ಸುಳ್ಯ

ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಾಡುತ್ತಿದ್ದಾಗ ದುರಂತ,ಟ್ಯಾಪಿಂಗ್ ಕತ್ತಿ ಎದೆಗೆ ಹೊಕ್ಕು ಮಹಿಳೆ ಮೃತ್ಯು

ನ್ಯೂಸ್ ನಾಟೌಟ್ : ತಮ್ಮದೇ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಾಡುತ್ತಿದ್ದಾಗ ಟ್ಯಾಪಿಂಗ್ ಕತ್ತಿ ಆಕಸ್ಮಿಕವಾಗಿ ಎದೆಗೆ ಹೊಕ್ಕು ಗಂಭೀರ ಗಾಯಗೊಂಡು ಮಹಿಳೆಯೋರ್ವರು ಮೃತಪಟ್ಟ ದಾರುಣ ಘಟನೆ ನಡೆದಿದೆ. ಎಡಮಂಗಲ ಗ್ರಾಮದ ಬಳಕ್ಕಬೆ ಎಂಬಲ್ಲಿ ಈ ಘಟನೆ ಇಂದು ಬೆಳಗ್ಗೆ 7 ಗಂಟೆಗೆ ಸಂಭವಿಸಿದೆ.

ಶ್ರೀಮತಿ ಗೀತಾ ಮೃತ ಮಹಿಳೆ. ಎಡಮಂಗಲ ಗ್ರಾಮದ ಬಳಕ್ಕಬೆ ನಿವಾಸಿ ಶಿವರಾಮ ಎಂಬವರ ಪತ್ನಿ.ಗೀತಾರವರು ತಮ್ಮದೇ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮುಗಿಸಿ ಸುಮಾರು 7 ಗಂಟೆ ಹೊತ್ತಿಗೆ ಮನೆಗೆ ವಾಪಾಸಾಗುತ್ತಿದ್ದರು. ಈ ವೇಳೆ ಎಡವಿ ಬಿದ್ದರೆನ್ನಲಾಗಿದೆ. ಈ ಸಂದರ್ಭ ಹರಿತವಾದ ಕತ್ತಿ ಎದೆಯೊಳಗೆ ಹೊಕ್ಕು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪತಿ ಪೊಲೀಸ್ ದೂರು ನೀಡಿದ್ದು, ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Related posts

ಗುತ್ತಿಗಾರು:ಸ್ಕೂಟಿ ಮತ್ತು ಬಸ್ ಮಧ್ಯೆ ಭೀಕರ ಅಪಘಾತ: ಬೈಕ್‌ ಸವಾರ ಮೃತ್ಯು,ಬಾಲಕಿಗೆ ಗಂಭೀರ ಗಾಯ

ಸುಳ್ಯ: ಐರಾವತ ಬಸ್ ಜೀಪ್ ನಡುವೆ ಅಪಘಾತ..! ಜೀಪ್ ಚಾಲಕನಿಗೆ ಗಾಯ

ಕೊಡಗು ಸಂಪಾಜೆ: ದೇವರಕೊಲ್ಲಿ ಸಮೀಪ ಟೀ ಅಂಗಡಿಗೆ ನುಗ್ಗಿದ ಕಾರು..!, ಅಂಗಡಿ, ಮೂರು ಬೈಕ್‌ಗಳು ಜಖಂ