ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಿಂದ ಬಜರಂಗದಳದ ಮೂವರು ಕಾರ್ಯಕರ್ತರು ಗಡಿಪಾರು..?, ಇಂದು DCP ಎದುರು ಹಾಜರಾಗಲು ಖಡಕ್ ಸೂಚನೆ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಿಂದ ಬಜರಂಗದಳದ ಮೂವರು ಕಾರ್ಯಕರ್ತರನ್ನು ಗಡಿಪಾರು ಮಾಡುವ ಚಿಂತನೆಯ ಬಗೆಗಿನ ನೋಟಿಸ್ ಒಂದು ಜಾರಿಗೊಳಿಸಲಾಗಿದೆ. ಅಂಶು ಕುಮಾರ್ (ಐಪಿಎಸ್) ವಿಶೇಷ ಕಾರ್ಯಾನಿರ್ವಾಹಕ ದಂಡಾಧಿಕಾರಿ ಮತ್ತು ಉಪ ಪೊಲೀಸ್ ಆಯುಕ್ತ ಕಾನೂನು ಮತ್ತು ಸುವ್ಯವಸ್ಥೆ ಮಂಗಳೂರು ನಗರ ಇವರು ಹೊರಡಿಸಿದ ಆದೇಶದಲ್ಲಿ ಇಂತಹದ್ದೊಂದು ಪ್ರಸ್ತಾವನೆಯನ್ನು ಮಾಡಿದ್ದಾರೆ. ಇಂದು ಡಿಸಿಪಿ ಎದುರು ಮೂವರು ಬಜರಂಗದಳ ಕಾರ್ಯಕರ್ತರಿಗೆ ಹಾಜರಾಗಲು ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಬಜರಂಗದಳ ಕಾರ್ಯಕರ್ತರನ್ನು ಒಂದು ವರ್ಷದ ಮಟ್ಟಿಗೆ ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಇತ್ತೀಚೆಗೆ ನಡೆದ ಎರಡು ನೈತಿಕ ಪೊಲೀಸ್ ಗಿರಿ ಕೇಸ್ ನಲ್ಲಿ ಮೂವರ ವಿರುದ್ಧ ದೂರು ದಾಖಲಾಗಿತ್ತು.

ಸುಲ್ತಾನ್ ಜ್ಯುವೆಲ್ಲರಿ ಹಾಗೂ ಮರೋಳಿ ಹೋಳಿ ಆಚರಣೆ ವೇಳೆ ನೈತಿಕ ಪೊಲೀಸ್ ಗಿರಿ ನಡೆದಿತ್ತು ಎಂದು ಹೇಳಲಾಗಿದೆ. ಹೀಗಾಗಿ ಸ್ಥಳೀಯ ಠಾಣೆಗಳ ಇನ್ಸ್‌ಪೆಕ್ಟರ್ ಗಳಿಂದ ಗಡಿಪಾರಿಗೆ ವರದಿ ನೀಡಲಾಗಿದೆ. ಇದೀಗ ನೋಟಿಸ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು, ಗಡಿಪಾರು ಮಾಡುವ ಸಾಧ್ಯತೆ ದಟ್ಟವಾಗಿದೆ.

Related posts

“ಕಾಂಗ್ರೆಸ್‌ನವರೇ ಹಿಂದೂಗಳು ಈಗ ಜಾಗೃತರಾಗಿದ್ದಾರೆ, ನಿಮ್ಮ ಒಲೈಕೆಯ ಆಟ ನಡೆಯಲ್ಲ” ಟ್ವಿಟ್ಟರ್‌ನಲ್ಲಿ ನಳಿನ್ ಕುಮಾರ್ ಕಟೀಲ್‌ ಕಿಡಿ

ಸುಳ್ಯ ಜಾತ್ರೆಯಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿಭಿನ್ನ ಅಭಿಯಾನ..!,ಶ್ವೇತ ಪಡೆಯ ಮಕ್ಕಳ ಸ್ವಚ್ಛತಾ ಜಾಗೃತಿಗೆ ಭಾರಿ ಶ್ಲಾಘನೆ

ತಡರಾತ್ರಿ ಬೃಹತ್ ಹೆಬ್ಬಾವು ಸೆರೆ