Latestಕ್ರೈಂರಾಜಕೀಯರಾಜ್ಯ

ಕಾರು ಓವರ್​ ಟೇಕ್ ವಿಚಾರಕ್ಕೆ ಅನಂತ್ ಕುಮಾರ್ ಹೆಗಡೆ ವಿರುದ್ಧ ಎಫ್ ​ಐಆರ್..! ಮಾಜಿ ಸಂಸದರ ಗನ್ ಮ್ಯಾನ್ ಗನ್ ತೋರಿಸಿ ಬೆದರಿಕೆ ಆರೋಪ..!

526

ನ್ಯೂಸ್ ನಾಟೌಟ್: ಕಾರ್​ ಓವರ್​ ಟೇಕ್​ ವಿಚಾರಕ್ಕೆ ಗಲಾಟೆ ಸಂಬಂಧ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ದಾಬಸ್ ಪೇಟೆ ಠಾಣೆಯಲ್ಲಿ ಎಫ್ ​ಐಆರ್​ ದಾಖಲಾಗಿದೆ.
ಪ್ರಕರಣದಲ್ಲಿ ಎ-1 ಆಗಿರುವ ಅನಂತ್ ಕುಮಾರ್ ಹೆಗಡೆ. ಎ-2 ಅನಂತ್ ಕುಮಾರ್ ಹೆಗಡೆ ಗನ್ ಮ್ಯಾನ್. ಎ-3- ಅನಂತ್ ಕುಮಾರ್ ಹೆಗಡೆ ಕಾರಿನ ಡ್ರೈವರ್ ಹೆಸರನ್ನ ಉಲ್ಲೇಖಿಸಲಾಗಿದೆ.

ಖುದ್ದು ಅನಂತ್ ಕುಮಾರ್ ಹೆಗಡೆ ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅನಂತ್ ಕುಮಾರ್ ಹೆಗಡೆಯ ಗನ್ ಮ್ಯಾನ್ ಗನ್ ತೋರಿಸಿ ಬೆದರಿಸಿದ್ದಾರೆ. ನಿಮ್ಮನ್ನ ಶೂಟ್ ಮಾಡ್ತೀನಿ ಅಂದಿರೋದು FIR ನಲ್ಲಿ ಉಲ್ಲೇಖವಾಗಿದೆ. ಸೆಕ್ಷನ್ 117 (2), 126 (2), 74, 351 , 352 ಬಿಎನ್​ಎಸ್ ಅಡಿ ದೂರು ದಾಖಲಿಸಿದ್ದೀವಿ ಅಂತ ಬೆಂಗಳೂರು ಗ್ರಾಮಾಂತರ ಎಸ್​ಪಿ ಸಿ.ಕೆ ಬಾಬ ಮಾಹಿತಿ ನೀಡಿದ್ದಾರೆ.

ನೆಲಮಂಗಲ ತಾಲೂಕಿನ ಹಳೇ ನಿಜಗಲ್ ಬಳಿ ಕಾರು ಓವರ್ ಟೇಕ್ ಮಾಡಿರೋ ವಿಚಾರಕ್ಕೆ ಗಲಾಟೆ ನಡೆದಿದ್ದು, ಈ ವೇಳೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಗನ್ ಮ್ಯಾನ್ ಹಾಗೂ ಚಾಲಕ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಇನೋವಾ ಕಾರು ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಕಾರನ್ನ ಓವರ್ ಟೇಕ್ ಮಾಡಿದ್ದಕ್ಕೆ ಗಲಾಟೆ ನಡೆದಿದೆ. ಅನಂತ್ ಕುಮಾರ್ ಹೆಗಡೆ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಾಯಾಳುಗಳು ದಾಬಸ್ ಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನೆಲಮಂಗಲ ಗ್ರಾಮಾಂತರ ಠಾಣಾ ಡಿವೈಎಸ್​ಪಿ ಕಛೇರಿಯಲ್ಲಿ ಅನಂತ್ ಕುಮಾರ್ ಹೆಗಡೆಯ ವಿಚಾರಣೆ ನಡೆದಿದೆ.

ಇಸ್ರೇಲ್‌ – ಇರಾನ್‌ ಸಂಘರ್ಷದಿಂದ ಭಾರತದ ಅಕ್ಕಿ ರಫ್ತಿನ ಮೇಲೆ ಭಾರೀ ಹೊಡೆತ..! ಭಾರತದ ಬಂದರುಗಳಲ್ಲೇ ಉಳಿದ 1 ಲಕ್ಷ ಟನ್ ಬಾಸ್ಮತಿ ಅಕ್ಕಿ..!

See also  ಹಿಂದು ಯುವಕನ ಬರ್ಬರ ಕೊಲೆ! ಮೂವರು ಒಂದೇ ಅಪಾರ್ಟಮೆಂಟ್‌ನ ಒಂದೇ ರೂಂನಲ್ಲಿದ್ದವರು..!
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget