿಯನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದ್ದು, 26 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನುಳಿದ 85 ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಅಥೆನ್ಸ್‌ನ ಉತ್ತರ ನಗರ ಥೆಸಲೋನಿಕಿಯ ಗವರ್ನರ್ ಕಾನ್ಸ್ಟಾಂಟಿನೋಸ್ ಅಗೋರಾಸ್ಟೋಸ್ ತಿಳಿಸಿದ್ದಾರೆ. ರೈಲುಗಳು ಢಿಕ್ಕಿ ಹೊಡೆದಾಗ ನಮಗೆ ಭೂಕಂಪನದ ಅನುಭವವಾಯಿತೆಂದು ಪ್ರಯಾಣಿಕರೊಬ್ಬರು ಅನುಭವ ಹಂಚಿಕೊಂಡಿದ್ದಾರೆ.

Related posts

ಯುರೋಪ್‌ನಲ್ಲಿ ಇಸ್ಲಾಮ್‌ಗೆ ಜಾಗವಿಲ್ಲ ಎಂದದ್ದೇಕೆ ಇಟಲಿ ಪ್ರಧಾನಿ..? ಏನಿದು ಯುರೋಪಿಯನ್ ನಾಗರಿಕತೆ ಮತ್ತು ಇಸ್ಲಾಮಿಕ್ ಸಂಸ್ಕೃತಿ ನಡುವಿನ ತಿಕ್ಕಾಟ?

ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅರೆಸ್ಟ್..! ಅಷ್ಟಕ್ಕೂ ಆಕೆ ಮಾಡಿದ ಪೋಸ್ಟ್ ನಲ್ಲೇನಿದೆ..?

ಕಾಸರಗೋಡು: ಪ್ರಕ್ಷುಬ್ದಗೊಂಡ ಸಮುದ್ರ..! ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗರಿಗೆ ನಿರ್ಬಂಧ, ಮೀನುಗಾರರಲ್ಲಿ ಆತಂಕ..! ಇಲ್ಲಿದೆ ವಿಡಿಯೋ