ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಕೇರಳ: ಮನೆಯೊಂದರ ಹಿಂದೆ ನಿಗೂಢವಾಗಿ ಹುಲಿಯ ಶವ ಪತ್ತೆ..! ಹೊಟ್ಟೆಯೊಳಗೆ ಮಹಿಳೆಯ ಕಿವಿಯೋಲೆ, ಕೂದಲು, ಬಟ್ಟೆ ಸಿಕ್ಕಿದೆ ಎಂದ ಅಧಿಕಾರಿಗಳು..!

ನ್ಯೂಸ್ ನಾಟೌಟ್: ಕೇರಳದಲ್ಲಿ ಎರಡು ದಿನಗಳ ಹಿಂದೆ ಮಹಿಳೆಯೊಬ್ಬರನ್ನು ಕೊಂದಿದ್ದ ನರಭಕ್ಷಕ ಹುಲಿ ಶವವಾಗಿ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹುಲಿಯ ಹೊಟ್ಟೆಯಲ್ಲಿ ಮಹಿಳೆಯ ಕೂದಲು, ಬಟ್ಟೆ, ಕಿವಿಯೋಲೆ ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಕಾಫಿ ಬೀಜ ಸಂಗ್ರಹಿಸಲು ತೆರಳಿದ್ದ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿತ್ತು.

ನಾಲ್ಕರಿಂದ ಐದು ವರ್ಷ ವಯಸ್ಸಿನ ಹೆಣ್ಣು ಹುಲಿಯನ್ನು ಸೋಮವಾರ(ಜ.27) ಬೆಳಗ್ಗೆ ವನ್ಯಜೀವಿ ಸಿಬ್ಬಂದಿಯ ತಂಡ ಗುರುತಿಸಿ ಬೆನ್ನಟ್ಟಿದ್ದು, ನಂತರ ಪಿಲಕಾವುವಿನ ಜನನಿಬಿಡ ಪ್ರದೇಶದ ಮನೆಯೊಂದರ ಹಿಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಳಿಕ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ಅರಣ್ಯ ಅಧಿಕಾರಿಗಳು ಹುಲಿಯ ಕುತ್ತಿಗೆಯಲ್ಲಿ ಹೊಸತಾದ ಮತ್ತು ಆಳವಾದ ಗಾಯಗಳು ಪತ್ತೆಯಾಗಿದ್ದು ಅದು ಸಾವಿಗೆ ಕಾರಣವಾಗಿರಬಹುದು ಎನ್ನಲಾಗಿದೆ.

ಕಾಡಿನಲ್ಲಿ ಮತ್ತೊಂದು ಹುಲಿಯೊಂದಿಗೆ ಕಾದಾಟದ ಸಂದರ್ಭದಲ್ಲಿ ಈ ಗಾಯಗಳು ಸಂಭವಿಸಿವೆ ಎಂದು ಹೇಳಲಾಗುತ್ತಿದೆ. ಶನಿವಾರ ಪಂಚರಕೋಲಿ ಪ್ರದೇಶದಲ್ಲಿ ರಾಧಾ ಎಂಬ ಮಹಿಳೆಯನ್ನು ಕೊಂದಿದ್ದು ಇದೇ ಹುಲಿ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಹುಲಿಯ ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯ ಕೂದಲು, ಬಟ್ಟೆ ಮತ್ತು ಕಿವಿಯೋಲೆಗಳು ಅದರ ಹೊಟ್ಟೆಯಲ್ಲಿ ಪತ್ತೆಯಾಗಿವೆ.ಕರ್ನಾಟಕದ ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗೆ ಹೊಂದಿಕೊಂಡಂತೆ ಇರುವ ವಯನಾಡು ಜಿಲ್ಲೆಯಲ್ಲಿ ಹುಲಿ ಗದ್ದಲ ಮೂರು ದಿನದಿಂದ ಜೋರಾಗಿತ್ತು.

https://newsnotout.com/2025/01/key-pad-mobile-phone-issue-hospital-hjd/

Related posts

ಐಎಎಸ್‌ ಅಧಿಕಾರಿಯ ಮನೆಯಲ್ಲಿ ನೆಲೆಸಿದ್ದನಾ ಪಾಕ್‌ ಪರ ಘೋಷಣೆ ಕೂಗಿದ್ದ ಮುನಾವರ್..? ಮನೆಗೆ ಬೀಗ ಹಾಕಿ ತೆರಳಿದ ಕುಟುಂಬಸ್ಥರು..!

ಮಹಿಳೆಗೆ ನಾಯಿ ಕಚ್ಚಿದಾಗ ಸಿಸಿಟಿವಿ ವರ್ಕ್‌ ಆಗ್ತಿರಲಿಲ್ಲ ಎಂದದ್ದೇಕೆ? ಪೊಲೀಸರ ಮುಂದೆ ನಟ ದರ್ಶನ್ ಕೊಟ್ಟ ಹೇಳಿಕೆಯೇನು?

ಮದ್ಯಪಾನ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ..! ದಿಢೀರ್ ನಿರ್ಬಂಧ ಹಿಂದಕ್ಕೆ ತೆಗೆದುಕೊಂಡ ಕರ್ನಾಟಕ ಸರ್ಕಾರ