ಕರಾವಳಿಸುಳ್ಯ

ನಾಳೆ ಈ ಸ್ಥಳಗಳಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ, ಪ್ರಯಾಣಿಕರೇ ಇತ್ತ ಗಮನಿಸಿ…

ನ್ಯೂಸ್ ನಾಟೌಟ್: ಮಾ.18 ರಂದು ಕೆ.ಎಸ್.ಆರ್.ಟಿ.ಸಿ. ಬಸ್ಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಮಡಿಕೇರಿಯಲ್ಲಿ ನಡೆಯುವ ಫಲಾನುಭವಿಗಳ ಸಮ್ಮೇಳನಕ್ಕೆ ಒಪ್ಪಂದದ ಮೇರೆಗೆ ಬಸ್ಸುಗಳನ್ನು ನಿಯೋಜಿಸಲಾಗುತ್ತಿದೆ.

ಈ ಹಿನ್ನಲೆ ಮಾರ್ಚ್ 18 ರಂದು ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆ, ಪುತ್ತೂರು, ಸುಳ್ಯ, ಕಡಬ ತಾಲೂಕುಗಳ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಕೆ.ಎಸ್.ಆರ್.ಟಿ.ಸಿ ನಿಗಮದ ಸಾರಿಗೆ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ ಸಂಭವಿಸಲಿದೆ.ಪ್ರಯಾಣಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹಕರಿಸುವಂತೆ ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದ ವಿಭಾಗೀಯಾ ನಿಯಂತ್ರಣಾಧಿಕಾರಿ ಬಿ. ಜಯಕರ ಶೆಟ್ಟಿ ಅವರು ಕೋರಿದ್ದಾರೆ.

Related posts

ಸುಳ್ಯ: ಪತ್ನಿ ಕೊಲೆಗೆ ಯತ್ನಿಸಿದ ಪತಿಯ ಬಂಧನ, ಹೆಂಡತಿಗೆ ಕಿರುಕುಳ ನೀಡಿದ ಕಿರಿಕ್ ಪತಿ ಅರೆಸ್ಟ್ ಆಗಿದ್ದು ಹೇಗೆ..?

ಆಂಬ್ಯುಲೆನ್ಸ್ -ರಿಕ್ಷಾ ನಡುವೆ ಅಪಘಾತ ನಾಲ್ವರಿಗೆ ಗಂಭೀರ ಗಾಯ

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ, ತಪ್ಪಿದ ಅನಾಹುತ