ನ್ಯೂಸ್ ನಾಟೌಟ್ : ಅಣ್ಣನೋರ್ವ ತಮ್ಮನಿಗೆ ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ರೆಂಜಿಲಾಡಿಯಿಂದ ವರದಿಯಾಗಿದೆ.ಈ ಪ್ರಕರಣ ಕಡಬ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು,ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೆಂಜಿಲಾಡಿ ಗ್ರಾಮದ ಗಂಗಾಧರ (36) ಎಂಬವವರು ಜ.13ರಂದು ಬೆಳಗ್ಗೆ ತನ್ನ ಮನೆಯ ಎದುರಿನಲ್ಲಿ ಬೆಳೆದಿರುವ ಕಳೆ ಹುಲ್ಲನ್ನು ತೆಗೆಯುತ್ತಿರುವಾಗ ಅವರ ಅಣ್ಣ ವಸಂತ ಎಂಬುವವರು ಅಲ್ಲಿಗೆ ಬಂದಿದ್ದರು.ಈ ವೇಳೆ ಹುಲ್ಲು ತೆಗೆಯುವ ವಿಚಾರದಲ್ಲಿ ತಕರಾರು ತೆಗೆದಿದ್ದಲ್ಲದೇ ಗಂಗಾಧರ ಹಾಗೂ ಅವರ ಪತ್ನಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.