ಮಡಿಕೇರಿ: ಕತ್ತಲಾಗುತ್ತಿದ್ದಂತೆ ಕೈ ಚಳಕ ತೋರಿಸುವ ಕಳ್ಳರಿಗೆ ಆ ದಿನ ಏನಾದರೂ ಫುಲ್ ಮಿಲ್ಸ್ ಸಿಕ್ಕಿದರಷ್ಟೇ ಮನಸ್ಸಿಗೆ ಏನೋ ಒಂಥರ ಖುಷಿ, ನೆಮ್ಮದಿ. ಆದರೆ ಇಲ್ಲೊಬ್ಬ ಕಳ್ಳ ಕದಿಯಲು ಡಿಫರೆಂಟ್ ಆದ ಜಾಗವನ್ನೇ ಆಯ್ಕೆ ಮಾಡಿಕೊಂಡಿದ್ದಾನೆ. ಸಾಮಾನ್ಯವಾಗಿ ಕಳ್ಳತನಕ್ಕೆ ಮನೆ, ಅಂಗಡಿ, ಶಾಪಿಂಗ್ ಮಾಲ್ ಆರಿಸುತ್ತಾರೆ. ಆದರೆ ಈ ಕಳ್ಳ ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ರಾಜಾಸೀಟ್ ನ ಟಿಕೆಟ್ ಕೌಂಟರ್ ನಿಂದಲೇ ಹಣ ಎಗರಿಸುವ ಪ್ಲಾನ್ ಮಾಡಿದ್ದ. ಅಂದುಕೊಂಡಂತೆ ಕೌಂಟರ್ ನೊಳಗೆ ನುಗ್ಗಿದ್ದಾನೆ. ಒಳಗೆ ಹೋದ ಅವರಿನಿಗೆ ಶಾಕ್ ಕಾದಿತ್ತು. ಎಷ್ಟೇ ಹುಡುಕಾಡಿದರೂ ಒಂದು ರೂಪಾಯಿಯೂ ಕೊಡ ಸಿಗಲಿಲ್ಲ. ಕೊನೆಗೆ ಪೆಚ್ಚು ಮೋರೆ ಹಾಕಿಕೊಂಡು ಬಂದ ದಾರಿ ಸುಂಕವಿಲ್ಲ ಅನ್ನುವಂತೆ ಹೊರ ನಡೆದಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಪೊಲೀಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.
previous post