ಕರಾವಳಿಕೊಡಗುಸುಳ್ಯ

ಮಡಿಕೇರಿ:ಹುಲಿ ದಾಳಿಗೆ ಹಸು ಬಲಿ,ಕಾಫಿ ತೋಟದಲ್ಲಿ ಕಳೆಬರ ಪತ್ತೆ:ಆತಂಕದಲ್ಲಿ ಸ್ಥಳೀಯರು..

ನ್ಯೂಸ್ ನಾಟೌಟ್ : ಹುಲಿ ದಾಳಿಯಿಂದ ಹಸುವೊಂದು ಬಲಿಯಾದ ಘಟನೆ ಪೊನ್ನಂಪೇಟೆ ತಾಲ್ಲೂಕು ಬೆಸಗೂರು ಗ್ರಾಮದಿಂದ ವರದಿಯಾಗಿದೆ. ಸ್ಥಳೀಯ ನಿವಾಸಿ ಬಲ್ಲಿಮಾಡ ಸಂಪತ್ ಅವರಿಗೆ ಸೇರಿದ ಹಸು ಇದಾಗಿದೆ ಎಂದು ತಿಳಿದು ಬಂದಿದೆ.

ಪ್ರತಿ ದಿನ ಕಾಫಿ ತೋಟಕ್ಕೆ ತೆರಳಿ ವಾಪಾಸ್ಸಾಗುತ್ತಿದ್ದ ಹಸು ಆ ದಿನ ಬಂದೇ ಇರಲಿಲ್ಲ.ಇದರಿಂದ ಗಾಬರಿಗೊಂಡ ಮನೆಯವರು ಹಸುವನ್ನು ಹುಡುಕಾಡಲು ಶುರು ಮಾಡಿದ್ದಾರೆ.ಆದರೆ ಎಷ್ಟೇ ಹುಡುಕಾಡಿದರೂ ಹಸು ಪತ್ತೆಯಾಗಿರಲಿಲ್ಲ.ಮನೆಯವರು ನಾಪತ್ತೆಯಾದ ಹಸುವಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಹಸುವಿನ ಕಳೇಬರ ಕಾಫಿ ತೋಟದಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಹಸುವನ್ನು ಹುಡುಕುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊನ್ನಂಪೇಟೆ ವಿಭಾಗದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದಲ್ಲಿ ಆತಂಕ ಮೂಡಿಸಿರುವ ಹುಲಿಯನ್ನು ತಕ್ಷಣ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Related posts

ಪ್ರವಾಸಿ ತಾಣ ರಾಜಾಸೀಟ್ ಗೆ ನುಗ್ಗಿದ ಕಳ್ಳನಿಗೆ ಕಾದಿತ್ತು ಭಾರಿ ಶಾಕ್..!

ಮೂವರು ಕ್ರೈಸ್ತ ಧರ್ಮಗುರುಗಳು ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಸುಳ್ಯದ ಚರ್ಚ್ ನಿಂದ ಪುತ್ತೂರಿಗೆ ಹೋಗುತ್ತಿದ್ದಾಗ ಘಟನೆ

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ  ಪುತ್ತಿಲ ಪರಿವಾರಕ್ಕೆ ಜಯ