ದೇಶ-ಪ್ರಪಂಚ

ಮಧ್ಯರಾತ್ರಿ ಪ್ರಿಯತಮೆಯನ್ನು ಭೇಟಿಯಾದ ಯುವಕ ತಪ್ಪಿಸಿಕೊಳ್ಳಲು ಓಡಿ ಬಾವಿಗೆ ಬಿದ್ದ !

ನ್ಯೂಸ್ ನಾಟೌಟ್:ಯುವಕನೊಬ್ಬ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಹೋಗಿ ಮನೆಯವರಿಗೆ ರೆಡ್ ಹ್ಯಾಂಡ್ ಸಿಕ್ಕಿ ಹಾಕಿಕೊಂಡ ಘಟನೆ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ನಡೆದಿದೆ.

ತನ್ನ ಪ್ರಿಯತಮೆಯ ನೆನಪಾಗಿ ರಾತ್ರಿ ವೇಳೆ ಆಕೆ ಮನೆಗೆ ನುಗ್ಗಿದ್ದಾನೆ.ಈ ವೇಳೆ ಉಂಟಾದ ಸದ್ದಿನಿಂದಾಗಿ ಮನೆಯವರು ಎಚ್ಚೆತ್ತಾಗ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಪರದಾಡಿದ್ದಾನೆ.ಅಲ್ಲಿನ ಗ್ರಾಮವೊಂದರ ಯುವಕ ಅದೇ ಗ್ರಾಮದಲ್ಲಿ ತಾನು ಪ್ರೀತಿಸುತ್ತಿದ್ದ ಯುವತಿ ಮನೆಗೆ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಭೇಟಿ ನೀಡಿದ್ದಾನೆ.ಇವರಿಬ್ಬರೂ ಏಕಾಂತದಲ್ಲಿ ಮಾತನಾಡುತ್ತಿದ್ದ ವೇಳೆ ಆಕೆಯ ಕುಟುಂಬಸ್ಥರಿಗೆ ಎಚ್ಚರವಾಗಿದೆ. ಆಗ ಗಾಬರಿಗೊಂಡ ಆತ ತಪ್ಪಿಸಿಕೊಳ್ಳಲು ಓಡಿದ್ದು, ತೆರೆದ ಬಾವಿಗೆ ಬಿದ್ದಿದ್ದಾನೆ. ಈ ಗಲಾಟೆಯಿಂದ ಅಕ್ಕಪಕ್ಕದ ಮನೆಯವರು ಸಹ ಎಚ್ಚೆತ್ತಿದ್ದು ಬಾವಿಯ ಸುತ್ತಲೂ ಸೇರಿದ್ದಾರೆ. ಕಡೆಗೂ ಕಷ್ಟಪಟ್ಟು ಆತನನ್ನು ಮೇಲಕ್ಕೆ ಎತ್ತಲಾಗಿದೆ.

Related posts

ಹೆಚ್ಚೆಚ್ಚು ಮಕ್ಕಳನ್ನು ಮಾಡ್ಕೊಳ್ಳಿ, ಮೋದಿ ಮನೆ ಕಟ್ಟಿಸಿಕೊಡ್ತಾರೆ..!ಏನಿದು ರಾಜಸ್ಥಾನ ಸಚಿವನ ವಿವಾದದ ಹೇಳಿಕೆ?

ಚೀನಾ ಸೂಪರ್‌ ಮಾರ್ಕೆಟ್‌ ನಲ್ಲಿ ಡಾ.ರಾಜ್‌ಕುಮಾರ್‌ ಅಭಿನಯದ ಗಂಧದ ಗುಡಿ ಚಿತ್ರದ ಹಾಡು..! ಏನಿದು ವೈರಲ್ ವಿಡಿಯೋ..?

ವೈದ್ಯರ ಚೀಟಿ ಓದಲು ಕಷ್ಟವಾಗುತ್ತಿದೆಯಾ? ಇನ್ಮುಂದೆ ಸುಲಭವಾಗಿ ಓದಬಹುದು..ಅದು ಹೇಗೆ?