ಕ್ರೈಂ

ರೈಲು ಡಿಕ್ಕಿ, ಯುವಕ ದಾರುಣ ಸಾವು

ನ್ಯೂಸ್ ನಾಟೌಟ್: ಬಂಟ್ವಾಳದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಯುವಕನೋರ್ವ ಸಾವಿಗೀಡಾದ ಘಟನೆ ನಡೆದಿದೆ.

ಪ್ರವೀಣ್ ಪೂಜಾರಿ (೪೦ ) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಮೊಂಡಕಾಪು ಎಂಬಲ್ಲಿ ಪ್ರವೀಣ್ ರೈಲು ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ಪ್ರವೀಣ್ ಕೆಲವು ದಿನಗಳಿಂದ ತೀವ್ರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಪ್ರವೀಣ್ ದೇಹ ದೂರಕ್ಕೆ ಎಸೆಯಲ್ಪಟ್ಟಿದೆ. ತಲೆಗೆ ಗಂಭೀರ ಪೆಟ್ಟು ಬಿದ್ದುದರಿಂದ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಇಸ್ಲಾಂಗೆ ಮತಾಂತರವಾಗಿ ಪಾಕ್ ಗೆ ಹಾರಿದ ವಿವಾಹಿತ ಹಿಂದೂ ಮಹಿಳೆ! ಗಂಡನಿಗೆ ಬರ್ತೇನೆಂದು ಹೇಳಿ ಮುಸ್ಲಿಂ ಗೆಳೆಯನ ಜೊತೆ ಪರಾರಿ! ಇಲ್ಲಿದೆ ವೈರಲ್ ವಿಡಿಯೋ

ಮುಸ್ಲಿಂ ಯುವಕನ ಜೊತೆ ಊರುಬಿಟ್ಟು ಬಂದವಳು ಸೌತಡ್ಕದಲ್ಲಿ ಸಿಕ್ಕಿಬಿದ್ದಳು..!, ಫೋನ್ ಪೇ ನಲ್ಲಿ ಹಣ ಪಾವತಿಸಿದಾಗ ಸಿಕ್ಕಿಬಿದ್ದ ಸಲೀಂ

ರಸ್ತೆ ಬದಿ ನಿಂತು ಜಗಳವಾಡುತ್ತಿದ್ದವರಿಗೆ ಬಸ್ ಡಿಕ್ಕಿ..! ಇಬ್ಬರು ಸ್ಥಳದಲ್ಲೇ ಸಾವು..!