ಕರಾವಳಿ

ಉಪ್ಪಿನಂಗಡಿ: ತಡರಾತ್ರಿ ಎಟಿಎಂನಿಂದ ಕಳವಿಗೆ ಯತ್ನ,ಮುಖಗವಸು, ಕೈಗೆ ಗ್ಲೌಸ್‌ ಧರಿಸಿ ಬಂದಿದ್ದ ಕಳ್ಳರು..ಮುಂದೇನಾಯ್ತು?

ನ್ಯೂಸ್‌ ನಾಟೌಟ್‌ : ಎಟಿಎಂ ಕೇಂದ್ರವೊಂದಕ್ಕೆ ತಡರಾತ್ರಿ ಕಳ್ಳರು ನುಗ್ಗಿ ಕಳವಿಗೆ ಯತ್ನಿಸಿದ ಘಟನೆ ಬಾರ್ಯ ಮೂರುಗೋಳಿಯಲ್ಲಿ ಸಂಭವಿಸಿದೆ.

ಕಳ್ಳರು ಮುಖಕವಚ, ಕೈಗೆ ಗ್ಲೌಸ್‌ ಧರಿಸಿ ಎಟಿಎಂ ಮೆಷಿನ್‌ ಮುರಿಯಲು ಪ್ರಯತ್ನಿಸಿದ್ದು, ಈ ವೇಳೆ ಬಾಗಿಲು ತೆರೆಯುವ ಪಾಸ್‌ವರ್ಡ್‌ ಅವರಿಗೆ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಈ ಸಂದರ್ಭ ನಗದು ಕೋಶದ ಬಾಗಿಲು ತೆರೆಯಲು ವಿಫ‌ಲರಾಗಿದ್ದಾರೆ ಎನ್ನಲಾಗಿದೆ.

ಎಟಿಎಂ ಯಂತ್ರ ತೆರೆಯಲು ತಂತ್ರಜ್ಞರ ಆಗಮನದ ಬಳಿಕ ಹಣ ಏನಾದರೂ ತೆಗೆದಿದ್ದಾರೆಯೇ ಎನ್ನುವ ನಿಖರ ಮಾಹಿತಿ ಲಭಿಸಲಿದೆ.ಬೆರಳಚ್ಚು ತಜ್ಞರು ಹಾಗೂ ಶ್ವಾನದಳದವರು ಪರಿಶೀಲನೆ ನಡೆಸಿದ್ದಾರೆ.

Related posts

ಶ್ರೀ ಶಾರದಾಂಬಾ ಉತ್ಸವ ಶೋಭಾಯಾತ್ರೆ: ಗಮನ ಸೆಳೆದ ಕೆದಂಬಾಡಿ ರಾಮಯ್ಯ ಗೌಡರ ಸ್ತಬ್ಧಚಿತ್ರ, ಜನಮನ ಗೆದ್ದ ಭಜನಾ ಕುಣಿತ, ಆಕರ್ಷಕ ಮೆರವಣಿಗೆ

ಕರಾವಳಿಯಲ್ಲಿ ಮುಂದುವರಿದ ವರ್ಷಧಾರೆ, ನಾಳೆಯೂ (ಜು.7 )ದಕ್ಷಿಣಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಗ್ರಾ.ಪಂ. ಅಧ್ಯಕ್ಷೆಯ ವಿಶೇಷ ಸಾಧನೆ! ಕಳೆದ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದರು!