ಕರಾವಳಿ

ಇದು ಬರೋಬ್ಬರಿ 20 ಅಡಿಯ ಅತ್ಯಂತ ಉದ್ದವಾದ ಪೆನ್ ..!ಇಂಡಿಯಾ ಬುಕ್ ಆಫ್ ರೆಕಾರ್ಡ್‌ʼನಲ್ಲಿ ಸ್ಥಾನ ಪಡೆದ ಈ ಪೆನ್ನಿನ ವಿಶೇಷತೆಯೇನು ಗೊತ್ತಾ?

ನ್ಯೂಸ್ ನಾಟೌಟ್ :ತಂತ್ರಜ್ಞಾನ ಎಷ್ಟೇ ಮುಂದುವರಿದರೂ,ಕಂಪ್ಯೂಟರ್‌ ಮೂಲಕ ಉದ್ದುದ್ದ ಬಿಲ್‌ಗಳು ಬಂದ್ರೂ ಕೂಡ ನಮಗೆ ಪ್ರತಿ ನಿತ್ಯ ಪೆನ್‌ಗಳ ಬಳಕೆ ಇದ್ದೇ ಇರುತ್ತದೆ.ಶಾಲಾ ಮಕ್ಕಳಿಗಂತು ಇದರ ಬಳಕೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಮಾರ್ಕೆಟ್‌ಗಳಲ್ಲಿ ಸಿಗುವ ಪೆನ್ನಿನ ಗಾತ್ರ 2 ಅಡಿಗಳಷ್ಟು ಉದ್ದವಿರಬಹುದು.ಆದರೆ ಇಲ್ಲೊಬ್ಬರು ವ್ಯಕ್ತಿ ಬರೋಬ್ಬರಿ 20 ಅಡಿ ಉದ್ದದ ಪೆನ್ನನ್ನು ರೆಡಿ ಮಾಡಿದ್ದಾರೆ. ಇದರ ವಿಶೇಷತೆಗಳೇನು ಗೊತ್ತಾ ಇಲ್ಲಿದೆ ಮಾಹಿತಿ..

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆವಿನಹಳ್ಳಿಯ ಗಣೇಶ್ ಹಾಡ್‌ವೇರ್ ಮತ್ತು ಜೈ ಗಣೇಶ್ ವುಡ್‌ವರ್ಕ್ ಮಾಲೀಕ ಕೃಷ್ಣಮೂರ್ತಿ ಆಚಾರ್ ಈ ಪೆನ್ನನ್ನು ರೆಡಿ ಮಾಡಿದ್ದಾರೆ.ಸುಮಾರು 20ಅಡಿ ಉದ್ದದ ವಿಶಿಷ್ಟ ರೀತಿಯ ಪೆನ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಸಿಕ್ಕಿದೆ.

ಕುಶಲಕರ್ಮಿ ಕೃಷ್ಣಮೂರ್ತಿ ಆಚಾರ್ ಅವರು ಹತ್ತು ವರ್ಷಗಳ ಹಿಂದೆ ತಯಾರಿಸಿದ್ದ ಸುಮಾರು 20 ಅಡಿ ಉದ್ದದ ಪೆನ್‌ಗೆ ಇದೀಗ ಮಾನ್ಯತೆ ಸಿಕ್ಕಿದೆ. ನವದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ದಾಖಲಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೃಷ್ಣಮೂರ್ತಿ ಆಚಾರ್ ಅವರು ವಿಶ್ವಕರ್ಮಸ್ ಎಂಬ ಹೆಸರಿನಲ್ಲಿ ಈ ಪೆನ್ನನ್ನು ತಯಾರಿಸಿದ್ದರು. ಈ ಬೃಹತ್ ಪೆನ್‌ಗೆ ಹೈಬ್ರಿಡ್ ಅಕೇಶಿಯಾವನ್ನು ಬಳಕೆ ಮಾಡಿ ಸುಮಾರು 15 ದಿನಗಳ ನಿರಂತರ ಕೆಲಸದ ಮೂಲಕ ತಯಾರಿಸಿದ್ದರು. ಈ ವಿಶೇಷವಾದ ಪೆನ್ ಮಾಹಿತಿಯನ್ನು ಗಿನ್ನಿಸ್ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಕಳಿಸಲಾಗಿತ್ತು.ಸದ್ಯ ಅವರ ಶ್ರಮಕ್ಕೆ ಸಿಕ್ಕಿದ ಜಯ ಎಂಬಂತೆ ಇದೀಗ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಪೆನ್‌ಗೆ ಸ್ಥಾನ ಸಿಕ್ಕಿದೆ.

Related posts

ಸೌಜನ್ಯ ಮನೆಗೆ ಸುಳ್ಯ, ಪುತ್ತೂರು, ಕಡಬ, ವಿಟ್ಲ, ಮಂಗಳೂರು ಒಕ್ಕಲಿಗರ ಯುವ ಸಂಘದ ಪದಾಧಿಕಾರಿಗಳು ಭೇಟಿ, ಸೌಜನ್ಯ ಕುಟುಂಬಕ್ಕೆ ನಾವಿದ್ದೇವೆ ಎಂದು ಧೈರ್ಯ ತುಂಬಿದ ಯುವ ಸಂಘ

ರಾಷ್ಟ್ರ ಮಟ್ಟದ ಚಕ್ರ ಎಸೆತ ಮತ್ತು ಶಾಟ್ ಪುಟ್ ಸ್ಪರ್ಧೆಯಲ್ಲಿ ಸಾಧನೆ ,ಪಂಜದ ರವಿ ಕುಮಾರ್ ಚಳ್ಳಕೋಡಿ ರವರಿಗೆ ಪದಕ

ಕಲೆಯ ಸಿದ್ದಿಗೆ ತಾಳ್ಮೆ, ಗುರುವಿನ ಪ್ರೋತ್ಸಾಹ ಅಗತ್ಯ