Latestಕರಾವಳಿದೇಶ-ವಿದೇಶರಾಜ್ಯವೈರಲ್ ನ್ಯೂಸ್

ಮಂಗಳೂರು: ತಿರುಮಲ-ತಿರುಪತಿ ದೇವಸ್ಥಾನದಿಂದ ಬರೋಬ್ಬರಿ 10 ಲಕ್ಷ ಕೆಜಿ ನಂದಿನಿ ತುಪ್ಪಕ್ಕೆ ಬೇಡಿಕೆ..! ಬೇರೆ ಯಾವುದೇ ಕಂಪನಿಯ ತುಪ್ಪ ಬೇಡ ಎಂದ ಟಿಟಿಡಿ..!

392

ನ್ಯೂಸ್ ನಾಟೌಟ್ : ಮಂಗಳೂರಿನ ಮೂಲದ KMF ಉತ್ಪನ್ನಗಳಿಗೆ ತಿರುಮಲ ತಿರುಪತಿ ದೇವಸ್ಥಾನಂನಿಂದ(TTD) ನಂದಿನಿ ತುಪ್ಪಕ್ಕೆ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಈಗ ಬರೋಬ್ಬರಿ 10 ಲಕ್ಷ ಕೆ.ಜಿ ತುಪ್ಪಕ್ಕೆ ಟಿಟಿಡಿ ಬೇಡಿಕೆ ಇಟ್ಟಿದೆ.
ನಂದಿನಿ ತುಪ್ಪ ಹೊರತುಪಡಿಸಿ ಬೇರೆ ಯಾವುದೇ ತುಪ್ಪ ಬೇಡ ಎಂದು ಟಿಟಿಡಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಮಹಾಮಂಡಳ (KMF) ತಿರುಪತಿಗೆ ಅಗತ್ಯ ತುಪ್ಪವನ್ನು ಕಳುಹಿಸಿಕೊಟ್ಟಿದೆ.

ಸೋಮವಾರ ಒಂದೇ ದಿನ ತಿರುಪತಿಗೆ (Tirupati) 2.50 ಲಕ್ಷ ಕೆಜಿ ತುಪ್ಪವನ್ನು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ(ಕಹಾಮ) ಬಿಗಿ ಭದ್ರತೆಯೊಂದಿಗೆ ಕಳುಹಿಸಿಕೊಟ್ಟಿದೆ.
ಮೊದಲ ಭಾಗವಾಗಿ ಮಂಡ್ಯದ ಹಾಲು ಒಕ್ಕೂಟದಿಂದ ತುಪ್ಪ ಪೊರೈಕೆ ಮಾಡಿದ್ದು ಇನ್ನುಳಿದ ತುಪ್ಪವನ್ನು ಇತರೇ ಮಹಾ ಮಂಡಳಿಯಿಂದ ಕೆಎಂಎಫ್‌ ಕಳುಹಿಸಿ ಕೊಡಲಿದೆ. ತಿರುಪತಿ ಅಗತ್ಯಕ್ಕೆ ತಕ್ಕಂತೆ ನಂದಿನಿ ತುಪ್ಪ ಪೂರೈಕೆ ಮಾಡುವುದಾಗಿ ಕೆಎಂಎಫ್‌ ತಿಳಿಸಿದೆ.

ತಿರುಪತಿಯ ಲಡ್ಡುಗೆ ಮೊದಲು ಕೆಎಂಎಫ್‌ ನಿಂದಲೇ ತುಪ್ಪ ಸರಬರಾಜು ಆಗುತ್ತಿತ್ತು. ಆದರೆ ಕೆಎಂಎಫ್‌ ತುಪ್ಪದ ಬೆಲೆ ಜಾಸ್ತಿ ಆಗಿದೆ ಎಂಬ ಕಾರಣ ನೀಡಿ ಜಗನ್‌ ಸರ್ಕಾರ ಖಾಸಗಿ ಡೈರಿಯಿಂದ ತುಪ್ಪ ಖರೀದಿ ಮಾಡಿತ್ತು.

ಆಂಧ್ರದಲ್ಲಿ ಟಿಟಿಡಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಿರುಪತಿ ಲಡ್ಡಿನಲ್ಲಿ ಬಳಸುವ ತುಪ್ಪ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ತುಪ್ಪ ಖರೀದಿ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದೆ. ಕಳಪೆ ಗುಣಮಟ್ಟದ ಹಾಗೂ ಕಲಬೆರಕೆಯಾದ ತುಪ್ಪವನ್ನು ಪೂರೈಕೆ ಮಾಡಲಾಗಿದೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದರು.
ಆರೋಪದ ಬಳಿಕ ಟಿಟಿಡಿ ಖಾಸಗಿ ಡೈರಿಯಿಂದ ತುಪ್ಪ ಖರೀದಿ ಮಾಡುವುದನ್ನು ನಿಲ್ಲಿಸಿ ಕೇವಲ ಕೆಎಂಎಫ್‌ನಿಂದಲೇ ತುಪ್ಪ ಖರೀದಿಗೆ ಮುಂದಾಗಿದೆ.  

ಮಂಗಳೂರು: ಗಲ್ಫ್ ಗೆ ತೆರಳಿದ್ದ ವಿಮಾನಗಳು ವಾಪಸ್..! ಉದ್ವಿಗ್ನತೆಯಿಂದ ವಾಯುಪ್ರದೇಶ ಬಂದ್..!

ಕಾರು ಓವರ್​ ಟೇಕ್ ವಿಚಾರಕ್ಕೆ ಅನಂತ್ ಕುಮಾರ್ ಹೆಗಡೆ ವಿರುದ್ಧ ಎಫ್ ​ಐಆರ್..! ಮಾಜಿ ಸಂಸದರ ಗನ್ ಮ್ಯಾನ್ ಗನ್ ತೋರಿಸಿ ಬೆದರಿಕೆ ಆರೋಪ..!

See also  ಕೊಡಗಿನ ಕಾಫಿ ಎಸ್ಟೇಟ್ ನಲ್ಲಿ ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ..! ಮಂಗಳೂರಿನಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget