ಕ್ರೈಂದೇಶ-ಪ್ರಪಂಚ

15 ತಿಂಗಳ ಮಗುವನ್ನು ಬಿಸಿನೀರಿಗೆ ಮುಳುಗಿಸಿ ಕೊಂದ..! ಇಲ್ಲಿದೆ ವಿವಾಹಿತೆಯೊಂದಿಗೆ ಪ್ರೀತಿಗೆ ಬಿದ್ದಾತನ ರೋಚಕ ಸ್ಟೋರಿ!

ನ್ಯೂಸ್ ನಾಟೌಟ್ :  ವ್ಯಕ್ತಿಯೊಬ್ಬ 15 ತಿಂಗಳ ಮಗುವನ್ನು ಕುದಿಯುವ ನೀರಿನ ಬಕೆಟ್‌ನಲ್ಲಿ ಹಾಕಿ ಕೊಂದಿರುವ ಘಟನೆ ಪುಣೆಯಲ್ಲಿ ಏಪ್ರಿಲ್ 6 ರಂದು ನಡೆದಿದೆ. ಪೋಲೀಸರ ಪ್ರಕಾರ, ವ್ಯಕ್ತಿ ಹುಡುಗನ ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು ಮತ್ತು ಮದುವೆಯಾಗಲು ನಿರಾಕರಿಸಿದ್ದಕ್ಕಾಗಿ ಮನನೊಂದಿದ್ದನು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಪುಣೆಯ ಶೇಟ್ ಪಿಂಪಲಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಬಾಲಕ ಏಪ್ರಿಲ್ 18ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ ಎಂದು ವರದಿ ತಿಳಿಸಿದೆ.

ವ್ಯಕ್ತಿಯನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿದ್ದು ತನಿಖೆಯ ಸಲುವಾಗಿ ಗೌಪ್ಯವಾಗಿರಿಸಲಾಗಿತ್ತು, ಪೊಲೀಸ್ ಇನ್ಸ್‌ಪೆಕ್ಟರ್ ವೈಭವ್ ಶಿಂಗಾರೆ ತನಿಖೆಯ ವಿವರಗಳನ್ನು ಒದಗಿಸಿದ್ದಾರೆ.

ಮಹಿಳೆ ಮನೆಯಲ್ಲಿ ಇಲ್ಲದ ವೇಳೆ ಆರೋಪಿಯು ಮಗುವನ್ನು ಕುದಿಯುವ ನೀರಿನ ಬಕೆಟ್‌ಗೆ ಹಾಕಿದ್ದಾನೆ ಎನ್ನಲಾಗಿದೆ. ಮಗು ಆಕಸ್ಮಿಕವಾಗಿ ಬಿಸಿ ನೀರಿನ ಬಕೆಟ್‌ಗೆ ತಗುಲಿತು ಮತ್ತು ಬಿಸಿನೀರು ಅವನ ಮೇಲೆ ಬಿದ್ದಿತು ಎಂದು ವ್ಯಕ್ತಿಯು ಕಥೆ ಕಟ್ಟಿದ್ದಾನೆ ಎನ್ನಲಾಗಿದೆ. ಆದರೆ, ಮಹಿಳೆಯ ಸಹೋದರಿ ಆರೋಪಿಯು ಬಾಲಕನನ್ನು ಕುದಿಯುವ ನೀರಿನ ಬಕೆಟ್‌ಗೆ ಹಾಕುವುದನ್ನು ನೋಡಿದ್ದಾಳೆ ಎನ್ನಲಾಗಿದೆ.

ಆಕೆಗೆ ವ್ಯಕ್ತಿಯಿಂದ ಬೆದರಿಕೆ ಇತ್ತು, ಆದರೆ ಮಗುವಿನ ಸಾವಿನ ನಂತರ, ಆಕೆ ನಿಜ ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ. ನಂತರ ಮಗುವಿನ ತಾಯಿ ಪೊಲೀಸರನ್ನು ಸಂಪರ್ಕಿಸಿ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಕಲ್ಮಂಜ: ಹೃದಯಾಘಾತಕ್ಕೆ 4 ತಿಂಗಳ ಗರ್ಭಿಣಿ ಬಲಿ, ಮದುವೆಯಾಗಿ 7 ತಿಂಗಳಲ್ಲೇ ಇಹಲೋಕ ತ್ಯಜಿಸಿದ 20 ವರ್ಷದ ಯುವತಿ..!

ಬೆಳ್ತಂಗಡಿ: ಮೂರು ವರ್ಷದ ಮಗು ದುರಂತ ಅಂತ್ಯ..! ರಸ್ತೆ ಬದಿಯ ಮನೆಯಿಂದ ಹೊರ ಬಂದ ಮಗು ಮತ್ತೆ ಮನೆ ಸೇರಲೇ ಇಲ್ಲ..!

ಸುಳ್ಯ: ಮಲಗಿದ್ದ ಅಪರಿಚಿತ ವ್ಯಕ್ತಿಯ ಮೇಲೆ ಹತ್ತಿದ ವಾಹನ, ಗಂಭೀರ ಗಾಯ, ಆಸ್ಪತ್ರೆಗೆ ದಾಖಲು