ಕರಾವಳಿಕ್ರೈಂವೈರಲ್ ನ್ಯೂಸ್

ತುಳುನಾಡ ಪ್ರಸಿದ್ಧ ಹುಲಿವೇಷಧಾರಿ ಇನ್ನಿಲ್ಲ..! 36 ವರ್ಷಗಳಿಂದ ಸತತ ಹುಲಿವೇಷದಲ್ಲಿ ಭಾಗಿ

ನ್ಯೂಸ್ ನಾಟೌಟ್: ಉಡುಪಿಯ ಹುಲಿವೇಷ ತಂಡವೊಂದರ ಮುಖ್ಯಸ್ಥ, ಸಾಮಾಜಿಕ ಕಾರ್ಯಕರ್ತ ಅಶೋಕ್‌ರಾಜ್ ಕಾಡಬೆಟ್ಟು (56) ದೀರ್ಘಕಾಲದ ಅಸೌಖ್ಯದ ಬಳಿಕ ಫೆ.1 ರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ವರ್ಷ ನವರಾತ್ರಿಯ ಸಂದರ್ಭದಲ್ಲಿ ಹುಲಿವೇಷ ಪ್ರದರ್ಶನ ನೀಡಲು ಬೆಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಕಾರ್ಯ ಕ್ರಮ ಆಯೋಜಿಸುತ್ತಿರುವಾಗಲೇ ಕುಸಿದು ಬಿದ್ದ ಅಸ್ವಸ್ಥರಾಗಿದ್ದ ಅಶೋಕ್‌ರಾಜ್ ಮೊದಲು ಬೆಂಗಳೂರು ಬಳಿಕ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

‘ಟೈಗರ್ ಅಶೋಕ್’ ಎಂದೇ ಜನಪ್ರಿಯರಾಗಿದ್ದ ಅಶೋಕ್‌ ರಾಜ್, ಹುಲಿವೇಷಧಾರಿಯಾಗಿ ಹುಲಿವೇಷ ಕುಣಿತದಲ್ಲಿ ತಮ್ಮದೇ ಆದ ಹೊಸ ಛಾಪನ್ನು ಮೂಡಿಸಿದ್ದರು. ಕಳೆದ 26 ವರ್ಷಗಳಿಂದ ಹುಲಿವೇಷ ತಂಡ ಕಟ್ಟಿಕೊಂಡು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಸರು ಮಾಡಿದ್ದರು. ಹುಲಿವೇಷ ಧರಿಸಿ ಕಳೆದ 36 ವರ್ಷಗಳಿಂದ ಸತತವಾಗಿ ಪ್ರತಿ ಅಷ್ಟಮಿ ಹಾಗೂ ನವರಾತ್ರಿ ಸಂದರ್ಭಗಳಲ್ಲಿ ಉಡುಪಿಯಲ್ಲಿ ಹುಲಿಯ ಎಲ್ಲಾ ಸಾಂಪ್ರದಾಯಿಕ ಧೀರೋದ್ದಾತ ನರ್ತನದ ಮೂಲಕ ಜನರನ್ನು ರಂಜಿಸುತಿದ್ದರು.

ಇತ್ತೀಚೆಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಅವರನ್ನು ಸೇರಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು ಎಂದು ಎನ್ನಲಾಗಿದೆ.

Related posts

ಮೋದಿಯ ಮೊದಲ ಸಂಪುಟ ಸಭೆಯಲ್ಲಿ ಸಹಿ ಹಾಕಿದ ಯೋಜನೆ ಯಾವುದು..? ಬಡವರಿಗೆ ಪ್ರಧಾನಿ ಬಂಪರ್ ಗಿಫ್ಟ್ ಕೊಟ್ರಾ..? ಇಲ್ಲಿದೆ ಸಂಪೂರ್ಣ ಮಾಹಿತಿ

ಕೈಕಾಲು ಕಟ್ಟಿದ ರೀತಿಯಲ್ಲಿ ಮಹಿಳೆಯ ಕೊಳೆತ ಶವ ಪತ್ತೆ..! ಆಕೆಯ ಕಿವಿಯೋಲೆ ಬಿಚ್ಚಿಟ್ಟ ಭಯಾನಕ ಸ್ಟೋರಿ ಇಲ್ಲಿದೆ

ರಾಸಲೀಲೆ: ಯುವಕ-ಯುವತಿ ಪೊಲೀಸ್ ವಶಕ್ಕೆ